ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:49 PM

ಗಿಣಿ - ಗಣಿ - ಗಿಡುಗ

Posted by ekanasu

ವಿಚಾರ

ಕರ್ನಾಟಕದಲ್ಲಿ - ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಜನತಾ ಪಾರ್ಟಿ. ಸರಕಾರ - ಆಡಳಿತ - ಸೆಳೆತ - ಉಬ್ಬರ - ಭರತ - ಉಗ್ರ - ವ್ಯಾಘ್ರ, ಏನೆಲ್ಲ ಸೃಷ್ಟಿಯಲ್ಲಿ ಪರಾತ್ಪರ ನೀಡಿದ್ದಾನೋ - ಮಾಡಿದ್ದಾನೋ - ಮಾಡಿಸಿದ್ದಾನೋ ಅವೆಲ್ಲ ಆದವು - ಆಗಿಸಲ್ಪಟ್ಟವು - ಮುಗಿಸಲ್ಪಟ್ಟವು. ಈಗ ಕಡೇ ಆಟ - ಕವಡೆ ಆಟ ಎಲ್ಲಾ ಮಹಾನ್ ಜನತೆಯ ಕಣ್ಣ ಮುಂದೆಯೇ ಇದೆ.
ಮೊಳಕೆಯಲ್ಲಿ - ಭಾ.ಜ.ಪ.ಸರಕಾರದ - ಮೋಹ -ವ್ಯಾಮೋಹ - ದ್ರೋಹ ಯಾರ್ಯಾರಿಗೆ ಏನೇನು ಬೇಕೋ ಅವೆಲ್ಲ ಲಭ್ಯ - ಸಭ್ಯ - ದಿವ್ಯ ಆದವು.ಈಗ ಗಿಣಿ ಹೋಗಿ ಗಣಿಯಾಗಿ ಗುಣಿಯಾಗದೇ ಗಿಡುಗನಾಯಿತು.


ಗಿಡುಗ ಕೊಕ್ಕಿತು - ಕುಕ್ಕಿತು - ಗಬ್ಬನ್ನು ಕಕ್ಕಿತು
ಸುತ್ತೆಲ್ಲಾ ಪರಿಸರವೆಲ್ಲಾ ಕೆಟ್ಟಿತು - ಸುಟ್ಟಿತು.
ಇನ್ನೇನಿದೆ ಬೂದಿ ಬಿಟ್ಟರೆ ಸಂಪತ್ತು?
ಇದೇ ಆಪತ್ತು - ವಿಪತ್ತು - ಕುತ್ತು - ಆರು ಕೋಟಿ ಕನ್ನಡಿಗರಿಗೆ ಬಳುವಳಿ - ದುರಾಡಳಿತದಿಂದ ಉಪಲಬ್ಧ.
ಇದೇ ಪ್ರಾರಬ್ಧ ಕನ್ನಡ ನಾಡಿನ ಜನತೆಗೆ ಕೊಟ್ಟದ್ದು - ಕೆಟ್ಟದ್ದು.
ಭ.ಜ.ಪ ಸುವರ್ಣ ಮಾಡುತ್ತೇನೆಂದು - ನಿರ್ವರ್ಣ ಮಾಡಿತು.
ಕನ್ನಡದ ಸಂಪತ್ತನ್ನು ಕರ್ಣಭಾರಮಾಡಿ ಮುಗಿಸಿತು.
ಮಹಾಭಾರತದೊಂದಿಗೆ ಕರ್ಣಸತ್ತ.
ಈ ಭಾರತದಲ್ಲಿ ಕನ್ನಡದ - ಕರುಣರು ಸಾಯಿಸಲ್ಪಟ್ಟರು.
ಅದು ಧ್ವಾಪರ.
ಇದು ಕಲಿ.
ಯುಗಾಂತರದಲ್ಲಿ ಮತ್ತದೇ ಅವಸಾನ.
ಎಲ್ಲಿದೆ ಕ್ಷೇಮ ಎಲ್ಲಿದೆ ನೇಮ - ಎಲ್ಲಿದ್ದಾನೆ ರಾಮ ಆದರ್ಶರಾಮ - ಭಾ.ಜ.ಪ.ರಾಮನ ಸೋಗಿನಲ್ಲಿ ಹಾಕಿತು ಉಂಡೆನಾಮ.
ಕನ್ನಡದ ಜನ ಅದನ್ನೇ ಉಂಡೇನು ಎಂದರೆ ಎಂದರೆ ಏನಿದೆ ಉಣಲು?
ಸಾಲದ್ದಕ್ಕೆ ಈಗಗಿಡುಗ ಜನ ಉದುಗಿದನ್ನು ಉಳಿಸಲು - ಹೊಸಪಕ್ಷ ಕಟ್ಟಿ ಆಳುತ್ತಾರಂತೆ - ಹೀಗೆ ಅಬಾಧಿತ ಸುದ್ದಿ ಹಬ್ಬುತ್ತಿದೆ.
ಜನ - ಕನ್ನಡದ ಜನ ಮಾಡಿದ ತಪ್ಪನ್ನೇ ಮತ್ತೆ ಮಾಡದಂತೆ ಎಚ್ಚರಿಸಲಿ ಸಕಾಲದಲ್ಲಿ ಸರಿಯಾಗಿ - ಸಿರಿಯಾಗಿ.
ಭದ್ರಂ ಪಶ್ಯೇಮ.
ಭದ್ರಂ ಶೃಣುಯಾಮ.
ಓಂ ತತ್ಸತ್.

- ಆರ್.ಎಂ.ಶರ್ಮ.

0 comments:

Post a Comment