ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸ್ವಾತಂತ್ರ್ಯೋತ್ಸವ ವಿಶೇಷ

ಬಯಲು ರಂಗಮಂದಿರದಲ್ಲಿ ಪುಟಾಣಿಗಳ ಕಲರವ
ಕುಂದಾಪುರ : ಹಳ್ಳಿ ಬಿಟ್ಟು ಪ್ಯಾಟೆ ಕಡೆ ಮುಖಮಾಡುವ ಪ್ರಸಕ್ತ ಕಾಲ ಘಟ್ಟದಲ್ಲಿ ಪ್ಯಾಟೆ ಯುವಕರು ಹಳ್ಳಿಯತ್ತ ಮುಖಮಾಡಿ ಹಾಲುಗಲ್ಲದ ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತಿಸುವ ಸಾಹಸಕ್ಕೆ ಕೈಹಾಕಿದ್ದಾರೆ. ಬೈಂದೂರು ವಿಧಾನ ಸಭಾ ಕ್ಷೇತ್ರದ ಕುಗ್ರಾಮದಲ್ಲಿ ಒಂದಾದ ಮಾರ್ಡಿ ಎಂಬ ಪುಟ್ಟ ಹಳ್ಳಿಯಲ್ಲಿ ಮಕ್ಕಳ ಕಲರವದ ಪ್ರತಿದ್ವನಿಸುತ್ತಿದೆ. ಕಳೆದ ಒಂದು ವರ್ಷದ ಹಿಂದೆ ತಲೆಯೆತ್ತಿದ ಅಂಗನವಾಡಿ ಮಾರ್ಡಿ ಎಂಬ ಪುಟ್ಟ ಹಳ್ಳಿಯಲ್ಲಿ ಸದ್ದಿಲ್ಲದೆ ಅಕ್ಷರ ಕ್ರಾಂತಿ ಮೂಡಿಸುವ ಜೊತೆಗೆ ಮುಂದಿನ ಬದುಕಿನಿನ ಕನಸಿನ ಚಿತ್ತಾರ ಮೂಡಿಸಿದೆ. ಸರಕಾರ ಮಾಡಬೇಕಾಗಿದ್ದ ಕೆಲಸವನ್ನು ಪ್ಯಾಟೆ ಯುವಕರು ಯಶ್ವಸ್ವಿಯಾಗಿ ಮಾಡಿ ತೋರಿಸುವ ಮೂಲಕ ಯುವ ಶಕ್ತಿ ಜಾಗೃತವಾದರೆ ಎನನ್ನಾದರೂ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ.


ಆರಂಭಕ್ಕೆ ಕಾರಣ ಏನು : ಕುಂದಾಪುರದ ಚಂದ್ರಶೇಖರ್, ವಸಂತ ಪಡಿಯಾರ್, ಸುಮತಿ ಚಂದ್ರಶೇಖರ್ ಮತ್ತು ಗೀತಾ ಪಡಿಯಾರ್ ಅವರ ತೊಟ್ಟಿಲ ಕೂಸು ಮಾರ್ಡಿ ಅಂಗನವಾಡಿ. ಸಾಮಾಜ ಋಣ ಕಿಂಚಿತ್ತಾದರೂ ತೀರಿಸುವ ಇರಾದೆಯ ಪರಿಣಾಮವೇ ಮಾರ್ಡಿ ಅಂಗನವಾಡಿ.
ಸಪ್ತಗಿರಿ ರೂರಲ್ ಡೆವಲಪ್ಮೆಂಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಇದರ ಆಶ್ರಯದಲ್ಲಿ ಅಂಗನವಾಡಿಗೆ ಚಾಲನೆ ಸಿಕ್ಕಿದೆ. 2009-10ರಿಂದ ಆರಂಭವಾದ ಅಂಗನವಾಡಿಯಲ್ಲಿ ಪ್ರಸಕ್ತ 17 ಮಕ್ಕಳ ಕಲರವ ಮೇಳೈಸಿದೆ. ಓರ್ವ ಶಿಕ್ಷಕಿ ಮತ್ತು ಸಹಾಯಕಿಗೆ ಅಂಗನವಾಡಿ ಜೀವನಾಧಾರವೂ ಹೌದು.

ಮಾರ್ಡಿ ಸರಕಾರಿ ಪ್ರಾಥಮಿಕ ಶಾಲೆ ರಂಗಮಂದಿರದ ಜಗುಲಿಯಲ್ಲಿ ಮಕ್ಕಳ ಓಟೋಟ ನಡೆಯುತ್ತಿದೆ. ಅದಕ್ಕಾಗಿಯೇ ಟ್ರಸ್ಟ್ ವರ್ಷಕ್ಕೆ 60 ಸಾವಿರಕ್ಕೂ ಮಿಕ್ಕಿ ಹಣ ವ್ಯಯಮಾಡುತ್ತಿದೆ. ಈ ಯುವಕರು ನಡೆಸುತ್ತಿರುವ ಅಂಗನವಾಡಿಗೆ ಬೇರೆ ಮೂಲದಿಂದಾಗಲೀ ಸರಕಾರದಿಂದಾಗಲೀ ನಯಾಪೈಸೆ ಸಹಕಾರವಿಲ್ಲ ಎನ್ನೋದು ಅಕ್ಷರ ಶಹ ಸತ್ಯ. ಹಳ್ಳಿ ಕೊಂಪೆಯಲ್ಲಿ ಅಂಗನವಾಡಿ ತೆರೆಯುವ ಮೂಲಕ ಸಮಾಜಿಕ ಸೇವೆಗೆ ನಿಂತ ಯುವಕರಿಗೆ ಸಾರ್ವಜನಿಕರ ಶಹಭಾಸ್ ಗಿರಿ ಬಿಟ್ಟರೆ ಮತ್ತೇನು ಸಿಕ್ಕಿಲ್ಲ.

