ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ರಾಜ್ಯ - ರಾಷ್ಟ್ರ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನಿರ್ಮಾಣಗೊಂಡ ಸಾಗರದ ಮೋಹನ ಗಣಪತಿ ಹೆಗಡೆ ಸಂಗ್ರಹದ ಪತ್ರಿಕಾ ಸಂಗ್ರಹಾಲಯವನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿ ಶುಭಹಾರೈಸಿದರು.ಮೋಹನ ಗಣಪತಿ ಹೆಗಡೆಯವರು ಸಂಗ್ರಹಿಸಿದ ಅನರ್ಘ್ಯ ಸಂಗ್ರಹವನ್ನು ಅತ್ಯಂತ ಕಾಳಜಿಯಿಂದ ಕಾಪಿಡುವ ಕಾರ್ಯ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಡಾ.ಆಳ್ವ ಮೆಚ್ಚುಗೆ ವ್ಯಕ್ತಪಡಿಸಿದರು.ಸಾಗರದ ನಿವಾಸಿ ನಿವೃತ್ತ ಶಿಕ್ಷಕ ಮೋಹನ ಗಣಪತಿ ಹೆಗಡೆಯವರ ಹೆಸರಿನಲ್ಲಿ ಈ ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ.ಪತ್ರಿಕಾ ಸಂಗ್ರಹಾಲಯದಲ್ಲಿ ಮಂಗಳೂರ ಸಮಾಚಾರ ಪತ್ರಿಕೆಯಿಂದ ಪ್ರಾರಂಭಗೊಂಡು ಇಂದಿನ ಪತ್ರಿಕೆಗಳು ಪ್ರದರ್ಶನಗೊಂಡಿವೆ.ಮೋಹನ ಗಣಪತಿ ಹೆಗಡೆ ಸ್ವಯಂ ಸ್ಪೂರ್ತಿಯಿಂದ ಸಂಸ್ಥೆಗೆ ದಾನವಾಗಿ ನೀಡಿದ ಪತ್ರಿಕೆಗಳ ಜೊತೆಗೆ ಆಳ್ವಾಸ್ ಕಾಲೆಜಿನ ಪತ್ರಿಕೋದ್ಯಮ ಉಪನ್ಯಾಸಕ ಹರೀಶ್ ಕೆ ಆದೂರು ಇವರ ಸಂಗ್ರಹದ ಅನೇಕ ಪತ್ರಿಕೆಗಳು ಈ ಸಂಗ್ರಹಾಲಯದಲ್ಲಿ ಸ್ಥಾನಗಳಿಸಿವೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ.ಹರೀಶ್ ರೈ ಯಾವುದೇ ಭ್ರಮೆಯನ್ನು ಹೊಂದಿಕೊಂಡು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಡಿ.ಬದಲಾಗಿ ಇದೂ ಒಂದು ವೃತ್ತಿ ಎಂಬುದನ್ನು ಗಮನಿಸಬೇಕಾಗಿದೆ. ದಿನ ದಿನವೂ ಹೊಸತನದೊಂದಿಗೆ ಈ ವೃತ್ತಿ ಕೂಡಿರುತ್ತದೆ ಎಂದರು.ಪತ್ರಿಕಾ ಸಂಗ್ರಾಹಕ ಮೋಹನ ಗಣಪತಿ ಹೆಗ್ಡೆ ಸಾಗರ ಹಾಗೂ ಇಂದಿರಾ ಹೆಗಡೆ ಸಾಗರ ಇವರನ್ನು ಸನ್ಮಾನಿಸಲಾಯಿತು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪುಸ್ತಕಗಳಿಗಿಂತಲೂ ಪತ್ರಿಕೆಗಳ ಅಗತ್ಯತೆ ಇದೆ.ನಿರಂತರ ಓದು ಪತ್ರಿಕೋದ್ಯಮ ವಿದ್ಯಾರ್ಥಿಗಳ ಬೆಳವಣಿಗೆಗೆ ತೀರಾ ಅವಶ್ಯಕ. ಈ ದೃಷ್ಟಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಂಗ್ರಾಹಲಯ ಸಹಕಾರಿಯಾಗಲಿ ಎಂದು ಆಶಿಸಿದರು.


ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಡಳಿತಾಧಿಕಾರಿ ಸ್ಮಿತಾ ಪಿ.ಐತಾಳ್, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್, ಆಳ್ವಾಸ್ ಕಾಲೇಜಿನ ಉಪನ್ಯಾಸಕ, ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಉಪನ್ಯಾಸಕಿ ಮೌಲ್ಯ ಜೀವನ್ ಉಪಸ್ಥಿತರಿದ್ದರು.

0 comments:

Post a Comment