ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಗೋಕರ್ಣ: ಲೋಕಕ್ಕೇ ಬೆಳಕು ನೀಡುವ ಸೂರ್ಯನಿಂದ ಪ್ರಸಿದ್ಧವಾದ ವಂಶದಲ್ಲಿ ಹುಟ್ಟಿ ಮಾನವರಾಗಿ ಹೇಗೆ ಬಾಳಬೇಕು ಎಂಬುದನ್ನು ವಿಶ್ವಕ್ಕೆ ಆದರ್ಶಮಯವಾದ ತನ್ನ ಜೀವನದ ನಡೆನುಡಿಗಳಿಂದ ತೋರಿಸಿಕೊಟ್ಟವನು ಮರ್ಯದಾ ಪುರುಷೋತ್ತಮನೆಂದೇ ಖ್ಯಾತನಾದ ಪ್ರಭು ಶ್ರೀರಾಮಚಂದ್ರ.ದಿವಿಭುವಿಗಳಿಗೆ ಧರ್ಮದ ಸೇತುವನ್ನು ಕಟ್ಟಿ ಅವತಾರ ಕಾರ್ಯವನ್ನು ಪೂರೈಸಿದ ಆ ಮಹಾತ್ಮನೇ ಆರಾಧ್ಯದೈವವಾದ ನಮ್ಮ ಈಮಠದಲ್ಲಿ ಸದಾ ಆತನ ಅರ್ಚನೆ,ಸ್ಮರಣೆ ನಡೆಯುತ್ತಲೇ ಇರುತ್ತದೆ.ರಾಮನ ಆದರ್ಶ ಇಷ್ಟಕ್ಕೇ ಸೀಮಿತವಾಗಬಾರದು.ಎಲ್ಲಡೆಗೂ ಶ್ರೀರಾಮನ ಸಂದೇಶವು ವಿಸ್ತೃತವಾಗಬೇಕು.


ಆ ಉದ್ದೇಶದಿಂದಲೇ ನಾವು ವಿನೂತನವಾದ ಶ್ರೀರಾಮಕಥಾ ವನ್ನು ಯೋಜಿಸಿ ಜನಮಾನಸದಲ್ಲಿ ರಾಮಾಯಣದ ಪುನರುತ್ಥಾನದ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.ಚಾತುರ್ಮಾಸ್ಯದ ನಿಮಿತ್ತವಾಗಿ ಅಶೋಕೆಯಲ್ಲಿ ಆಯೋಜಿತವಾಗಿದ್ದ ಕುಮುಟಾ ಮಂಡಲದ ಕಾರವಾರ,ಉಪ್ಪಿನಪಟ್ಟಣ,ಚಂದಾವರ ಹಾಗೂ ಮೂರೂರು-ಕಲ್ಲಬ್ಬೆ ವಲಯಗಳ ಶಿಷ್ಯಸಮುದಾಯದ ಶ್ರೀಗುರುದೇವತಾಸೇವೆಯನ್ನು ಹಾಗೂ ದೈವಜ್ಞಸಮಾಜದಶಿಷ್ಯರ ಶ್ರೀಗುರುಪಾದುಕಾಪೂಜೆಯನ್ನು ಸ್ವೀಕರಿಸಿ ಧರ್ಮಸಭೆಯಲ್ಲಿ ಆಶೀರ್ವಚನವನ್ನು ಅನುಗ್ರಹಿಸಿದರು.

ಪೂಜ್ಯಶ್ರೀಗಳು ರಾಮಾಯಣವು ನಮ್ಮ ಬದುಕಿನ ಆದರ್ಶದೀಪ.ಅದರಬೆಳಕಿನಲ್ಲಿ ನಡೆದಾಗ ನಮ್ಮ ಜೀವನ ಸಾರ್ಥಕ.ನಮ್ಮ ಪ್ರಯತ್ನ ರಾಮಾಯಣದ ಕಥೆಯನ್ನು ಕೇಳುವಷ್ಟಕ್ಕೇ ಸೀಮಿತವಾಗದೆ ಅದರ ತತ್ವಗಳನ್ನು ಬಾಳಿನಲ್ಲಿ ಅಳವಡಿಸಿಕೊಳ್ಳುವಂತಾದರೆ ಮಾತ್ರ ಉದ್ದೇಶವು ಸಫಲವಾಗುತ್ತದೆ.ಎಂದು ಹೇಳಿ ನಮ್ಮೆಲ್ಲರ ಜೀವನವೂ ರಾಮಮಯವಾಗಲಿಎಂದರು.ಅಲ್ಲದೆ ತೀವ್ರವಾದ ಕಲಬೆರಕೆ,ವಿಷಯುಕ್ತವಾದ ಆಹಾರವನ್ನು ಸೇವಿಸಿ ಸ್ವಾಸ್ಥ್ಯವನ್ನು ಹಾಳುಮಾಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ರಾಸಾಯನಿಕಮುಕ್ತವಾದ ಆಹಾರದ ಸೇವನೆಯ ಮೂಲಕ ಆರೋಗ್ಯಪೂರ್ಣಜೀವನ ಸಾಧ್ಯವೆಂದು ತೋರಿಸಿಕೊಡುವುದಕ್ಕಾಗಿಯೇ ಈ ಚಾತುರ್ಮಾಸ್ಯಕಾಲದಲ್ಲಿ ಸಂಪೂರ್ಣ ಸಾವಯವ ಸಾಮಗ್ರಿಗಳನ್ನು ಉಪಯೋಗಿಸಿ ಸಿದ್ಧಪಡಿಸಿದ ಆಹಾರವನ್ನೇ ಪ್ರಸಾದಭೋಜನದಲ್ಲಿ ನೀಡಲಾಗಿದೆ ಎಂದೂ ಹೇಳಿ ಮುಂದಿನ ದಿನಗಳಲ್ಲಿ ಈ ಕ್ರಮವು ಸಾರ್ವತ್ರಿಕವಾಗಲೆಂದೂ ಆಶಿಸಿದರು.

ಎಂದಿನಂತೆ ವಿಶಿಷ್ಟಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮೂಲಮಠನಿರ್ಮಾಣದೇಣಿಗೆ ಸಾವಿರದೆಡೆ ಅಭಿಯಾನ ಮೊದಲಾದ ಶ್ರೀಮಠದ ಯೋಜನೆಗಳ ವಿವರಣೆ ಹಾಗೂ ಸಮರ್ಪಣೆಗಳು ಆಯೋಜಿತವಾಗಿದ್ದವು.ಶ್ರೀಮಠದ ಸವಾರಿವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

- ವರದಿ: ಸತ್ಯನಾರಾಯಣ ಶರ್ಮ

0 comments:

Post a Comment