ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಶ್ರೀಮದ್ವಾಲ್ಮೀಕಿರಾಮಾಯಣದ ಪುನರವತರಣ ಶ್ರೀ ರಾಮಕಥಾ ಕಾರ್ಯಕ್ರಮ ನಡೆಯಲಿದೆ.ಚಾತುರ್ಮಾಸ್ಯದ 4ಪಕ್ಷಗಳಲ್ಲಿ ಬಿದಿಗೆಯಿಂದ ನವಮಿಯವರೆಗೆ ಮಧ್ಯಾಹ್ನ 3.30ರಿಂದ ಸಂಜೆ 5.30ರ ವರೆಗೆ ಪರಮಪೂಜ್ಯ ಶ್ರೀಗಳವರು ಶ್ರೀ ರಾಮಕಥೆಯ ಪ್ರವಚನದ ಮೂಲಕ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ತತ್ವ,ಆದರ್ಶ , ಜೀವನ ಮೌಲ್ಯಗಳನ್ನು ಸಂದೇಶರೂಪದಲ್ಲಿ ಅನುಗ್ರಹಿಸಲಿದ್ದಾರೆ.


ಗೀತ,ನೃತ್ಯ, ಚಿತ್ರ, ಮರಳುಚಿತ್ರಗಳ ಸಮಗ್ರಮಾಧ್ಯಮಗಳ ಮೂಲಕ ಸಂಪನ್ನಗೊಳ್ಳುವ ಈ ರಾಮಥೆಯು ಶ್ರೀಮದ್ವಾಲ್ಮೀಕೀರಾಮಾಯಣದ ವಿವಿಧ ಪ್ರಸಂಗಗಳಿಗೆ ತಾತ್ವಿಕ ಹಿನ್ನಲೆಯ ಹೊಸ ಆಯಾಮವನ್ನು ನೀಡಲಿದೆ.ಸಮಸ್ತ ಭಕ್ತ ,ಶಿಷ್ಯ ವರ್ಗವೂ ಈ ರಾಮಕಥಾ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ , ಶ್ರೀಗಳ ಪ್ರವಚನದಿಂದ ಆತ್ಮಾನಂದ ಪಡೆಯುವ ರೀತಿ ನಿಜಕ್ಕೂ ಒಂದು ಅವಿಸ್ಮರಣೀಯ ಕಾರ್ಯಕ್ರಮ.

0 comments:

Post a Comment