ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:43 PM

ಭಾವಸಿರಿ

Posted by ekanasu

ಸಾಹಿತ್ಯ

ಬಾ ಭಾವವೇ... ನನ್ನ ಜೀವದ ಹೊನ್ನ ಸಿರಿಯೇ...
ಬಾರೆನ್ನ ಭಾವ ನಿಧಿಯೇ
ಒಲಿದು ಬಾ ಜಡಜೀವದ ಸುರಾಮೃತವೇ
ಸುರಚಿತ ಜೀವದ ಶಾಂತಿ ಚೇತನವೇ ಬಾ...ಬರಡು ನೆಲದ ಮೇಲೆ ಹಸಿರು
ಬೆಳೆವ ಸ್ಫೂರ್ತಿಯೇ ಬಾ
ಬರಡು ಮನದ ಉಸಿರನುಳಿಸುವ
ಭಾವ ದೀಪ್ತಿಯೇ ಬಾ

ಬದುಕ ಜಂಜಡವ ಮರೆಸುವ
ಅಮೃತ ವರ್ಷಿಣಿಯೇ ಬಾ
ಕರುಣೆಯೇ ಮೈವೆತ್ತ
ಜೀವನ ರಶ್ಮಿಯೇ ಬಾ...

- ಸೌಮ್ಯ , ಸಾಗರ.

3 comments:

Anonymous said...

ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ಈ ನೆಲದ ನೆಲೆಯಲಿ ಮನಸು ಕುಣಿಯಲಿ
Deepak.

s.magod said...

nice

chandu sharma said...

wonderful soumya,,,

Post a Comment