ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಷ್ಟ್ರ
ಮಂಗಳೂರು :ಅಡಿಕೆ ದಕ್ಷಿಣಕನ್ನಡ ಜಿಲ್ಲೆಯ ಜೀವನಾಡಿ ಬೆಳೆ. ಇಲ್ಲಿನ ಕೃಷಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ 27645 ಹೆಕ್ಟೇರಿಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಇಲ್ಲಿಯ ರೈತರು ತಲೆತಲಾಂತರದಿಂದಲೂ ಅಡಿಕೆ ಕೃಷಿ ಕೈಗೊಂಡಿದ್ದಾರೆ. ಅನೇಕ ವರ್ಷಗಳಿಂದಲೂ ಬೆಳೆಯುತ್ತಿದ್ದರೂ ಋತುಮಾನಕ್ಕೆ ಅನುಗುಣವಾಗಿ ಬೆಳೆಗೆ ಬರುವ ಕೀಟ ಮತ್ತು ರೋಗಗಳ ಸಮಸ್ಯೆಗಳಿಂದ ಅಡಿಕೆ ಬೆಳೆಯ ಗುಣಮಟ್ಟ ಹಾಗೂ ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುತ್ತಿದ್ದು ,ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಆದ್ದರಿಂದ ಅಡಿಕೆ ಬೆಳೆಗೆ ಬರುವ ರೋಗಗಳ ಕೀಟ ಬಾಧೆಗಳನ್ನು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆಗೆ ಮುಂದಾಗುವುದರಿಂದ ಇಳುವರಿ ಹೆಚ್ಚಿಸಿಕೊಳ್ಳಬಹುದಾಗಿದೆ.


ಈ ದಿಸೆಯಲ್ಲಿ ಕರ್ನಾಟಕ ಸರ್ಕಾರದ ತೋಟಗಾರಿಕಾ ಇಲಾಖೆ `` ಹಾರ್ಟಿ ಕ್ಲಿನಿಕ್ '' ಗಳನ್ನು ಸ್ಥಾಪಿಸಿದೆ. ಮಳೆಗಾಲದಲ್ಲಿ ಅಡಿಕೆಗೆ ಮುಖ್ಯವಾಗಿ ಕೊಳೆ ರೋಗ ಸಾಮಾನ್ಯ.ಈ ರೋಗವು ಅಡಿಕೆ ಇಳುವರಿಕಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಈ ರೋಗಕ್ಕೆ ತುತ್ತಾದ ಅಡಿಕೆ ತೋಟದಲ್ಲಿಶೇಕಡಾ 50 ರಿಂದ 90 ರಷ್ಟು ಬೆಳೆ ಹಾನಿಯಾಗುತ್ತದೆ. ಇದರ ಬಗ್ಗೆ ವೈಜ್ಞಾನಿಕ ಮಾಹಿತಿ ಕೊರತೆ,ಸೂಕ್ತವಾಗಿ ಬೋರ್ಡೋ ದ್ರಾವಣ ತಯಾರಿಸೆ,ಕ್ರಮಬದ್ಧವಾಗಿ ಸಿಂಪರಣೆ ಮಾಡದೆ ಅನಗತ್ಯ ಖಚರ್ುಗಳಿಂದಾಗಿ ಇಳುವರಿಯಲ್ಲಿ ಕುಂಠಿತವಾಗಿ ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ.

ಕೊಳೆರೋಗದ ಲಕ್ಷಣಗಳು

ಪ್ರಾರಂಭದಲ್ಲಿ ಅಡಿಕೆ ಕಾಯಿಗಳ ಮೇಲೆದ್ದೆಯಾದಂತಹ ಅಚ್ಚ ಹಸಿರು ಬಣ್ಣದ ಮಚ್ಚೆಗಳು ಕಂಡುಬರುತ್ತದೆ. ಅನಂತರ ಮಚ್ಚೆಗಳು ದೊಡ್ಡದಾಗಿ ಕಾಯಿಗಳ ಮೇಲ್ಭಾಗದಲ್ಲಿಒ ಆವರಿಸಿ ಕಾಯಿಗಳು ಕೊಳೆಯಲು ಆರಂಭವಾಗುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಅಡಿಕೆ ಕಾಯಿಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗಿ ತೊಟ್ಟಿನಿಂದ ಕಳಚಿ ಉದುರುತ್ತವೆ.

