ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:54 PM

ಸ್ಮರಣೆ

Posted by ekanasu

ಸಾಹಿತ್ಯ

ಅಮ್ಮಾ ನಾನು ಯಾರಿಗಾಗಿ ಹಾಡಲೀ...
ಕೇಳುವವರೇ ಇಲ್ಲದ ಮೇಲೆ
ಯಾರಿಗಾಗಿ ಹಾಡಲೀ..
ನೀನೇ ಇಲ್ಲದ ಮೇಲೆ...
ಯಾರಿಗಾಗಿ ಹಾಡಲೀ..


ನೀನೇ ರಚಿಸಿದ ಹಾಡು
ನೀನೇ ಹಾಕಿದ ರಾಗ
ನಿನ್ನ ಹಾಡಿಗೆ ಧ್ವನಿಯಾದೆನು
ಹಾಡ ಕೇಳುತ ನಾನು ಮೈಮರೆತೆನು
ಅಮ್ಮಾ ನಾನು ಯಾರಿಗಾಗಿ ಹಾಡಲೀ...

ನೀನಿಲ್ಲದ ಈ ಮನೆಯ
ಮೂಲೆ ಮೂಲೆಯಲಿಂದು
ಮೌನರಾಗದ ತಂತಿ ಮೀಟುತಿದೆಯಮ್ಮಾ
ನಿನ್ನ ಕೋಮಲ ಕರದ
ಸ್ಪರ್ಷವಿಲ್ಲದ ವೀಣೆ
ಮುಸುಗಿಕ್ಕಿ ಕಂಬನಿ ಮಿಡಿಯುತಿದೆಯಮ್ಮಾ
ಅಮ್ಮಾ ನಾನು ಯಾರಿಗಾಗಿ ಹಾಡಲೀ...

ಅಮ್ಮ ನಿನ್ನ ನಗೆಯೆನಗೆ ಜೋಗುಳದಂತೆ
ನಿನ್ನ ನುಡಿಯೆನಗೆ ಓಂಕಾರದಂತೆ
ನಿನ್ನ ನೋಟವೆ ಸಾಂತ್ವನದಂತೆ
ನಿನ್ನ ಇರವೆನಗೆ ದೇವರ ಸನ್ನಿಧಿಯಂತೆ
ಅಮ್ಮಾ ನಾನು ಯಾರಿಗಾಗಿ ಹಾಡಲೀ...

- ಸುಮತಿ ಕೆ.ಸಿ.ಭಟ್ , ಆದೂರು.

0 comments:

Post a Comment