ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಶೋಭಾವನದಲ್ಲಿ ಮಲೇಶಿಯನ್ ತಳಿ ಸಿಹಿಹುಣಸೆ ಹಣ್ಣಿನ ಗಿಡವನ್ನು ಡಾ.ಎಂ.ಮೋಹನ ಆಳ್ವರಿಗೆ ನೀಡುವುದರ ಮೂಲಕ ಕೈಕಂಬದ ಸ್ಖಂಧಶ್ರೀ ಸೇವಾ ಸಮಿತಿ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವವನ್ನು ಆಚರಿಸಿತು.ಬಹರೈನ್ನಲ್ಲಿ ಉದ್ಯೋಗದಲ್ಲಿರುವ ಕಂದಾವರ ಮೋಹನ ಸಾಲ್ಯಾನ್ ಅವರು ಬೆಳೆಸಿದ ಗಿಡವನ್ನು ಸಸ್ಯ ಅಧ್ಯಯನ ಮಾಡುವವರಿಗೆ ಸದುಪಯೋಗವಾಗಲೆಂದು ಶೋಭಾವನಕ್ಕೆ ಸಮರ್ಪಿಸಿದ್ದೇವೆ ಎಂದು ಸ್ಕಂಧಶ್ರೀ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು. ಗಿಡವನ್ನು ಸ್ವೀಕರಿಸಿ ಮಾತನಾಡಿದ ಡಾ.ಎಂ.ಮೋಹನ ಆಳ್ವರು ಸೇವಾ ಸಂಸ್ಥೆಗಳು ಪ್ರಕೃತಿ ಪ್ರೀತಿಯ, ಸೇವಾ ಮನೋಭಾವದಿಂದ ಕಾರ್ಯವೆಸಗಬೇಕು. ಸ್ಕಂದಶ್ರೀಯ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದರು. ಈ ಸಂದರ್ಭದಲ್ಲಿ ಸ್ಕಂಧಶ್ರೀಯ ಅಧ್ಯಕ್ಷ ನವೀನ್ ಕೈಕಂಬ, ಪ್ರಕಾಶ್ ಕೈಕಂಬ, ಕಂದಾವರ ಮೋಹನ್ ಸಾಲ್ಯಾನ್, ಶೇಖರ್ ಶೆಟ್ಟಿಗಾರ್, ಭರತ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

0 comments:

Post a Comment