ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಶಿಕಾರಿಪುರ: ನಿವೃತ್ತಿ ವೃತ್ತಿಗೆ ಮಾತ್ರವಾಗಿದ್ದು,ಪ್ರವೃತ್ತಿಗೆಂದೂ ನಿವೃತ್ತಿ ಇಲ್ಲವಾಗಿದೆ ಎಂದು ಜೆಎಂಎಫ್ಸಿ ನ್ಯಾಯಧೀಶ ಪದ್ಮಪ್ರಸಾದ್ ತಿಳಿಸಿದರು.
ಪೋಲಿಸ್ ಉಪಾಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ.ಪಿ.ವಿದ್ಯಾಶಂಕರ ಅವರಿಗೆ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಇಲಾಖೆ ವತಿಯಿಂದ ನಡೆದ ಬೀಳ್ಕೊಡಿಗೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.


ಸಮಾಜದಲ್ಲಿ ಎಲ್ಲಾ ವೃತ್ತಿಗಿಂತ ಪೋಲಿಸ್ ಇಲಾಖೆಯಲ್ಲಿನ ಸೇವೆ ಅತ್ಯಂತ ವಿಶೇಷವಾಗಿದ್ದು,ಸಮಾಜದ ಋಣ ತೀರಿಸುವಲ್ಲಿ ಇಲಾಖೆಯ ಮೂಲಕ ಹೆಚ್ಚಿನ ಅವಕಾಶ ಸಾದ್ಯ ಎಂದ ಅವರು ಸೇವಾವಧಿಯಲ್ಲಿನ ಹೆಚ್ಚಿನ ಸಮಯವನ್ನು ಅಧಿಕಾರಿಗಳು ಇಲಾಖೆ ಹಾಗೂ ಸಾರ್ವಜನಿಕರ ಜತೆ ಕಳೆಯಲಿದ್ದು ಈ ದಿಸೆಯಲ್ಲಿ ಉತ್ತಮವಾದ ಸೇವೆಗೆ ಕುಟುಂಬದ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದರು.


ವೃತ್ತ ನಿರೀಕ್ಷಕ ಟಿ.ವಿ.ಸುರೇಶ, ತಹಶೀಲ್ದಾರ್ ಶಿವಕುಮಾರ್ , ಪುಷ್ಪಾಶ್ರಮದ ಫಾಧರ್ ಕ್ಲೆಮೆಂಟ್ ಡಿಸೋಜ ,ಶ್ರೀಕಾಂತ್,ಪುರಸಭಾ ಮುಖ್ಯಾಧಿಕಾರಿ ರವೀಂದ್ರ,ಸೊರಬ ಸಿಪಿಐ ಲಿಂಗದಾಳ್, ಮಹಾದೇವಪ್ಪ,ಮುಸ್ಲಿಂ ಸಮಾಜದ ಅದ್ಯಕ್ಷ ಯೂಸೂಫ್ ಅಲಿ,ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅದ್ಯಕ್ಷ ಈಶ್ವರಪ್ಪ ಉಪಸ್ಥಿತರಿದ್ದರು.
ಶಾಂತಮ್ಮ ಪ್ರಾರ್ಥಿಸಿದರು. ,ಪಿಎಸ್ಸೈ ಹರೀಶ್ ಸ್ವಾಗತಿಸಿ,ಗುರುರಾಜ ಮೈಲಾರ್ ನಿರೂಪಿಸಿ ವಂದಿಸಿದರು.

0 comments:

Post a Comment