ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸ್ವಾತಂತ್ರ್ಯೋತ್ಸವ ವಿಶೇಷ

ಆಗಸ್ಟ್ 15 ಬಂತೆಂದರೆ ಎಲ್ಲೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ.ಅಷ್ಟೂ ದಿನ ದೇಶದ ಬಗೆಗೆ ಕಿಂಚಿತ್ತೂ ಗಮನವಿಲ್ಲದೆ ಆ ದಿನ ವೇದಿಕೆಯೇರಿ ಭಾಷಣ ಬಿಗಿಯೋ ಕರಾಮತ್ತು ನೋಡಿದರೆ ನಗು ಉಕ್ಕಿ ಬರುತ್ತದೆ.ಆಹಾ ದೇಶಪ್ರೇಮವೇ ನಮ್ಮ ರಾಜಕಾರಣಿಗಳಿಗೆ. ಇರಲಿ ಇಂದಿನ ಯುವ ಜನತೆ ದೇಶದ ಮುಂದಿನ ಶಕ್ತಿ ಎಂಬ ಮಾತಿದೆ. ಯುವ ಶಕ್ತಿ ಈ ದಿನವನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸನತ್ ಕುಮಾರ್ ಮಾಹಿತಿ ಕಲೆ ಹಾಕಿದ್ದಾರೆ.ಯಾರಿಗಿದೆ ಸ್ವಾತಂತ್ರ್ಯ..?

ಆಧುನಿಕತೆ ಎಷ್ಟೇ ಮುಂದುವರಿದರು ಅದು ಮೇಲ್ನೋಟಕ್ಕೆ ಮಾತ್ರ ಅದೇಷ್ಟೋ ಮಂದಿ ಅಮಾಯಕರು ಮುಗ್ಧ ಮಕ್ಕಳು ಮಹಿಳೆಯರು ಸಮಾಜಘಾತುಕರು ನಡೆಸುವ ದಬ್ಬಾಳಿಕೆಗೆ ನಲುಗುತ್ತಿದ್ದಾರೆ. ಇದಕ್ಕೆ ರಾಜಕೀಯವು ಹೊರತಲ್ಲ. ಸರ್ಕಾರದಿಂದ ಹೊರಡಿಸುವ ಕಾನೂನುಗಳು ಜನ ಸಾಮಾನ್ಯರಿಗೆ ಮಾತ್ರ ! ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅತ್ಯಂತ ಚಾಣಕ್ಷತೆಯಿಂದ ತಮ್ಮ ಕಾರ್ಯವನ್ನು ಮುಗಿಸಿಕೊಳ್ಳುವ ಮಂದಿ ಅದೆಷ್ಟೋ ! ಇದೇ ಇಂದಿನ ಸ್ವಾ(ಅ)ತಂತ್ರ್ಯ..! ಆಚರಣೆ ಕೇವಲ ಒಂದು ದಿನಕ್ಕೆ ಸಿಮೀತ. ಮತ್ತೆ ಮುಂದಿನ ವರ್ಷ ಹೀಗೇ ಇರುತ್ತೆ ಹೊರತು ಬದಲಾಗುವುದು ಕನಸು.. !
- ಮಮತಾ ,ಎಂ.ಸಿ.ಜೆ


ಅರ್ಥ ಕಳೆದು ಕೊಳ್ಳತ್ತಿವೆಯೇ...?

ದೇಶವು ತನ್ನ 64ನೇ ಸ್ವಾತಂತ್ರ ದಿನಾಚರಣೆಯನ್ನು ಎದುರು ನೋಡುತ್ತಿದೆ. ಈ ಬಾರಿಯ ಸ್ವಾತಂತ್ರ ದಿನಾಚರಣೆಯನ್ನು ಭರ್ಜರಿಯಾಗಿ ನಡೆಸಲು ಸರಕಾರ ಮುಂದಾಗಿದೆ. ಎಷ್ಟೇ ಭರ್ಜರಿಯಾಗಿ ಮಾಡಿದರು ಹಿಂದಿನ ಆಚರಣೆಯಷ್ಟು ಪರಿಣಾಮವಾಗುತ್ತಿಲ್ಲ. ಹಿಂದೆ ಒಂದು ಕಾಲವಿತ್ತು. ದೇಶದ ಬಗ್ಗೆ ಅಭಿಮಾನ, ದೇಶ ಪ್ರೇಮ ಹಾಗು ದೇಶಭಕ್ತಿ ಉಕ್ಕಿ ಹರಿಯುತ್ತಿತು. ಆದರೆ ಈಗಿನ ದಿನಗಳಲ್ಲಿ ಇಂತಹ ದೇಶ ಭಕ್ತಿ ಮಾಯವಾಗಿವೆ. ಈಗಿನ ಸ್ವಾತಂತ್ರ ದಿನಾಚರಣೆಗಳು ಕೇವಲ ಸರಕಾರಿ ಕಚೇರಿಗೆ ಮಾತ್ರ ಸೀಮಿತವಾಗಿದೆ. ಸ್ವಾತಂತ್ರ ದಿನಾಚರಣೆ ಬಂದರೆ ಸಾಕು ಒಂದು ದಿನದ ರಜೆಗಾಗಿ ಕಾಯುವವರೇ ಹೆಚ್ಚು. ರಜೆ ಸಿಕ್ಕರೆ ಸಾಕು ತಮ್ಮ ಪ್ರೀತಿ ಪಾತ್ರರ ಜೊತೆ ಮಜಾ ಉಡಾಯಿಸುವವರೇ ಜಾಸ್ತಿ. ಇದು ನಮ್ಮ ಈಗಿನ ಸ್ವಾತಂತ್ರ ದಿನಾಚರಣೆಯ ಪರಿ...!

