ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ಸಾಧಾರಣ ಮಾನವನೂ ಕೂಡಾ ತನ್ನ ಸಾಧನೆಯಬಲದಿಂದ ಮಾಧವತ್ವದೆಡೆಗೆ ಹೋಗಲು ಸಾಧ್ಯ ಎಂಬುದನ್ನು ನಿರೂಪಿಸಿದಂತಹ ಅಪೂರ್ವ ವ್ಯಕ್ತಿ ಕುಬೇರ. ಲೋಕದಲ್ಲಿ ಸಂತೋಷವನ್ನು ಕೊಡುವ ಯಾವುದೇ ವಸ್ತುವಾದರೂ ಧನಾಧಿಪತಿಯೆಂದೇ ಖ್ಯಾತನಾದ ಈತನ ಕೃಪೆಯಿಲ್ಲದೆ ದೊರಕಲಾರದು.ಪ್ರತಿದಿನವೂ ದೇವಪೂಜೆಯಲ್ಲಿ ಮಂತ್ರಪುಷ್ಪವನ್ನು ಹೇಳುವಾಗ ಇವನನ್ನು ಸ್ತುತಿಸುತ್ತೇವೆ.ಬಯಕೆಗಳನ್ನು ಇವನೆದುರು ಇಡುತ್ತೇವೆ. ಇಂತಹ ವ್ಯಕ್ತಿಯ ಪೂರ್ವೇತಿಹಾಸ ಲೋಕವಿಸ್ಮಯಕಾರಿಯಾಗಿದ್ದು ಈ ವೃತ್ತಾಂತವನ್ನು ಮಹರ್ಷಿ ವಾಲ್ಮೀಕಿ ತುಂಬ ಸುಂದರವಾಗಿ ವರ್ಣಿಸಿದ್ದಾರೆ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.


ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿರುವ ರಾಮಕಥಾ ಶ್ರಾವಣಪರ್ವದ ಎರಡನೆಯ ದಿನದಂದು ಪ್ರವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ಪುಲಸ್ತ್ಯಮಹರ್ಷಿಯಿಂದ ಶಾಪಗ್ರಸ್ತಳಾಗಿ ಅವನನ್ನೇ ವರಿಸಿದ ತೃಣಬಿಂದು ರಾಜರ್ಷಿಯ ಮಗಳು ಗೋ ಸರ್ವಸಮರ್ಪಣಭಾವದಸೇವೆಯಿಂದ ಆತನ ಮನಸ್ಸನ್ನು ಗೆದ್ದಳು.ಕೇವಲ ವೇದಶ್ರವಣ ಹಾಗೂ ಮಹರ್ಷಿಯ ದೃಷ್ಟಿಪಾತಮಾತ್ರದಿಂದಲೇ ಈಕೆಯಲ್ಲಿ ಸರ್ವಗುಣಸಂಪನ್ನನಾಗಿ ಹುಟ್ಟಿದವನು ವಿಶ್ರವಸ್. ವಿಶೇಷಶ್ರವಣದಿಂದ ಉತ್ಪನ್ನನಾದವ.ಸದಾ ವೇದಾಧ್ಯಾಯಿಯಾಗಿದ್ದು ತನ್ಮೂಲಕವೇ ಭಗವಂತನ ಸಾಕ್ಷಾತ್ಕಾರವನ್ನು ಪಡೆದಿದ್ದ ಪುಲಸ್ತ್ಯಇವನ ಮಗನೇ ಕುಬೇರ.ಒಬ್ಬನೇ ತಂದೆಗೆ ಪರಸ್ಪರ ತೀರಾ ವಿರುದ್ಧಸ್ವಭಾವದ ಮಕ್ಕಳುಜನಿಸುವುದು ಸಾಧ್ಯ.ಯಾಕೆಂದರೆ ಲೋಕಕಂಟಕನಾದ ರಾವಣಕುಂಭಕರ್ಣರು ಹುಟ್ಟಿದ್ದೂ ಸಹ ಇದೇ ಕುಟುಂಬದಲ್ಲಿ ಎಂದು ಹೇಳಿ ರಾಮಾಯಣಕ್ಕೆ ಕಾರಣವಾದ ರಾಮಾವತಾರದ ತಾತ್ವಿಕಹಿನ್ನೆಲೆಯನ್ನು, ವಾಲ್ಮೀಕಿಮಹರ್ಷಿಗಳ ಅಂತದೃಷ್ಠಿಯನ್ನು ವಿಶ್ಲೇಷಿಸಿದ ಪೂಜ್ಯಶ್ರೀಗಳು ಇಂತಹ ಮನುಷ್ಯಸಂಬಂಧಗಳ ಒಳನೋಟ ಹಾಗೂ ತಾತ್ವಿಕಸಂಘರ್ಷಗಳನ್ನು ಸಮಗ್ರವಾಗಿ ಚಿತ್ರಿಸುವುದರಿಂದಲೇ ರಾಮಾಯಣವು ಸಾರ್ವಕಾಲಿಕಮೌಲ್ಯವನ್ನು ಪಡೆದಿದೆ. ನಮ್ಮ ಬದುಕನ್ನು ರೂಪಿಸಿಕೊಳ್ಳಲು ಮಾರ್ಗದರ್ಶನವನ್ನು ನೀಡುವುದೂ ಕೂಡಾ ಕಾವ್ಯಗಳ ಉದ್ದೇಶಗಳಲ್ಲಿ ಒಂದು ಎಂದೂ ಹೇಳಿದರು.