ಮಕ್ಕಳ ಭವಿಷ್ಯ ಕಟ್ಟುವ ಕನಸಿದೆ : ಯುವಕರ ಅಂಗನವಾಡಿಗೆ ಮುನ್ನುಡಿ ಬರೆದರೂ ಅದರ ಹಿಂದೆ ಬಲವಾದ ಉದ್ದೇಶವಿದೆ. ಗ್ರಾಮೀಣ ಭಾಗದ ಮತ್ತು ಆರ್ಥಿಕ ದುರ್ಬಲ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಂಕಲ್ಪವಿದೆ. ಹಾಗಾಗಿಯೇ ಇಂದು ಅಂಗನವಾಡಿಯಲ್ಲಿ ಮಕ್ಕಳಿಗೆ ಕನ್ನಡದೊಟ್ಟಿಗೆ ಇಂಗ್ಲೀಷ್ ಅಕ್ಷರದ ಜ್ಞಾನ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಹಾಗೆ ಅಂಗನವಾಡಿಯಿಂದ ಪ್ರಾಥಮಿಕ ಹಂತದ ವರೆಗಿನ ಶಿಕ್ಷಣ ನೀಡುವ ಉದ್ದೇಶ ಟ್ರಸ್ಟ್ಗಳಿಗಿದೆ. ಹಳ್ಳಿ ಮಕ್ಕಳು ಪ್ಯಾಟೆ ಮಕ್ಕಳ ಹಾಗೆ ಠುಸ್ಪುಸ್ ಇಂಗೀಷ್ ಕಲಿಯಬೇಕು. ಪೇಟೆ ಮಕ್ಕಳ ಸರಿಸಮರಾಗಿ ಹಳ್ಳಿ ಮಕ್ಕಳು ಬೆಳೆಯಬೇಕು ಎನ್ನುವ ಮುಂದಾಲೋಚನೆಯಿದೆ.
ಇಷ್ಟೇ ಅಲ್ಲಾರೀ.. ಗ್ರಾಮೀಣ ಪ್ರದೇಶದ ಶಿಕ್ಷಣ ವಂಚಿತರು, ಆರ್ಥಿಕ ಅಡಚಣೆಯಿಂದ ಅರ್ಧಕ್ಕೆ ಶಾಲೆ ಬಿಟ್ಟವರೂ, ಓದುವ ತುಡಿತವಿದ್ದು ಓದಲಾಗದವರ ಮತ್ತು ಅನುತ್ತೀರ್ಣರಾದ ಕಾರಣ ಶಾಲೆ ಬಿಡುವ ಮಕ್ಕಳಿಗೂ ಮತ್ತು ಶಿಕ್ಷಣ ವಂಚಿತರಿಗೂ ಶಿಕ್ಷಣ ಕೊಡುವ ಮಹತ್ತರವಾದ ಉದ್ದೇಶ ಟ್ರಸ್ಟ್ ಕಟ್ಟಿಕೊಂಡ ಕನಸು.

ಸಹಕಾರಕ್ಕಾಗಿ ಸಹಸ್ರಾರು : ಟ್ರಸ್ಟ್ನ ಜನಪರ ಕಾರ್ಯದಿಂದಾಗಿ ಆಶ್ರಯ ಬಯಸಿ ಬರೋರ ಸಂಖ್ಯೆಯೂ ದೊಡ್ಡದಾಗುತ್ತಿದೆ. ಹಾಗಾಗಿ ಟ್ರಸ್ಟ್ ಎಲ್ಲವನ್ನೂ ನಿಭಾಯಿಸುವಷ್ಟು ಸಮರ್ಥವಾಗಿಲ್ಲ. ಆದರೂ ಸಹಕಾರ ಬಯಸಿ ಬಂದೋರನ್ನು ಕಡೆಗಣಿಸಿಯೂ ಇಲ್ಲ. ವಿದ್ಯಾರ್ಥಿಗಳಿಗೆ ಬೇರಾವ ಮೂಲದಿಂದ ಸಹಕಾರ ಸಹಾಯ ಸಿಗೋದಿಲ್ಲಾ ಎನ್ನೋದು ನಿಕ್ಕಿಯಾದ ನಂತರ ಅವರ ಬೆನ್ನಿಗೆ ಟ್ರಸ್ಟ್ ನಿಲ್ಲುತ್ತೆ. ಶಿಕ್ಷಣಕ್ಕಾಗಿ ಆರ್ಥಿಕ ಸಹಕಾರ ನೀಡುವ ಜೊತೆಗೆ ವಿದ್ಯಾರ್ಥಿ ಓದುವರೆಗಿನ ಸಂಪನ್ಮೂಲವನ್ನು ಟ್ರಸ್ಟ್ ನಿಭಾಯಿಸುತ್ತದೆ. ಹಾಗಾಗಿ ಟ್ರಸ್ಟ್ ಆರ್ಥಿಕ ಬಾರ ಹೊರಬೇಕಾಗಿದೆ. ಬೇರೊಬ್ಬರಿಂದ ಸಹಕಾರ ಬಯಸದೆ ಇದೂವರಗೆ ಟ್ರಸ್ಟ್ ದೇಹಿ ಎಂದು ಬಂದವರನ್ನು ಸಂತೈಸಿದೆ. ಹೆದರಬೇಡಿ ನಾವಿದ್ದೇವೆ ಎಂದು ಅಭಯ ನೀಡಿದೆ. ಒಟ್ಟಾರೆ ಉದ್ದೇಶ ಸ್ಪಷ್ಟ ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆ. ಯುವಕರ ಪ್ರಯತ್ನಕ್ಕೆ ಜೈ.

- ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment