ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ದೊಡ್ಡಪ್ಪ...ದೊಡ್ಡಪ್ಪ....ಒಂದು ಕತೆ ಹೇಳು....ದೊಡ್ಡಪ್ಪಾ...

ಹೇಳ್ತೀನಿ..ಆದರೆ ನೀವೆಲ್ಲ ಗಲಾಟೆ ಮಾಡದೆ ಕುಳಿತು ಕೇಳಿಸಿಕೊಳ್ಳಬೇಕು...ಹೂಂ...ಆಗಲಿ...
ಕೇಳಿ... ನಮ್ಮ ಊರಿನ ಬೆಟ್ಟದ ಹಿಂದೆ ಒಂದು ಕಾಡಿದೆ. ಅದಕ್ಕೆ ದೊಡ್ಡ ಕಾಡು ಎಂದು ಕರೆಯುತ್ತಾರೆ. ಲಂಬಾಣಿ ಜನರು ಆ ಕಾಡಿನಿಂದಲೇ ಸೌದೆಗಳನ್ನು ಹೊತ್ತು ತಂದು ಸಂತೆಯಲ್ಲಿ ಮಾರುವುದು. ಬಸವ ಅವರ ಜೊತೆ ಸೇರಿ ಕರಿಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ. ಕುರಿಗಳನ್ನು ಮೇಯಲು ಬಿಟ್ಟು,ಯಾವುದಾದರೊಂದು ಮರ ಹತ್ತಿ ಕುಳಿತುಕೊಳ್ಳುತ್ತಿದ್ದ. ಒಂದು ದಿನ ಅವನು ಮರದ ಮೇಲಿಂದಲೇ ಕಿರುಚಾಡತೊಡಗಿದ - "ಹುಲಿ ಬಂತು,ಹುಲಿ ಬಂತು, ನನ್ನ ಕುರಿಗಳನ್ನು ಕಾಪಾಡಿ".


ಸೌದೆ ಹಾಯಲು ಬಂದಿದ್ದ ಜನರು ಅಕ್ಕಪಕ್ಕದಿಂದ ಓಡೋಡಿ ಬಂದು ನೋಡಿದರು. ಹುಲಿ ಇರಲಿಲ್ಲ. ಕುರಿಗಳು ಮೇಯುತ್ತಿದ್ದವು. ಬಸವನಿಗೆ ಕೇಳಿದಾಗ - ನಾನು ಸುಮ್ಮನೆ ಹೇಳಿದ್ದು ಎಂದ. ಬಂದವರೆಲ್ಲ ಕೋಪ ಮಾಡಿಕೊಂಡು ಹೊರಟು ಹೋದರು.
ಎರಡನೆ ದಿನವೂ ಬಸವ ಹಾಗೆಯೇ ಕೂಗಾಡಿದ. ಕುರಿಗಳನ್ನು ರಕ್ಷಿಸಲೆಂದು ಜನ ಓಡಿ ಬಂದರು. ಹುಲಿ ಇರಲಿಲ್ಲ. ಕುರಿಗಳು ಆನಂದದಿಂದ ಹುಲ್ಲು ಮೇಯುತ್ತಿದ್ದವು. ಬಸವನಿಗೆ ಬೈದು ಅವರು ತಮ್ಮ ಕೆಲಸದಲ್ಲಿ ನಿರತರಾಗಿ ಹೋದರು.
ಮೂರನೇ ದಿನ ಬಸವ ಹಾಗೆಯೇ ಕೂಗಾಡಿದ - ಹುಲಿ, ಹುಲಿ...
ಬಸವ ಈ ಬಾರಿಯೂ ಸುಳ್ಳು ಹೇಳುತ್ತಿರಬಹುದು ಎಂದು ಯೋಚಿಸಿ ಜನರು ಕುರಿಗಳ ದಂಡಿನತ್ತ ಬರಲೇ ಇಲ್ಲ. ಆದರೆ ನಿಜವಾಗಲು ಹುಲಿ ಬಂದು ಒಂದು ಕುರಿಯನ್ನು ಎಳೆದುಕೊಂಡು ಹೋಯಿತು.
ನೋಡಿದಿರಾ ಮಕ್ಕಳೇ... ಸುಳ್ಳಿನ ಪರಿಣಾಮ!

ಇನ್ ಮ್ಯಾಲೆ ನಾವು ಸುಳ್ಳು ಹೇಳಕ್ಕಿಲ್ಲ ದೊಡ್ಡಪ್ಪ... ಅಪ್ಪನಿಗೂ ಸ್ವಲ್ಪ ಬುದ್ದಿ ಹೇಳು... ಮೊನ್ನೆ ನರಸ ಅಟ್ಟಿ ಹತ್ತಿರ ಬಂದು ಅಪ್ಪ ಎಲ್ಲಿ ಮೊಗಾ ಅಂತ ಕೇಳಿದ್ರು. ಅಪ್ಪ ಮನೆಯಲ್ಲಿಯೇ ಇದ್ದುಕೊಂಡು ನಾನಿಲ್ಲ ಅಂತ ಹೋಗಿ ಹೇಳು ಅಂದ್ರು. ಪಾಪ ಅವರು ನಿಜ ಅಂತ ತಿಳಿದು ಹೊರಟೋದ್ರು.
ಹಿರಿಯರು ಮಕ್ಕಳಿಗೆ ಕನ್ನಡಿ ಇದ್ದಂತೆ. ಮಕ್ಕಳ ವ್ಯಕ್ತಿತ್ವದ ಮೇಲೆ ಹಿರಿಯರ ನಡವಳಿಕೆಯ ಪ್ರಭಾವ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೀಳುತ್ತದೆ.
ಎಚ್ಚರ...! ಇಂದಿನ ಮಕ್ಕಳು ನಾಳೆಯ ಪ್ರಜೆಗಳು.
- -ಜಬೀವುಲ್ಲಾ ಖಾನ್.

0 comments:

Post a Comment