ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ನವದೆಹಲಿ :ಭ್ರಷ್ಟಾಚಾರದ ವಿರುದ್ಧ ತೀವ್ರ ಸಮರ ಸಾರಿದ್ದ ಗಾಂಧೀವಾದಿ ಅಣ್ಣಾ ಹಜಾರೆ ಅವರಿಗೆ 7ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ ಭಾರತದಲ್ಲಿ ಜೈಲು ಅನುಭವಿಸಬೇಕಾಗುತ್ತದೆ ಎಂಬಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ. ಅಣ್ಣಾ ಹಜಾರೆ ಅವರನ್ನು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರನ್ನು 7 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಯಿತು. ಅಣ್ಣಾ ಅವರನ್ನು ತಿಹಾರ್ ಜೈಲಿಗೆ ಕಳಿಸಲಾಗಿದೆ. ನಿಷೇದಾಜ್ಞೆ ಉಲ್ಲಂಘಿಸುವುದಿಲ್ಲ ಎಂಬ ಷರತ್ತು ಪತ್ರಕ್ಕೆ ಸಹಿ ಹಾಕಲು ಒಪ್ಪದ ಹಿನ್ನಲೆಯಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಯಿತು.


'ನಾನು ಸಹಿ ಹಾಕಲಾರೆ. ಜೈಲಿಗೆ ಹೋಗಲು ಸಿದ್ಧ' ಎಂದು ಮ್ಯಾಜಿಸ್ಟ್ರೇಟ್ ವಿಶೇಷ ನ್ಯಾಯಾಧೀಶರಿಗೆ ಅಣ್ಣಾ ತನ್ನ ನೇರ ಉತ್ತರವನ್ನು ನೀಡಿದರು. ಅಣ್ಣಾ ಜೊತೆಗೆ ಅವರ ಐದು ಸಹಚರರನ್ನೂ ಜೈಲಿಗೆ ಕಳಿಸಲಾಗಿದೆ.
ಭ್ರಷ್ಟಾಚಾರದಲ್ಲಿ ಮುಳುಗಿದ್ದವರ ಜೊತೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನೂ ಜೈಲಿನಲ್ಲಿರಿಸಿದ್ದು ನಿಜಕ್ಕೂ ಖಂಡನಾರ್ಹ.ಅಣ್ಣಾರನ್ನು ಕೊಠಡಿ ಸಂಖ್ಯೆ 4ರಲ್ಲಿ ಸುರೇಶ್ ಕಲ್ಮಾಡಿ ಜತೆಗೂ ಅರವಿಂದ್ ಕೇಜ್ರಿವಾಲ ಅವರನ್ನು ಕೊಠಡಿ ಸಂಖ್ಯೆ 1ರಲ್ಲಿ ಮಾಜಿ ಸಚಿವ ಎ. ರಾಜಾ ಜತೆಗೂ ಬಂಧನದಲ್ಲಿಡಲಾಗುವುದು ಎಂದು ತಿಹಾರ್ ಜೈಲು ಅಧೀಕ್ಷಕರು ತಿಳಿಸಿದ್ದಾರೆ.

ಪ್ರತಿಭಟನೆ
ಅಣ್ಣಾ ಬಂಧನಕ್ಕೆ ತೀವ್ರ ಪ್ರತಿಭಟನೆ ರಾಷ್ಟ್ರಾದ್ಯಂತ ವ್ಯಕ್ತವಾಗಿದೆ. ಕರ್ನಾಟಕದಲ್ಲೂ ತೀವ್ರ ಪ್ರತಿಭಟನೆ ಕಂಡು ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಣ್ಣಾ ಬೆಂಬಲಿಗರು ಪ್ರತಿಭಟನೆ ಕೈಗೊಳ್ಳುತ್ತಿದ್ದಾರೆ. ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ , ಅಣ್ಣಾ ಹಜಾರೆ ಅವರನ್ನು ಬೆಂಬಲಿಸುವಂತೆ ಕೆಲವೊಂದು ಸಂಘಟನೆಗಳು ಕರೆ ನೀಡಿವೆ.

0 comments:

Post a Comment