ರೋಗದ ಪ್ರಸರಣ

ಕೊಳೆರೋಗ ಫೈಟಾಪ್ರತ ಅರಕೆ ಎಂಬ ಶಿಲೀಂದ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಆರೋಗ್ಯವಂತ ಕಾಯಿಗಳನ್ನು ಅವರಿಸಿಕೊಂಡುನಾಲ್ಕೈದು ದಿನಗಳಲ್ಲಿ ಶಿಲೀಂದ್ರವು ಹೆಚ್ಚಾಗಿ ರೋಗ ಹರಡುತ್ತದೆ.ಕಡಿಮೆ ಉಷ್ಣಾಂಶ,ಹೆಚ್ಚು ಮಳೆ ತೇವಾಂಸದಿಂದ ಕೂಡಿದ ವಾತಾವರಣ ಒಟ್ಟು ಬರುವ ಮಳೆ ಬಿಸಿಲು ಈ ರೋಗ ಹರಡುವಿಕೆಗೆ ಅನುಕೂಲವಾಗಿರುತ್ತದೆ.

ಹತೋಟಿ ಕ್ರಮಗಳು

ಕೊಳೆ ರೋಗ ತಗುಲಿದ ಕಯಿಗಳು,ಒಣಗಿದ ಗೊಂಚಲುಗಳನ್ನು ತೆಗೆದು ನಾಶಪಡಿಸಬೇಕು. ಅಡಿಕೆ ಗೊನೆಗಳಿಗೆ ಪಾಲಿಥೀನ್ ಹೊದಿಕೆ ಕಟ್ಟುವುದರಿಂದಲೂ ರೋಗದ ಹತೋಟಿ ಸಾಧ್ಯ. 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಪ್ರತೀ ಲೀಟರ್ ನೀರಿನಲ್ಲಿ ಅಥವಾ ಶೇಕಡಾ 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಗೊನೆಗಳ ಮೇಲೆ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. 30-45 ದಿನಗಳ ಅಂತರದಲ್ಲಿ ಎರಡನೇ ಸಿಂಪರಣೆ ಮಳೆಗಾಲ ಮುಂದುವರಿದಲ್ಲಿ 3 ನೇ ಬಾರಿಯೂ ಸಿಂಪಡಿಸಬೇಕಾಗುತ್ತದೆ. ರೋಗಾಣು ಮಣ್ಣಿನ ಪದರದಲ್ಲಿ ಬದುಕುವುದರಿಂದ ಮಣ್ಣು ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು.

ಬೋರ್ಡೋ ದ್ರಾವಣ ತಯಾರಿಕಾ ವಿಧಾನ

ಬೋರ್ಡೋ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ ನಾಶಕ.ಇದನ್ನು ವೈಜ್ಞಾನಿಕವಾಗಿ ತಯಾರಿಸಿದರೆ ಮಾತ್ರ ಸಸ್ಯ ರೋಗಗಳ ಸಮರ್ಪಕ ನಿರ್ವಹಣೆ ಸಾಧ್ಯ.
ಬೋರ್ಡೋ ದ್ರಾವಣ ತಯಾರಿಕೆಗೆ ಬೇಕಾದ ವಸ್ತುಗಳು ಮೈಲುತುತ್ತು 1 ಕೆಜಿ,ಸುಣ್ಣ 1 ಕೆಜಿ, ನೀರು 100 ಲೀಟರ್, 10 ಲೀಟರ್ ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್,100 ಲೀಟರ್ ಸಾಮರ್ಥ್ಯದ ಒಂದು ಪ್ಲಾಸ್ಟಿಕ್ ಡ್ರಮ್.

