ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:20 PM

ಚಿಂತಿಸಬೇಕಲ್ಲವೇ?

Posted by ekanasu

ಈ ಕನಸು ಅವಾರ್ಡ್

ಮುಂಜಾವಿನ ನಸುಕಿನಲ್ಲಿ
ಎದ್ದು ದೇವರನ್ನು
ಕಾಣುಲು ಮಡಿ-ಮೈಲಿಗೆ
ಎಂದು ಮೈಗೆ ಮಾತ್ರ
ಸೋಪು-ಶ್ಯಾಂಪೂ
ಹಾಕಿ ತೊಳೆಯುವ
ಇವರ ಮನಸ್ಸು
ಕಾಮ-ಕಾಮನೆಗಳ
ಗೂಡು...


ಸ್ವಚ್ಚ ಮನಸ್ಸುಗಳ
ಭಾವನೆಯನ್ನು
ಅರ್ಥಮಾಡಿಕೊಳ್ಳದ
ಹೆಸರಿಗೆ ಮಾತ್ರ
ಶುದ್ದಿಯಾಗಿರುವ
ಶುದ್ದಮಾನವರು,

ವೇದಶಾಸ್ತ್ರವ ಓದಿ
ಎಲ್ಲಾ ಜ್ಞಾನದ ಶಾಖೆಗಳನ್ನು
ತಿಳಿದೇವೆಂದು ಬೀಗುವವರು,
ಜಾತಿಯ ಹೆಸರಿನಲ್ಲಿ ಒಳಗಿರುವ
ಆತ್ಮವ ಅರ್ಥಮಾಡಿಕೊಳ್ಳದ,
ಭಾವ ಜೀವಿಯನ್ನು ನಿರ್ಜೀವಗೊಳಿಸುವ
ಅಮಾನವೀಯ ವ್ಯಕ್ತಿಗಳು...
ಮನಸ್ಸು ಮಾತ್ರ ಕಾಮ-ಕಾಮನೆಗಳ ಗೂಡು...

-ಮಲ್ಲಿಕಾಭಟ್ ಪರಪ್ಪಾಡಿ

0 comments:

Post a Comment