ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಾರೆನ್ ಬಫೆಟ್ ಉಪದೇಶದ ಸಾರಾಂಶ

ಸಂಪಾದನೆ:
ಒಂದೇ ಕಡೆಯಿಂದ ಬರುತ್ತಿರುವ ಸಂಪಾದನೆಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬೇಡಿ. ನಾಳೆ ಅದು ಆಕಸ್ಮಿಕವಾಗಿ ನಿಂತು ಹೋದರೆ ಜೀವನ ನಡೆಸುವುದು ನಿಮಗೆ ಕಷ್ಟವಾಗಬಹುದು. ನಿಮ್ಮ ಮೂಲ ಸಂಪಾದನೆ ಹೊರತು ಪಡಿಸಿ, ಬೇರೊಂದು ಸಂಪಾದನೆಯ ಝರಿ ಮಾಡಿ. ಕಷ್ಟದ ಸಮಯದಲ್ಲಿ ಸಹಾಯವಾಗುತ್ತದೆ. (ಉದಾಹರಣೆಗೆ ಪಾರ್ಟ್ ಟೈಂ ಕೆಲಸವಾಗಿರಬಹುದು,ಆಟೋ ಅಥವಾ ಕಾರು ಬಾಡಿಗೆಗೆ ಬಿಟ್ಟಿರಬಹುದು,ಬಂಡವಾಳ ಹೂಡಿಕೆ ಇರಬಹುದು, ಇನ್ನಿತರೆ ನ್ಯಾಯಯುತ ಸಂಪಾದನೆಯ ದಾರಿಗಳಾಗಿರಬಹುದು. ಒಟ್ಟಿನಲ್ಲಿ ಕಡಿಮೆಯೋ ಅಥವಾ ಹೆಚ್ಚೋ ಹಣ ಹರಿದುಕೊಂಡು ನಿಮ್ಮತ್ತ ಬರುತ್ತಿರಬೇಕು.)ಖರ್ಚು:
ಅನಾವಶ್ಯಕ ವಸ್ತುಗಳನ್ನು ಖರೀದಿಸಬೇಡಿ. ಇಲ್ಲವಾದಲ್ಲಿ ಒಂದು ದಿನ ನಿಮಗೆ ಬೇಕಾದ ವಸ್ತುಗಳನ್ನು ಮಾರಬೆಕಾಗುತ್ತದೆ. (ನೆರೆಹೊರೆಯವರಿಗೆ,ನೆಂಟರಸ್ಥರಿಗೆ ಟೊಳ್ಳು ಶ್ರೀಮಂತಿಕೆ ತೋರಿಸಿಕೊಳ್ಳಲು ಸಾಲ ಮಾಡಿ, ಬಡ್ಡಿ ಕಟ್ಟಿ, ಚಕ್ರಬಡ್ಡಿ ಕಟ್ಟಿ, ಮನಃಶಾಂತಿ ಕೆಡಿಸಿಕೊಂಡು ಪಡಬಾರದ ಭಾದೆ ಪಡಬೇಡಿ)

ಜಮಾ:
ಖರ್ಚಾದ ಮೇಲೆ ಉಳಿಯುವುದು ಉಳಿತಾಯವಲ್ಲ. ಉಳಿತಾಯ ಮಾಡಿದ ಮೇಲೆ ಖರ್ಚನ್ನು ಮಾಡಿ.

ಸಾಲ:
ಸಾಲಗಾರ ಮಾಲಿಕನ ಗುಲಾಮನಾಗಿರುತ್ತಾನೆ. ತಂದೆತಾಯಿಯ ಮುಂದೆ ಗುರುಹಿರಿಯರ ಮುಂದೆ ತಲೆ ತಗ್ಗಿಸುವುದಿಲ್ಲ. ಆದರೆ ಮಾಲೀಕನ ಮುಂದೆ ಗೂಬೆ ತರಹ, ಕೈಕಟ್ಟಿಕೊಂಡು, ಹೇಳಿದ್ದನ್ನು ಸಹಿಸಿಕೊಂಡು ಅಮಾಯಕನಾಗಿ ನಾಚಿಕೆಯಿಂದ ನಿಂತಿರುತ್ತಾನೆ.

