ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:08 PM

ಒಂಟಿ

Posted by ekanasu

ಸಾಹಿತ್ಯ

ಸುತ್ತ ಹತ್ತು ಜನವಿದ್ದು
ಏಕಾಂಗಿ ನಾನು
ಬೋಳು ಮರದ ಮೇಲೆ ಕುಳಿತು
ಹುಯಿಲಿಡುವ ಕಾಗೆಯಂತೆ...


ಎತ್ತ ನೋಡಿದರೂ ಮರಳುಗಾಡೇ
ಓಯಸಿಸ್ ನ ಸುಳಿವಿಲ್ಲ...
ಗುರಿಯಿರದ ಕಡೆ ಪಯಣದಲ್ಲಿ
ಸಹಚರರ ಹೆಜ್ಜೆಯಿಲ್ಲ

ಸುತ್ತ ನಾಲ್ಕು ಜನವಿದ್ದೂ
ಏಕಾಂಗಿ ನಾನು...
ಚಿತೆಯ ಮೇಲೆ ಚಿಟಿಗುಟ್ಟುವ
ಬೆಂಕಿಯ ಜ್ವಾಲೆಯಂತೆ...

- ಸೌಮ್ಯ ಸಾಗರ.

0 comments:

Post a Comment