ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಪೂಜಾಳ ಪ್ರಾಣ ಉಳಿಸಲು ನೆರವಾಗಿರಿ

ಸಕಲೇಶಪುರ : ಇಲ್ಲಿನ ಮಹೇಶ್ವರಿ ನಗರದ ನಿವಾಸಿ ಕುಮಾರಿ ಪೂಜಾ ತನ್ನ ಬೆನ್ನಿನ ಭಾಗದಲ್ಲಿ ಆದ ಮೂಳೆ ಸಂಬಂಧೀ ರೋಗದಿಂದ ನರಳುತ್ತಿದ್ದು ಸೆಪ್ಟಂಬರ್ ಹದಿನೇಳನೇ ತಾರೀಖಿಗೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾಳೆ. ಹುಟ್ಟಿನಿಂದಲೇ ಪೋಲಿಯೋ ಪೀಡಿತಳಾಗಿ ತನ್ನ ಜೀವನದ ಬಹುಪಾಲು ಸಮಯವನ್ನು ನೋವಿನೊಂದಿಗೆ ನರಳುತ್ತಾ ಬಂದ ಪೂಜಾ ಇದೀಗ ವೈದ್ಯರ ಸಲಹೆಯಂತೆ ಕಡ್ಡಾಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲೇ ಬೇಕಾಗಿದೆ. ಈ ಶಸ್ತ್ರ ಚಿಕಿತ್ಸೆ ಅತ್ಯಂತ ಕಠಿಣವಾಗಿದ್ದು ಸುಮಾರು ಹದಿನಾಲ್ಕು ಗಂಟೆಗಳ ಸಮಯ ಇದಕ್ಕೆ ಬೇಕಾಗಲಿದೆ. ಇವರ ತಂದೆ ಇಲ್ಲಿನ ನಿವಾಸಿ ಚಂದ್ರು ತೀರಾ ಬಡವರಾಗಿದ್ದು ಶಸ್ತ್ರಚಿಕಿತ್ಸೆಗೆ ಬೇಕಾದ ಹಣ ಹೊಂದಿಸಲು ಇವರ ಕೈಯಲ್ಲಿ ಸಾಧ್ಯವಿಲ್ಲ. ಆದ ಕಾರಣ ಅವರು ದಾನಿಗಳ ನೆರವನ್ನು ಎದುರು ನೋಡುತ್ತಿದ್ದಾರೆ.ಇಲ್ಲಿನ ಸಂತ ಜೋಸೆಫ್ ಬಾಲಕಿಯರ ಪ್ರೌಢ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಪೂಜಾ ಓದಿನಲ್ಲೂ ಅತ್ಯಂತ ಪ್ರತಿಭಾವಂತೆಯಾಗಿದ್ದು ಈಕೆ ಸೆಪ್ಟಂಬರ್ ಹನ್ನೆರಡನೇ ತಾರೀಖಿಗೆ ಶಸ್ತ್ರಚಿಕಿತ್ಸೆಯ ನಿಮಿತ್ತ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಬೇಕಿದೆ. ಆ ಸಮಯದಲ್ಲೇ ಅದರ ವೆಚ್ಚ ಎರಡೂವರೆ ಲಕ್ಷ ರೂಗಳನ್ನು ಇವರು ಆಸ್ಪತ್ರೆಗೆ ಕಟ್ಟಬೇಕಿದೆ. ಅದಕ್ಕಾಗಿ ದಯವಿಟ್ಟು ತಮ್ಮಲ್ಲಿ ವಿನಂತಿಕೊಳ್ಳುವುದೇನೆಂದರೆ ತಾವು ತಮ್ಮ ಕೈಲಾದಷ್ಟು ಧನ ಸಹಾಯವನ್ನು ನಮ್ಮ ಸಹೋದರಿ ಪೂಜಾಳ ಪ್ರಾಣ ಉಳಿಸಲು ನೀಡಬೇಕಿದೆ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ತಾವು ನೀಡುವ ತಮ್ಮ ಕೈಲಾದಷ್ಟು ಮೊತ್ತವೂ ಖಂಡಿತ ಈಕೆಯ ಪ್ರಾಣ ಉಳಿಸಲು ನೆರವಾಗಲಿದೆ.


ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆಯ ವಿವರ ಇಲ್ಲಿ ಪ್ರಕಟಿಸಿದ್ದೇವೆ ಹಾಗೂ ವೈದ್ಯರ ಧೃಡೀಕರಣ ಪತ್ರವನ್ನು ಸಹ ಇಲ್ಲಿ ಲಗತ್ತಿಸಿದ್ದೇವೆ. ದಯವಿಟ್ಟು ತಮ್ಮ ಕೈಲಾದಷ್ಟು ಸಹಾಯ ಮಾಡಿ ಪೂಜಾಳ ಪ್ರಾಣ ಉಳಿಸಲು ನೆರವಾಗಿರಿ .

ಬ್ಯಾಂಕ್ ಖಾತೆ ವಿವರ

pooja

Vijaya Bank
Vanijya Bhavana Bldg, Sakleshpura, Hassan District Karnataka -573134
IFSC code: VIJ B0001986
A/C # : 118601031000002

0 comments:

Post a Comment