ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸದಾನಂದ ಗೌಡ ಆಯ್ಕೆಗೊಂಡಿದ್ದಾರೆ.

ಮುಂದಿನ ನಿಗಧಿತ ಅವಧಿಗೆ ಸದಾನಂದ ಗೌಡ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ. ಬುದ್ದಿವಂತರ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸದಾನಂದ ಗೌಡ ಈ ಹುದ್ದೆಗೇರಿದ್ದು ಕರಾವಳಿಯ ಜನತೆಯಲ್ಲಿ ಖುಷಿತಂದಿದೆ. ಹಲವು ಸವಾಲುಗಳೊಂದಿಗೆ ಈ ಹುದ್ದೆಯೇರಿದ ಗೌಡರು ಇದನ್ನು ನಿಭಾಯಿಸುವ ವಿಶ್ವಾಸ ಪಕ್ಷ ಹಾಗೂ ಜನತೆಗೆ ಇದೆ.ಆ.3ರಂದು ನಡೆದ ರಹಸ್ಯ ಮತದಾನದಲ್ಲಿ ಸದಾನಂದಗೌಡರು ಪ್ರತಿಸ್ಪರ್ಧಿ ಜಗದೀಶ್ ಶೆಟ್ಟರ್ ಅವರಿಗಿಂತ ಅಧಿಕ ಮತ ಪಡೆದುಕೊಂಡರು.
ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ಗೌಡರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದಾರೆ. ರಾಜ್ಯದಾದ್ಯಂತ ಇರುವ ಸದಾನಂದ ಗೌಡರ ಅಭಿಮಾನಿಗಳು ಪಕ್ಷ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮದಲ್ಲಿ ತೊಡಗಿದ್ದಾರೆ.

ವ್ಯಂಗ್ಯಚಿತ್ರ: ರಾಮ್ ಗೋಪಾಲ್

0 comments:

Post a Comment