- ಎಂ. ಮಾಣಿಕ್ಯ, ಸ್.ಡಿ.ಎಂ ಕಾಲೇಜ್


ಪರಂಪರೆ ಮುಂದುವರಿಯಲಿ...
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ. ಮತ್ತೊಮ್ಮೆ ಪರತಂತ್ರರಾಗಿ ಬಿಡುತೇವೇನೋ ಅನ್ನಿಸುತ್ತೆ ! ಸ್ವತಂತ್ರ ಅನ್ನುವ ಪದ ಎಲ್ಲೆ ಮೀರದೆ ಚೌಕ್ಕಟಿನ ಒಳಗಿರಲಿ. ಪರಂಪರೆ ನಡೆದು ಬಂದಾಗ ಮಾತ್ರ ನಿಜವಾದ ಸ್ವತಂತ್ರರಾಗಲು ಸಾಧ್ಯ
ಸ್ಮಿತಾ ಮಲ್ಲಿಪಟ್ಟಣ , ಎಂ.ಸಿ.ಜೆ

ಪ್ರದರ್ಶನದ ಆಚರಣೆಯಾಗದಿರಲಿ

65ನೇ ಸ್ವಾತಂತ್ರ್ಯೋವ ಸಂಭ್ರಮ ದೇಶದೆಲ್ಲೆಡೆ ಹರಡಿದೆ. ಅನೇಕ ವರುಷದ ಶ್ರಮದ ಸ್ವಾತಂತ್ರ್ಯೋತ್ಸವವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತ ಗೊಳಿಸಿದ್ದು ವಿಷಾಧನೀಯ.ಕೇವಲ ತೋರಿಕೆಯ ಸ್ವಾತಂತ್ರ್ಯ ಆಚರಣೆಯು ಆಗಿರದೆ ನಿತ್ಯವು ದೇಶ ಭಾಷೆಗಳ ಆಭಿಮಾನ ಹೃದಯಾಂತರದಲ್ಲಿ ಮೂಡಿರಲಿ.
ನವೀನ್ ಕೆ

