ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸ್ವಾತಂತ್ರ್ಯೋತ್ಸವ ವಿಶೇಷ

ಸರಿ ಸುಮಾರು ಇನ್ನೂರು ವರ್ಷಗಳ ಕಾಲದಲ್ಲಿ ಬ್ರಿಟಿಷರು ಅರಸರಾಗಿ ಅಗತ್ಯ ಬಿದ್ದಾಗ ಆಳಾಗಿ ದುಡಿದರು - ದುಡಿಸಿದರು. ಆಗಲೂ ಭಾರತದಲ್ಲಿ ಜನಕ್ಕೆ ವಿಧ್ಯೆ, ಆರೋಗ್ಯ, ಕಲೆ, ಸಂಸ್ಕೃತಿ ಇತ್ಯಾದಿಯಾಗಿ ಯಾವ ನಿಟ್ಟಿನಲ್ಲಿ ನೋಡಿದರೂ ಮೇಲ್ನೋಟಕ್ಕೇ ದೂರುವ - ದೂಷಿಸುವ ಸಂಗತಿಗಳು ಸರ್ವೇ ಸಾಮಾನ್ಯವಾಗಿ ಸಹ್ಯವಿದ್ದದ್ದೇ ಇತಿಹಾಸದ ಸತ್ಯವು. ಇರಲಿ, ವೀರರು, ಯೋಧರು, ಯೋಗ ಪುರುಷರು, ಸಂಪನ್ನರು ಏನಿದ್ದರೂ ನಮ್ಮನ್ನು ನಾವೇ ಯಾಕೆ ಆಳಬಾರದು - ನಮ್ಮವರನ್ನು ನಾವೇ ಏಕೆ ಆಳಿಸಬಾರದು ಎಂಬ ತರ್ಕಕವನ್ನೇ ಸಧು - ಸಿಂಧು ಎಂತಲೇ ಬಿಂಭಿಸಿ ವಿಜೃಂಭಿಸಿ ಸ್ವತಂತ್ರವಾಗಲು ಏನೆಲ್ಲಾ ಮಾಡಬಹುದೋ ಮಾಡಿಸಬಹುದೋ ಅವನ್ನೆಲ್ಲ ಶಿಷ್ಟವಾಗಿ ಪುಷ್ಟವಾಗಿ ಆಗಿಸಿ ಜೀವ ಸಂಪತ್ತು ಇತ್ಯಾದಿ ಧೂಳೀಪಟ ಮಾಡಿಸಿ ಕಟ್ಟ ಕಡೆಗೆ ಸ್ವಂತದ ಅರಸು ಇರಿಸು ಅರಿಯನ್ನು ನಿಜವಾಗಿಸಿದ್ದು ಆಗಿ ಈಗ 64 ಸಂವತ್ಸರಗಳೇ ಆದವು. ನಮ್ಮದೇ ಸರಕಾರ ಆಗಿದೆಯಾದರೂ ಈಗಿನ 123ಕೋಟಿ ಜನಸಂಪತ್ತು ನೆಮ್ಮದಿಯಿಂದಿದ್ದಾರೆಯೇ? ದಿನವಾದರೆ ಸಾಕು ಹೊಡೆದಾಟ ಹೋರಾಟ ಮುಷ್ಕರ ಲಂಚ ಮೋಸ ಇವೇ ದೇಶವನ್ನು ಸ್ವಾಗತಿಸುವ ಸುದ್ದಿ ಬುದ್ಧಿ! ಕನ್ನಡದ ಗಾದೆ "ಬಂಗಾರದ ಸೂಜಿಯಿಂದ ಕಣ್ಣನ್ನು ಚುಚ್ಚಿಕೊಳ್ಳಲಾದೀತೇ?" ಬ್ರಿಟಿಷರು ಸ್ಥಾಪಿಸಿದ್ದ ಶಾಲೆಗಳು, ಆಸ್ಪತ್ರೆಗಳು, ಮಹಾ ವಿದ್ಯಾಲಯಗಳು, ಕಾರ್ಖಾನೆಗಳು, ಕಚೇರಿಗಳು ಇಂದಿಗೂ ಪ್ರಾತಃಸ್ಮರಣೀಯ ಅಲ್ಲದೆ ಮತ್ತೇನು?
ಸ್ವಯಂಕೃತ ಅಪರಾಧ ಆಭರಣವೇ? ಹಳತು - ಕೊಳಕು ಎಂತೆಲ್ಲಾ ವಾದ ವಾಗ್ವಾದ ಕೃದ್ಧರಾಗಿ ಕಾನೂನುಗಳನ್ನು ಝಾಡಿಸಿದರೆ ಆಡಳಿತ ಸ್ವಚ್ಛವಾದೀತೇ? ನಮ್ಮನ್ನು ನಾವೇ ಆಳುವುದು ಆಳಿಸಿಕೊಳ್ಳುವುದು ಕೊಂಡಾಡುವುದಾದರೆ ಅರಸುಜನ ಚಾರಿತ್ರ್ಯಶೀಲರಾಗಿರಬೇಡವೇ? ಎಲ್ಲಿ ನೋಡಿದರೂ ಸಭ್ಯರು ಇಲ್ಲ ಎಂದು ಹೇಳುವ ನಾವೇ ಏಕೆ ಲಭ್ಯ ಮಾಡಲು ಉತ್ತಮವಾದುದನ್ನು ಸಾಧ್ಯವಾಗಿಸಲು ತ್ರಿಕರಣ ಪೂರ್ವಕವಾಗಿ ಭಾರತದ ಮಹಾನ್ ಜನತೆ ಏಕೆ ಕೆಲಸ ಮಾಡುತ್ತಿಲ್ಲ. ಪರಕೀಯರೆಂದು ಅವರು ಮಾಡಿದ ಜನಹಿತ ಕೆಲಸಗಳೆಲ್ಲ ಅಪಥ್ಯವೇನು? ಆ ದಿನದ ಮಾತಾ ಪಿತೃಗಳು ತಮ್ಮ ಕುಡಿಗಳನ್ನು ಉತ್ತಮ ಭಾರತದ ಕೊಂಡಿಯನ್ನಾಗಿಸಲಿಲ್ಲವೇನು?