ಲೆಕ್ಕಚಾರ:
ಸಂಪಾದನೆ ವ್ಯರ್ಥವಾಗಿ ಎಲ್ಲಿ ಸೋರಿ ಹೋಗುತ್ತಿದೆ ಎಂಬುದರ ಬಗ್ಗೆ ನಿಗಾ ಇರಲಿ. ನೀರಿನ ತೊಟ್ಟಿಯಲ್ಲಿ ಬಿದ್ದಿರುವ ತೂತನ್ನು ಮುಚ್ಚದೆ ಹೋದರೆ, ಅಲ್ಲಿ ಎಷ್ಟು ನೀರನ್ನು ಕೂಡಿಟ್ಟರೂ, ನೀರು ನಿಲ್ಲುವುದಿಲ್ಲ. ಕುಡಿಯಲ್ಲಿಕ್ಕೂ ಸಹ ನೀರು ಸಿಗದೇ ಹೋಗಬಹುದು.

ಆಡಿಟ್:
ಒಂದು ಸಣ್ಣ ತೂತು ಹಡಗನ್ನೇ ಮುಳುಗಿಸಿ ಬಿಡಬಹುದು. ನಿಮ್ಮ ಚಿಲ್ಲರೆ ಖರ್ಚುಗಳ ಮೇಲೆ ಜಾಗರೂಕತೆ ಇರಲಿ.

ರಿಸ್ಕ್:
ನದಿಯ ಆಳವನ್ನು ಎರಡೂ ಕಾಲುಗಳಿಂದ ಅಳೆಯಲು ಹೋಗಬೇಡಿ. ಆಳ ಎಷ್ಟಿದೆ ಎನ್ನುವುದು ನಮಗೆ ಗೊತ್ತಿಲ್ಲ. ತಿಳಿದಿರ ದುಮುಕಿಬಿಟ್ಟರೆ ಹಾನಿಯೂ ಆಗಬಹುದು. ಯಾವುದೇ ವಿಷಯದಲ್ಲಾಗಲಿ ಮುಂದಾಲೋಚಿತವಾಗಿ ಪರ್ಯಾಯ ಮಾರ್ಗವನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು.

ಹೂಡಿಕೆ:
ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಬೇಡಿ. ಕೈಬಿಟ್ಟರೆ ಎಲ್ಲಾ ಮೊಟ್ಟೆಗಳು ಒಡೆದು ಹೋಗುತ್ತವೆ. ಒಂದೇ ಕಡೆ ನೀವು ಸಂಪಾದನೆ ಹೂಡುವುದು ಸರಿಯಲ್ಲ. ಮೋಸ ಹೋಗಬಹುದು. ರಕ್ತ ಸಂಬಂಧಿಕರೇ ಕೈಕೊಟ್ಟು ಬಿಡುತ್ತಾರೆ. ಪರರನ್ನು ನಂಬುವುದು ಹೇಗೆ?

ಜಿಪುಣರಾಗಬೇಡಿ. ಮಕ್ಕಳಿಗೆ ಹಣ ದಾನ ಮಾಡುವುದನ್ನು ಕಲಿಸಿ ಮತ್ತು ಹಣವನ್ನು ಕೂಡಿಡುವುದನ್ನು ಸಹ ಕಲಿಸಿ. ಇಲ್ಲವಾದಲ್ಲಿ ಹಣವಿರುವಾಗ ಅತಿಯಾಗಿ ಖರ್ಚು ಮಾಡಿ, ಹಣವಿಲ್ಲದಿರುವಾಗ ಬೇರೆಯವರ ಮುಂದೆ ಕೈಚಾಚಿ ಪರದಾಡುವ ಪರಿಸ್ಥಿತಿ ಉಂಟಾಗಬಹುದು.

