ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಗೋಕರ್ಣ : ಗೋಕರ್ಣದ ಸಮೀಪದ ಅಶೋಕಾವನದಲ್ಲಿ ಬರುವ ಹದಿನೈದನೆಯ ತಾರಿಕಿನಂದು ಗೋಕರ್ಣ ಹಾಗೂ ಪರಿಸರದ ಆಸಕ್ತರಿಗಾಗಿ ಉಚಿತ ರಕ್ತ ತಪಾಸಣೆ ಹಾಗೂ ಮಧುಮೇಹರೋಗ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 12-00 ಘಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ತಜ್ಞ ವೈದ್ಯರು ಆಗಮಿಸಲಿದ್ದು ತಪಾಸನೆಯೊಂದಿಗೆ ಉಚಿತ ಸಲಹೆಯನ್ನೂ ನೀಡಲಿದ್ದಾರೆ. ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ಸಾನ್ನಿಧ್ಯದಲ್ಲಿ ನಡೆಯುವ ಈ ಶಿಬಿರದಲ್ಲಿ ಕುಮುಟಾದ ಕೆನರಾ ಹೆಲ್ತ್ ಸೆಂಟರ್ ನ ಡಾ.ಜಿ.ಜಿ. ಹೆಗಡೆ ಹಾಗೂ ಸಹವೈದ್ಯರು ಆಗಮಿಸಲಿದ್ದು ಕುಮುಟಾ ಹವ್ಯಕಮಂಡಲದ ಆರೋಗ್ಯವಿಭಾಗವು ಈ ಶಿಬಿರವನ್ನು ಆಯೋಜಿಸಿದೆ. ಪರಿಸರದ ಎಲ್ಲ ಮಧುಮೇಹ ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಹಾಗೂ ಅಶೋಕೆಯ ಉದ್ಯಮಿ ದೇವಶ್ರವ ಶರ್ಮಾ ಹಾಗೂ ಅರುಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 comments:

Post a Comment