ಇಂದಿಗೂ ಆಳರಸರ ಆಡಳಿತದ ಗತ್ತು ಗಮ್ಮತ್ತು ಸಂಪತ್ತನ್ನು ಅನುಭವಿಸುತ್ತಿಲ್ಲವೇನೂ? ಕನ್ನಡದ ಗಾದೆ ಹೆತ್ತವರಿಗೆ ಹೆಗ್ಗಣ ಮುದ್ದು ಕೂಡಿದವರಿಗೆ ಕೊಡುಗ ಮುದ್ದು ಎನ್ನುವಲ್ಲಿ ಮಮಕಾರವಿದಯೇ ವಿನಃ ಸಾಕ್ಷಾತ್ಕಾರವಿಲ್ಲ!
ಭಾರತದ ಆಕರ ಗ್ರಂಥಗಳ ವೇದವಾಕ್ಯ `ಆ ನೋ ಭದ್ರಾ: ಕ್ರತವೋಯಾಂತು ವಿಶ್ವತಃ" ಎಂದರೆ ಮಂಗಳಕರವಾದದೆಲ್ಲವೂ ವಿಶ್ವದ ಖಂಡಿತ ಪ್ರಪಂಚವಲ್ಲವು ಆಂಗ್ಲಭಾಷೆಯಲ್ಲಿ ಕಾಸ್ಮಾಸ್ ನಿಂದ ನಮಗೆ ಒದಗಲಿ ಎಂಬ ಮೇರುನುಡಿಯಿದೆ!
ಈ ಮೇರುವಿಗೆ ಗೀರು ಗಿಲೀಟು ಗಲೀಜು ಇವೆಲ್ಲ ಆಭೂಷಣವಾಗಬೇಕೇನು ಅಥವಾ ಆಗಿಸಲ್ಪಡಬೇಕೇನು? ಯಾರಕಣ್ಣು , ಯಾರ ಹೃದಯ, ಯಾರ ರಕ್ತ, ಯಾರ ಮೂತ್ರಪಿಂಡ, ಯಾರ ಪಿತ್ತಕೋಶವಾದರೇನು ಸತ್ತವನೊಂದಿಗೆ ಮಣ್ಣಾಗದೇ ಬದುಕುಳಿದವನಿಗೆ ಆಧಾರವಾಗಲಿ ಎಂಬ ಸದ್ ಬುದ್ಧಿ ಇಚ್ಛೆ ಉತ್ತಮ ಆಡಳಿತಕ್ಕೆ ಏಕಾಗಬಾರದು?