ಖಲೀಫ ಅಬ್ದುಲ್ ಅಜೀಜ್ ಕಾಲದಲ್ಲಿ (717-720 ಸಿ.ಇ.) ಡಮಾಸ್ಕಸ್ ರಾಜ್ಯದಲ್ಲಿ ಬಡತನವೇ ಇರಲಿಲ್ಲ. ಜಕಾತ್ ಹಣವನ್ನು ತೆಗೆದುಕೊಳ್ಳುವವರು ಯಾರೂ ಇರಲಿಲ್ಲ. ಅಂದರೆ ಎಲ್ಲರೂ ಶ್ರೀಮಂತರಾಗಿದ್ದರು. ಆದುದರಿಮದ ಹಣವನ್ನು ಯೂರೋಪ್ನಲ್ಲಿ ಜೀತಾಳುಗಳನ್ನು ಬಿಡುಗಡೆಗೊಳಿಸಲು ಕಳುಹಿಸಲಾಗುತ್ತಿತ್ತು.
ಜಕಾತ್ ಹಣವೆಂದರೆ - ಪ್ರತಿಯೊಬ್ಬ ಧನಿಕ ಮುಸ್ಲಿಮನ ಮೇಲೆ ಅವನ ಬಳಿ ಕನಿಷ್ಟ ನಲವತ್ತು ರೂಪಾಯಿಗಳಿದ್ದು ಅದರ ಮೇಲೆ ಒಂದು ವರ್ಷ ಕಳೆದಿದ್ದರೆ, ಅದರಿಂದ ಒಂದು ರೂಪಾಯಿಯನ್ನು ಒಬ್ಬ ಬಡ ಸಂಬಂಧಿಕ, ಒಬ್ಬ ಅಪೇಕ್ಷಿತ ವ್ಯಕ್ತಿ, ಒಬ್ಬ ದರಿದ್ರ, ಒಬ್ಬ ಪ್ರಯಾಣಿಕ ಅಥವಾ ಒಬ್ಬ ಸಾಲಗಾರನಿಗೆ ನೀಡುವುದನ್ನು ದೇವರು ಕಡ್ಡಾಯ ಗೊಳಿಸಿರುತ್ತಾನೆ. ಈ ರೀತಿ ದೇವರು ಧನಿಕರ ಸೊತ್ತಿನಲ್ಲಿ ಕನಿಷ್ಟ ಪಕ್ಷ ಎರಡೂವರೆ ಶೇಕಡವನ್ನು ಬಡವರ ಪಾಲೆಂದು ನಿಶ್ಚಯಿಸಿರುವನು. ಇದಕ್ಕಿಂತ ಹೆಚ್ಚಿನದನ್ನು ಯಾರಾದರೂ ನೀಡಿದರೆ ಇದು ಅವರ ಉದಾರತೆಯಾಗಿದ್ದು ಅವನಿಗೆ ಅದಕ್ಕೆ ಖಂಡಿತ ಅಧಿಕ ಪುಣ್ಯಫಲ ಸಿಗುವುದು. ಶ್ರೀಮಂತರ ಸೊತ್ತಿನ ಈ ಅಂಶವು ದೇವರಿಗೆ ತಲುಪುವುದಿಲ್ಲ. ಅವನು ನಮ್ಮಿಂದ ಯಾವ ವಸ್ತುವನ್ನೂ ಅಪೇಕ್ಷಿಸುವುದಿಲ್ಲ. ಆದರೆ ನಾವು ಸನ್ಮನಸ್ಸಿನಿಂದ ಬಡವರಿಗೆ ನೀಡಿದರೆ ಅದು ಅವನಿಗೆ ನೀಡಿದಂತೆ. ಆದರೆ ಅದನ್ನು ಕೊಟ್ಟು ನಾವು ಅವರ ಮೇಲೆ ಉಪಕಾರ ಭಾವಿಸಬಾರದು. ಅವರನ್ನು ನಿಂದಿಸಬಾರದು, ಅಪಮಾನಿಸಬಾರದು. ಅವರಿಂದ ಕೃತಜ್ಞತೆಯನ್ನು ಬಯಸಬಾರದು. ನಿಮ್ಮ ಈ ಕೊಡುಗೆಯ ಬಗ್ಗೆ ಜನರಲ್ಲಿ ಚಚರ್ೆಯಾಗಿ ಅವರು ನಮ್ಮನ್ನು ದೊಡ್ಡ ಕೊಡುಗೈ ದಾನಿಯೆಂದು ಹೊಗಳಬೇಕೆಂದು ಬಯಸಬಾರದು - ಎಂದು ದೇವರು ಹೇಳುತ್ತಾನೆ.

ಶ್ರಮಪಡಿ. ಸೋಮಾರಿತನ ಬಿಡಿ. ಸಂಪಾದನೆ ಮಾಡಿ.

- ಜಬೀವುಲ್ಲಾ ಖಾನ್

0 comments:

Post a Comment