ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಮಣ್ಣಿನಲ್ಲಿ ಮಾಯವಾದ ಕೆತ್ತನೆಗಳು

ಇದು ಕಾಲಗರ್ಭದೊಳು ಹುದುಗಹೊರಟ ಪುರಾತನ ದೇಗುಲವೊಂದರ ಕಥೆ...ವ್ಯಥೆ.ಅನೇಕಾನೇಕ ಐತಿಹ್ಯಗಳನ್ನು ತನ್ನೊಡಲೊಳಗೆ ಕೂಡಿಟ್ಟ ಈ ಪುರಾತನ ದೇಗುಲ ಇಂದು ಮಣ್ಣೊಳಗೆ ಮಣ್ಣಾಗುವ ಸ್ಥಿತಿಯಲ್ಲಿದೆ. ಜೀರ್ಣಾವಸ್ಥೆಯಲ್ಲಿರುವ ಈ ದೇಗುಲ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಬೈಲಂಗಡಿಯ ತೋಟತ್ತಾಡಿಯಲ್ಲಿರುವ ಈ ಶಿವ ಗುಡಿಯಲ್ಲಿ ಅನೇಕ ವಿಶೇಷತೆಗಳಿವೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಈ ಶಿವ ಗುಡಿಯು ಇಂದು ಕೂಡ ಹಾಗೆಯೇ ಉಳಿದು ಕೊಂಡಿದೆ. ಅಲ್ಲಲ್ಲಿ ಬಿದ್ದು ಕೊಂಡಿರುವ ಅನೇಕ ಶಾಸನಗಳು ಹಾಗು ಕಲ್ಲಿನಿಂದ ಕೆತ್ತಲ್ಲಟ್ಟ ಸುಂದರವಾದ ಕಲ್ಲಿನ ಕೆತ್ತನೆಗಳು ನೋಡುಗರ ಕಣ್ಣಿಗೆ ಮುದ ನೀಡುತ್ತದೆ.
ಇಲ್ಲಿನ ಈ ಗುಡಿಯ ಹೊರಾಂಗಣದಲ್ಲಿ ವಿಶಿಷ್ಟವಾಗಿ ರಚಿಸಲ್ಪಟ್ಟ ಕೆತ್ತನೆಗಳು ರಾಜಮನೆತನದ ಆಳ್ವಿಕೆಗಳ ಕುರುಹನ್ನು ತಿಳಿಸುತ್ತದೆ. ಬೈಲಂಗಡಿಯ ಈ ಶಿವ ಗುಡಿಯನ್ನು ರಾಣಿ ಸೋಮಲಾದೇವಿ ಸ್ಥಾಪಿಸಿದಳು ಎಂಬ ಪ್ರತೀತಿ ಇದೆ.


ಸ್ಥಂಭದಲ್ಲಿ ಕೆತ್ತಿರುವ ಹಾವಿನಾಕೃತಿಯ ಕೆಲವು ಕೆತ್ತನೆಗಳು ಅಚ್ಚರಿಮೂಡಿಸುತ್ತವೆ. ಆನೆಯ ಕೆತ್ತನೆಗಳು ಮತ್ತು ಮಣ್ಣಿನಲ್ಲಿ ಹೂತಿರುವ ಕೆಲವೊಂದು ಬೃಹದಾಕಾರದ ಕಂಬಗಳು ನಮಗೆ ಕಾಣ ಸಿಗುತ್ತದೆ. ಗುಡಿಯ ಒಳಗಿರುವ ಕೆತ್ತನೆಗಳನ್ನು ನೋಡಿದರೆ ಅದು ವಿಜಯ ನಗರದ ಅರಸರ ಕಾಲದಲ್ಲಿ ನಿರ್ಮಿತವಾದ ಶಿವ ದೇವಾಲಯಗಳೆಂದು ಊಹಿಸಬಹುದು.

ಐತಿಹಾಸಿಕ ಕುರುಹುಗಳಿರುವ ಈ ದೇವಾಲಯದ ಅವಶೇಷಗಳು ಅವಸಾನದತ್ತ ಸಾಗುತ್ತಿದೆ ಆದರೆ ಯಾರು ಕೂಡ ಇದರ ಬಗ್ಗೆ ತಲೆಕೆಡಿಸಿ ಕೊಳ್ಳದಿರುವುದು ವಿಪರ್ಯಾಸವೇ ಸರಿ.

ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ಚಾರ್ಮಾಡಿ ರಸ್ತೆಯಲ್ಲಿ 20ಕಿಲೋಮೀಟರ್ ಗಳಷ್ಟು ಮುಂದೆಸಾಗಿದಾಗ ಸಿಗುವ ಗಂಡಿಬಾಗಿಲು ಕಾಯರ್ತಡ್ಕ ಎಂಬಲ್ಲಿ ಅಳಿವಿನಂಚಿನ ಸ್ಥಿತಿಯಲ್ಲಿರುವ ಈ ಪುರಾತನ ದೇಗುಲವನ್ನು ಉಳಿಸುವತ್ತ ಚಿಂತಿಸಬೇಕಾಗಿದೆ. ಸುಂದರ ಕೆತ್ತನೆಗಳು, ಅನೇಕ ಶಾಸನಗಳನ್ನೊಳಗೊಂಡಿರುವ ಈ ದೇಗುಲ ಒಂದು ಆಸ್ತಿ. ಪುರಾತತ್ವ ಇಲಾಖೆ ಇದರತ್ತ ಗಮನ ಹರಿಸಬೇಕಾಗಿದೆ.- ಮಾಣಿಕ್ಯ ಎಂ
ಎಸ್.ಡಿ.ಎಂ ಕಾಲೇಜ್ ಉಜಿರೆ.

0 comments:

Post a Comment