ಜನಹಿತಕ್ಕೇ ದುಡಿಯುವ ಮಿಡಿಯುವ ತುಡಿಯುವ ಕೊನೆಗೆ ಮಡಿಯುವ ಸಿದ್ಧಾಂತ ತತ್ವ ತಥ್ಯ ಸತ್ಯ ಏಕೆ ಪರಾತ್ಪರಕ್ಕೆ ಸಲ್ಲದೇನು? ಜನಸೇವೆಯೇ ಜನಾರ್ಧನ ಸೇವೆ ಎಂಬ ಮಾತೇ ಸತ್ಯವಾದರೆ, ಆಡಳಿತ ಯಾರದ್ದಾದರೇನು ನೆಮ್ಮದಿ ನಿರಾಳ ಸರಳ ತರಳ ತರಳೆಯಿಲ್ಲದು ಆದರೆ ಕೈಯೇನೂ ನಮಗೆ ಸಾಧ್ಯವಾದುದಕ್ಕೆ ಪರಮಾತ್ಮನ ಅನುಗ್ರಹ ಆದೀತು. ಏಕೆ ಪರಕೀಯರದ್ದಾದರೆ ತಪ್ಪೇನು? ಸ್ವಂತ ಬುದ್ಧಿಯಿಲ್ಲ...ಬೇರೆಯವರದ್ದೂ ಬೇಡ ಹಾಗಾದರೆ ನಂಬಿದವರ ಪಾಡೇನು? ನೆಮ್ಮದಿಯ ಜೀವನ ಉತ್ತಮ ದೇಶ ಸೇವೆಗೆ ಇಂಬು ನೀಡುವುದಾದರೆ ತಂಪು ನೀಡುವುದಾದರೆ ಏಕೆ ಮೂದಲಿಸಬೇಕು? ಆದರಿಸಬಾರದೇಕೆ? ನಮಗಲ್ಲದಿದ್ದರೆ ಉತ್ತಮವಾದ ಆಡಳಿತ ನಮ್ಮ ಮುಂದಿನ ಜನಾಂಗಕ್ಕೆ ತಕ್ಕುದಾದ ಒಪ್ಪವಾದ ಕೊಡುವ ಕೊಡಿಸುವ ಮುತ್ಸದ್ದಿಗಳು ಬರುವವರೆಗೆ ಅನ್ಯವೂ ಅನನ್ಯವಲ್ಲದೇನು?
ಏನೆಲ್ಲ ನಮ್ಮದಾಗಿಸಿಕೊಳ್ಳುವ ಮನೋಭಾವದ ನಮ್ಮ ಜನಕ್ಕೆ ಆಳುವವರ ಬಗೆಗೆ ಅಸಡ್ಡೆ ಏಕಪ್ಪ? ಸ್ವಂತವಿಲ್ಲದವರು ಸ್ವಂತ ಸಾಧ್ಯವಾಗದವರು ಅನ್ಯವನ್ನೇ ತಮ್ಮದನ್ನಾಗಿಸಿಕೊಳ್ಳುವುದಿಲ್ಲವೆನೋ? ಆ ಸೌಭಾಗ್ಯಕ್ಕೆ ಅರಸುತನ ಪರಕೀಯವಾದರೆ ಇಲ್ಲಸಲ್ಲದ ಗದ್ದಲವೇಕಪ್ಪ?

ನೆಮ್ಮದಿ ನಿರಾಳ ನಿಶ್ಚಿಂತೆ ಉಳಿದವರನ್ನು ಹಾಳಾಗದಂತೆ ಉಳಿಯುವಂತೆ ನೆನಪಿನಲ್ಲಿ ಉಳಿಯುವಂತೆ ಮಾಡವೇನು? ಸ್ವತಂತ್ರದ ದಿನ ಸ್ವತಂತ್ರವಾಗಿ ನಮ್ಮ ತಪ್ಪನ್ನು ನಾವೆ ಒಪ್ಪಿಕೊಂಡು ತಿದ್ದಿಕೊಳ್ಳಲು ಸಂಕಲ್ಪ ಕಂಕಣ ಬದ್ಧರಾದರೆ ಹಿತವಲ್ಲವೇನು? ಎಂಟು ವರ್ಷಕ್ಕೆ ಮಗ ದಂಟು ಕೇಳಿದ ಅನ್ನುವಂತೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಸಿಕ್ಕಾಗಿಸಿ ಮುಗ್ಗಿ ಮುಗ್ಗರಿಸಿ 64 ಸಂವತ್ಸರಗಳು ಕಳೆದ ಮೇಲಾದರೂ ಒಳ್ಳೆಯದಕ್ಕೆ ಹೃದಯ ಬಡಿಯಲಿ ಮಿಡಿಯಲಿ ದುಡಿಯಲಿ ಕೊನೆಗೆ ಮಡಿದರೂ ಪರಮಾತ್ಮನಿಗೆ ಪ್ರೀತವೇ! ನಾವೂ ಬದುಕಿ ನಮ್ಮ ಜನತೆಯನ್ನೂ ಬದುಕಲು ಬಿಡೋಣ...
ಅದೇ ತೋರಣ ಓರಣ ಹೂರಣ...

- ಆರ್.ಎಂ.ಶರ್ಮ

0 comments:

Post a Comment