ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ತ್ರಿ-ಶೋಧಕ ಪರೀಕ್ಷೆ

ಪುರಾತನ ಗ್ರೀಕ್ ದೇಶದಲ್ಲಿ ಸೋಕ್ರೇಟ್ಸ್ ಎಂಬ ಚತುರ ವೇದಾಂತಿ ಇದ್ದ. ಒಮ್ಮೆ ಆತನ ಸ್ನೇಹಿತ ಓಡಿ ಬಂದು - ನಾಯಿ ಬಗ್ಗೆ ನಾನು ಏನು ಕೇಳಿಸಿಕೊಂಡೆ ನಿನಗೆ ಗೊತ್ತೇ?
ಸೋಕ್ರೇಟ್ಸ್ ಹೇಳಿದ - ಒಂದು ನಿಮಿಷ ತಾಳು, ನೀನು ಹೇಳುವುದನ್ನು ನಾನು ಕೇಳುವ ಮುನ್ನ ನಿನ್ನ ಮಾತುಗಳನ್ನು ಶೋಧಿಸೋಣ. ಆ ಶೋಧನೆಯ ಪರೀಕ್ಷೆಗೆ "ತ್ರಿ-ಶೋಧಕ ಪರೀಕ್ಷೆ" ಎನ್ನುತ್ತಾರೆ.
ತ್ರಿ-ಶೋಧಕ ಪರೀಕ್ಷೆ ! - ಸ್ನೇಹಿತ ಆಶ್ಚರ್ಯಚಕಿತನಾಗಿ ಕೇಳಿದ.
ಹೌದು. ನೀನು ನನಗೆ ಏನು ಹೇಳಬೇಕು ಎಂದಿದ್ದೀಯೋ ಅದನ್ನು ಈ ಪರೀಕ್ಷೆಯ ಮೂಲಕ ಶೋಧಿಸೋಣ.
ಮೊದಲನೆಯದು "ಏಕಶೋಧ" - "ಸತ್ಯ"


ನೀನು ನನಗೆ ಹೇಳಬೇಕೆಂದಿರುವ ವಿಷಯ ಸತ್ಯವೇ..?
ಗೊತ್ತಿಲ್ಲ. ನಾನು ಸಹ ಸುಮ್ಮನೆ ಕೇಳಿಸಿಕೊಂಡ ವಿಷಯ.
ಅಂದರೆ, ನಿನಗೆ ಅದು ಸತ್ಯ ಅಥವಾ ಸುಳ್ಳು ಎಂದು ನಿಖರವಾಗಿ ಗೊತ್ತಿಲ್ಲ.
ಈಗ "ದ್ವಿಶೋಧ" ಮಾಡೋಣ - "ಒಳ್ಳೆಯದು"
ನಾಯಿ ಬಗ್ಗೆ ನೀನು ಹೇಳಬೇಕೆಂದಿರುವ ವಿಷಯ ಒಳ್ಳೆಯದೇ...?
ಇಲ್ಲ. ವಿವಾದಿತ.
ಅಂದರೆ, ನೀನು ನಾಯಿ ಬಗ್ಗೆ ಹೇಳಬೇಕಾಗಿರುವ ವಿಷಯ ಕೆಟ್ಟದ್ದು. ಅದು ಸತ್ಯವೆಂದೂ ಗೊತ್ತಿಲ್ಲ. ಆದರೂ ನನಗೆ ಹೇಳಬೇಕೆಂದಿದ್ದೀಯಾ?
ಸ್ನೇಹಿತ ಚಕಿತನಾದ. ಇರಲಿ. ಇನ್ನೊಂದು ಪರೀಕ್ಷೆ ಬಾಕಿ ಇದೆ, ಅದುವೇ ತ್ರಿಶೋಧ ಪರೀಕ್ಷೆ - "ಉಪಯೋಗ"
ನೀನು ಏನು ಹೇಳಬೇಕು ಎಂದಿದ್ದೀಯೋ ಅದು ನನಗೆ ಉಪಯೋಗಕಾರಿಯೇ...?
ಇಲ್ಲ. ನಿಜವಾಗಲೂ ಇಲ್ಲ.
ನೀನು ನನಗೆ ಹೇಳಬೇಕೆಂದಿರುವುದು ಸತ್ಯವೂ ಅಲ್ಲ, ಒಳ್ಳೆಯದೂ ಅಲ್ಲ ಮತ್ತು ಉಪಯೋಗಕಾರಿಯೂ ಅಲ್ಲ.
ನನಗೆ ಅಥವಾ ಪರರಿಗೆ ಇಂತಹ ವಿಷಯ ಏಕೆ ಹೇಳಬೇಕು...?
ಸ್ನೇಹಿತನಿಗೆ ಬಹಳ ನಾಚಿಕೆಯಾಯಿತು. ಬುದ್ಧಿಯೂ ಬಂತು.
ನಿಮಗೂ ಅರ್ಥವಾಗಿರಬೇಕು.

- ಜಬೀವುಲ್ಲಾ ಖಾನ್

0 comments:

Post a Comment