1 ಕೆಜಿ ಮೈಲುತುತ್ತನ್ನು ಸಂಪೂರ್ಣ 10 ಲೀಟರ್ ನೀರಿನಲ್ಲಿ ಕರಗಿಸಬೇಕು. 1 ಕೆಜಿ ಸುಣ್ಣವನ್ನು ಮತ್ತೊಂದು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಎರಡನ್ನು ಒಂದು ಪ್ಲಾಸ್ಟಿಕ್ ಡ್ರಮ್ ಗೆ ಸುರಿಯಬೇಕು. ಈಗ ಬೋರ್ಡೋ ದ್ರಾವಣ ಸಿದ್ದ .ಇದು ಸರಿ ಇದೆಯೇ ಎಂದ ಪರೀಕ್ಷಿಸಲು ಶುದ್ಧವಾದ ಚಾಕು ಅಥವಾ ಬ್ಲೇಡ್ ನ್ನು ದ್ರಾವಣದಲ್ಲಿಕ ಅದ್ದಿ ತೆಗೆದಲ್ಲಿ ಅದರ ಮೇಲೆ ಕಂದು ಅಥವಾ ಕೆಂಪು ಬಣ್ಣ ಕಂಡುಬಂದಲ್ಲಿ ದ್ರಾವಣ ಆಮ್ಲಯುಕ್ತವಾಗಿದ್ದು,ಸಿಂಪರಣೆಗೆ ಯೋಗ್ಯವಾಗಿಲ್ಲ ಎಂಬುದಾಗಿ ತಿಳಿಯಬೇಕು. ಇದನ್ನು ಸರಿಪಡಿಸಲು ಇನ್ನೂ ಸ್ವಲ್ಪ ಸುಣ್ಣ ತಿಳಿಯನ್ನು ದ್ರಾವಣಕ್ಕೆ ಸೇರಿಸಬೇಕು. ನಂತರ ಚಾಕೂ ಬ್ಲೇಡ್ ನ್ನು ದ್ರಾವಣದಲ್ಲಿ ಅದ್ದಿದಾಗ ಅದು ಹೊಳಪಾಗಿದ್ದಲ್ಲಿ ದ್ರಾವಣ ಸಿಂಪರಣೆಗೆ ಸೂಕ್ತ ಎಂದು ತಿಳಿಯುವುದು ಹಾಗೂ ಕೂಡಲೇ ದ್ರಾವಣವನ್ನು ಸಿಂಪಡಿಸಬೇಕು.ಅಡಿಕೆ ಕೊಳೆರೋಗ ನಿಯಂತ್ರಿಸಲು ರೈತರು ಮೈಲುತತ್ತು ಬಳಸಿದ್ದಲ್ಲಿ ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್,ಜಿಲ್ಲಾ ವಲಯ ಸಸ್ಯ ಸಂರಕ್ಷಣೆ ಯೋಜನೆ ಹಾಗೂ ರಾಜ್ಯ ವಲಯ ತೋಟಗಾರಿಕಾ ಬೆಳೆಗಳ ರೋಗ ಮತ್ತು ಕೀಟಗಳ ಸಮಗ್ರ ನಿಯಂತ್ರಣ ಯೋಜನೆಗಳಲ್ಲಿ ಶೇ.50 ರಷ್ಟು ಸಹಾಯಧನ ದೊರೆಯಲಿದೆ.
ದಕ್ಷಿಣಕನ್ನಡ ಜಿಲ್ಲೆ ಉಡುಪಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಎ ಅಧಿಕವಾಗಿರುವುದರಿಂದ ರೈತರು ಅಡಿಕೆಬೆಳೆಗೆ ಕೊಳೆರೋಗ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ ಹೆಚ್ಚು ಇಳುವರಿ ಗುಣಮಟ್ಟದ ಬೆಳೆಬೆಳೆದು ಹೆಚ್ಚು ಲಾಭಗಳಿಸಬಹುದಾಗಿದೆ.

0 comments:

Post a Comment