ನೆನೆಯ ಬೇಕು ಮರೆತವರ
ಸ್ವಾತಂತ್ರ್ಯ ದಿನಾಚರಣೆಯ ಅರ್ಥ ಕಳೆದುಕೊಳ್ಳುತ್ತಿದೆಯಾ? ಎಲ್ಲೆಲೂ ಕಂಡುಬರುವ ಪ್ಲಾಸ್ಟಿಕ್ ಮಯ ವರ್ಣರಂಜಿತ ರಾಷ್ಟ್ರ ಧ್ವಜಗಳು ನಮ್ಮ ಅಸೆಡ್ಡೆಯ ಪ್ರತೀಕಗಳು. ಕೆಲವೊಂದು ಕಡೆ ಇದು ಕಸದ ಬುಟ್ಟಿಯನ್ನು ಸೇರುತ್ತಿರುವುದು ಬೇಸರದ ಸಂಗತಿ. ಆಚರಣೆಯ ನೆಪದಲ್ಲಿ ರಾಷ್ಟ್ರಕ್ಕೆ ಅಪಚಾರ ವೆಸಗುತ್ತಿದ್ದೇವೆ ನಾವು. ಇದಕ್ಕಿಂತಲೂ ಹೆಚ್ಚಾಗಿ ಸ್ವಾತಂತ್ರ್ಯ ಸ್ವೇಚ್ಚಾಚಾರವಾಗಿ ಬಿಟ್ಟಿದೆ. ಹೀಗಾದಾಗ ಅದು ತನ್ನ ನಿಜವಾದ ಅರ್ಥವನ್ನು ಕಳೆದುಕೊಂಡಂತೆಂಯೇ ಸರಿ. ಕೊನೇ ಪಕ್ಷ ಈ ದಿನವನ್ನಾದರು ದೇಶಕ್ಕಾಗಿ ಹೋರಾಡಿದ, ಶ್ರಮಿಸಿದ ಕಟ್ಟಾಳುಗಳನ್ನು ನೆನೆಯುವುದಕ್ಕೋಸ್ಕರ ಮೀಸಲಿಡಬೇಕು. ಸ್ವಾತಂತ್ರ್ಯವೆಂಬುದು ಒಂದಿಬ್ಬರ ಪರಿಶ್ರಮದ ಫಲವಲ್ಲ. ಅಸಂಖ್ಯಾತ ಬಾರತೀಯರ ಹೋರಾಟದ ಫಲ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತೆರೆಯ ಮರೆಯಲ್ಲೆ ಮಾಸಿಹೋದ ಆನೇಕ ಚೇತನಗಗಳನ್ನು ಸ್ಮರಿಸಿ, ನಮನ ಸಲ್ಲಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ...

- ಗಣಪತಿ ಶರ್ಮಇಂದು ನಾವು ಸ್ವಾತಂತ್ರ್ಯದಿನದಂದು ಧ್ವಜಾರೋಹಣ ಮಾಡುವಾಗಗ ಅದರಲ್ಲಿನ ಹೂವಿನ ದಳಗಗಳು ನೆಲಕ್ಕುರುಳುತ್ತವೆ. ಆದರೆ ಇಂದು ನಾವು ಈ ವೈಭವದ ಆಚರಣೆಯಲ್ಲಿ ಅದೆಷ್ಟೊ ರಕ್ತದ, ಕಣ್ಣೀರಿನ ಹನಿಗಗಳಿವೆ. ಅದೆಷ್ಟೋ ಪ್ರಾಣ ಪಕ್ಷಿಗಳು ದಾಸ್ಯ ವಿಮೋಚನೆಗಾಗಿ ಬಲಿಯಾದವು ಎಂಬುದನ್ನು ಮರೆತ್ತಿದ್ದೇವೆ. ಆದರೆ ನಮ್ಮ ದುರಾದೃಷ್ಟವೋ ಗೊತ್ತಿಲ್ಲ ಸ್ವಾತಂತ್ರ್ಯ ಸಿಕ್ಕಿ 64ವರ್ಷವಾದರೂ ನಮ್ಮ ದೇಶದ ಬಡತನ, ಸಾಮಾಜಿಕ ಸಮಾನತೆ, ಜಾತಿ ಪಿಡುಗಗುಳು ಪೂರ್ತಿಯಾಗಿ ಸರಿಯಾಗಿಲ್ಲ. ರಾಜಕಾರಣಿಗಳು 64 ವರ್ಷಗಳಿಂದ ಪ್ರಜೆಗಳ ಬೆವರಿನಿಂದ ಖುಷಿಪಟ್ಟು ದೇಶವನ್ನು ದೋಚಿ ಪರ ದೇಶದ ಬ್ಯಾಂಕುಗಳಲ್ಲಿ ಕೋಟಿ ಕೋಟಿ ಕೂಡಿ ಇಟ್ಟರು. ಇಂದು ಸ್ವಾತಂತ್ರ್ಯೊತ್ಸವ ಅಂದರೆ ಕೇವಲ ಗಾಂಧಿ ನೆಹರುಗಳ ಹೆಸರುಗಳನ್ನು ಹೇಳಿ ಸಿಹಿ ತಿಂಡಿ ಹಂಚಿ ಬಿಟ್ಟು ಬಿಡುತ್ತಾರೆ. ಕೆಲವರಿಗೆ ಇದೊಂದು ರಜಾದಿನ ಅಷ್ಟೇ. ಅವರಿಗೆ ಈ ದಿನದ ಮಹತ್ವವೂ ಗೊತ್ತಿಲ್ಲ.ಪಠ್ಯ ಪುಸ್ತಕಗಳಲ್ಲಿ ಉಲ್ಲೇಖ ಇಲ್ಲ...!
ದೀಕ್ಷಿತ್ ಡಿ.ವಿ,ಧರ್ಮಸ್ಥಳ


0 comments:

Post a Comment