ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕರ್ನಾಟಕದಲ್ಲಿ ಎರಡೆರಡು ಬಳ್ಳಾರಿ : ಮಾಯವಾದ ಮಂಡ್ಯ
ನಲಿ ಕಲಿಯ ಹೊಸ ರಾಜ್ಯ ನಕ್ಷೆ
ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆಯನ್ನೇ ನಾಪತ್ತೆಮಾಡಿ ಆ ಸ್ಥಳದಲ್ಲಿ ಇನ್ನೊಂದು ಬಳ್ಳಾರಿಯನ್ನು ತಂದಿಡುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡಿದೆ..!!! ಪ್ರಸ್ತುತ 3ನೇ ತರಗತಿಯ ಪರಿಸರ ಅಧ್ಯಯನದ ನಲಿ ಕಲಿ ಪುಸ್ತಕದ ಪುಟಗಳನೊಮ್ಮೆ ತಿರುವಿದಾಗ ಈ ಅಂಶ ಬೆಳಕಿಗೆ ಬಂದಿದ್ದು ಗಣಿದಣಿಗಳ ಪ್ರಭಾವವೆಂಬಂತೆ ಎರಡೆರಡು ಬಳ್ಳಾರಿ ಪ್ರತ್ಯಕ್ಷಗೊಂಡಿದೆ. ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆಯನ್ನೆ ಮರೆ ಮಾಚಲಾಗಿದೆ. ಮೈಸೂರು ಹಾಗೂ ರಾಮನಗರದ ನಡುವೆ ಬಳ್ಳಾರಿ ಚಿಲ್ಲೆಯನ್ನು ತಂದಿಡಲಾಗಿದ್ದ್ದು ಮಂಡ್ಯ ನಕಾಶೆಗೆ ಬಳ್ಳಾರಿ ಎಂದು ಮುದ್ರಿಸುವದರ ಜೊತೆಗೆ ಕೊಪ್ಪಳದ ಕೆಲಭಾಗದಲ್ಲಿಯೂ ಇನ್ನೋಂದು ನೈಜ ಬಳ್ಳಾರಿ ಚಿತ್ರಿಸಿ ನಗುವವರ ಮುಂದೆ ಜಾರಿ ಬಿದ್ದ ಪರಿಸ್ಥಿತಿ ಶಿಕ್ಷಣ ಇಲಾಖೆಯದ್ದಾಗಿದೆ.
ಉಚಿತವಾಗಿ ಪೂರೈಸುವ ಈ ಪುಸ್ತಕದ ಗುಣಮಟ್ಟವೂ ಕಳೆಪೆಯದಾಗಿದೆಯೆಂಬ ಮಾತು ಮುದ್ದು ವಿದ್ಯಾರ್ಥಿಗಳಿಂದ ಕೇಳಿ ಬಂದಿದ್ದು ವಿಶೇಷ. ಕೆಲ ಅಕ್ಷರ ಲೋಪಗಳು ಇದ್ದ ಬಗ್ಗೆಯೂ ತಿಳಿದು ಬಂದಿದೆಯಲ್ಲದೇ ಪುಸ್ತಕದ ಗುಣಮಟ್ಟ, ಅಕ್ಷರ ದೋಷ ಹಾಗೂ ಮುದ್ರಣ ದೋಷಗಳು ಶಿಕ್ಷಣ ಇಲಾಖೆಯ ಬೇಜವಬ್ದಾರಿಯನ್ನು ಎತ್ತಿಹಿಡಿದಿದೆ. ಕೆಲ ಪುಸ್ತಕಗಳಲ್ಲಿ ಪಾಲಕರೆ ತಪ್ಪನ್ನು ಪೆನ್ನಿನಿಂದ ತಿದ್ದಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿರುವ ಪ್ರಯತ್ನವೂ ಕಂಡುಬಂದಿದೆ.

ಏನಂತಾರೆ ಬಿ.ಇ.ಓ?
ಈ ಬಗ್ಗೆ ವರದಿಗಾರ ಕ್ಷೇತ್ರ ಶಿಕ್ಷಣಾಧಿಕಾರಿ ದಿವಾಕರ ಶೆಟ್ಟಿಯವರನ್ನು ಸಂಪರ್ಕಿಸಿದಾಗ ನಕಾಶೆಯಲ್ಲಿನ ಲೋಪದ ಬಗ್ಗೆ ತಮಗೂ ಅರಿವಿದ್ದು ತಪ್ಪನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ತಿಳಿಸುವಂತೆ ತಾಲೂಕಿನ ಶಿಕ್ಷಕರಿಗೆ ಸೂಚಿಸಿರುವದಾಗಿ ಮಾಹಿತಿ ರವಾನಿಸಿದ್ದಾರೆ.

ಅಚ್ಯುತಕುಮಾರ
ಯಲ್ಲಾಪುರ

0 comments:

Post a Comment