ಶ್ರೀಪಾದ ಭಟ್ಟ,ಸಂಧ್ಯಾಭಟ್ಟ,ವಸುಧಾ ಶರ್ಮಾ ,ಪ್ರೊ.ಎಸ್.ಶಂಭುಭಟ್ಟ,ಗಜಾನನ ಸಭಾಹಿತ ಇವರ ಗಾಯನ ಹಾಗೂ ಶ್ಲೋಕವಾಚನ,ಗೋಪಾಲಕೃಷ್ಣ ಹೆಗಡೆಯವರ ತಬಲಾಹಾಗೂ ನರಸಿಂಹಮೂರ್ತಿಯವರ ಮೃದಂಗವಾದನಗಳ ಜೊತೆ ಪ್ರಕಾಶ್ ಕಲ್ಲರಮನೆಯವರ ವೇಣುವಾದನ ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆಯನ್ನು ನೀಡಿದ್ದವು.ಗಣಪತಿ ನೀರ್ನಳ್ಳಿಯವರ ಆಶುಚಿತ್ರದ ಜೊತೆ ಅಪರೂಪದ ಮರಳುಶಿಲ್ಪದ ಮೂಲಕ ಈಮಾಧ್ಯಮದ ಅನಂತಸಾಧ್ಯತೆಗಳನ್ನು ತೆರೆದಿಟ್ಟ ಖ್ಯಾತ ಕಲಾವಿದ ರಾಘವೇಂದ್ರ ಹೆಗಡೆಯವರ ಮರಳುಚಿತ್ರರಚನೆ ಜನರನ್ನುಮಂತ್ರಮುಗ್ಧರನ್ನಾಗಿಸಿತು.ಶಿವಮೊಗ್ಗದ ಪ್ರೊ.ಕುಮಾರಿ ಸುಭದ್ರಾ ನಿರ್ದೇಶನದಲ್ಲಿ ವಿಶ್ರವಸ್ರೂಪಕವು ಆಯೋಜಿತವಾಗಿತ್ತು
ಇಂದು ಸಿದ್ಧಾಪುರ ಮಂಡಲದ ಹಾರ್ಸಿ ಕಟ್ಟಾ,ಬಿದ್ರಕಾನ್,ಚಪ್ಪರಮನೆ ಹಾಗೂಭಾನ್ಕುಳಿ ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆ ಹಾಗೂ ಪಡಸಾಲಿಸಮಾಜದಶಿಷ್ಯರಿಂದ ಶ್ರೀಗುರುಪಾದುಕಾಪೂಜೆಗಳು ಸಂಪನ್ನಗೊಂಡವು.ಪೂಜ್ಯಶ್ರೀಗಳು ಅನುಗ್ರಹಸಂದೇಶವನ್ನಿತ್ತು ಆಶೀರ್ವದಿಸಿದರು.ಎಂದಿನಂತೆ ಮೂಲಮಠನಿರ್ಮಾಣ,ಸಾವಿದರದೆಡೆಗೆ ಅಭಿಯಾನ,ಗೋಬಂಧು,ವಿದ್ಯಾಬಂಧು ಮೊದಲಾದ ಯೋಜನೆಗಳಿಗೆ ಶಿಷ್ಯಸಮುದಾಯದಿಂದ ದೇಣಿಗೆ ಸಮರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮಗಳು ನಡೆದವು.ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

0 comments:

Post a Comment