ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಪಂಕಜ್ ಅಡ್ವಾಣಿ, ಭಾರತೀಯ ಕ್ರೀಡಾಪ್ರೇಮಿಗಳಿಗೆ ಚಿರಪರಿಚಿತ ಹೆಸರು, ಬಿಲಿಯರ್ಡ್ಸ್ ಮತ್ತು ಸ್ನೂಕರ್ಗಳಲ್ಲಿ ವಿಶ್ವಚಾಂಪಿಯನ್ ಪಟ್ಟ ಹೊಂದಿರುವ ಇವರು ಭಾರತಕ್ಕೊಂದು ಹೆಮ್ಮೆ.ಜುಲೈ24,1985ರಂದು ಪುಣೆಯಲ್ಲಿ ಹುಟ್ಟಿದ ಈತ ಓದಿದ್ದು ಬೆಂಗಳೂರಿನ ಫ್ರಾಂಕ್ ಅಂಥೋನಿ ಪಬ್ಲಿಕ್ ಸ್ಕೂಲಿನಲ್ಲಿ, ಮುಂದೆ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜು ಬೆಂಗಳೂರಿನಲ್ಲಿ ವ್ಯಾವಹಾರಿಕ ಸಂವಹನದಲ್ಲಿ ಪದವಿ ಪಡೆದರು.
ಸ್ನೂಕರ್ ಮತ್ತು ಬಿಲಿಯರ್ಡ್ಸ್ ನಲ್ಲಿ ಮೊದಲಿಂದಲೇ ಆಸಕ್ತಿಹೊಂದಿದ್ದ ಪಂಕಜ್ ತನ್ನ ಪ್ರಥಮ ವಿಶ್ವಚಾಂಪಿಯನ್ ಕಿರೀಟ ಪಡೆದಿದ್ದು 2003ರಲ್ಲಿ ಚೈನಾದಲ್ಲಿ ನಡೆದ ಐಬಿಎಸ್ ಎಫ್ವಲ್ಡ್ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಅಲ್ಲಿಂದಾಚೆಗೆ ಅಡ್ವಾಣಿ ಹಿಂತಿರುಗಿ ನೊಡಲೇ ಇಲ್ಲ.2005ರಲ್ಲಿ ಮಾಲ್ನಾಡ ಕ್ಯಾರದಲ್ಲಿ ನಡೆದ ಐ.ಎಸ್. ಬಿ.ಎಫ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲೂ ವಿಜಯಿಯಾದರೂ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಎರಡರಲ್ಲೂ ವಿಶ್ವಚಾಂಪಿಯನ್ ಆದ ವಿಶ್ವದ 2ನೇ ಆಟಗಾರನೆಂಬ ಖ್ಯಾತಿ ಪಡೆದರು. ಮೊದಲು ಈ ಗೌರವಕ್ಕೆ ಮಾಲ್ವಾದ ಪೌಲ್ ಮಿಸ್ ಫೀಟ್ ಪಾತ್ರರಾಗಿದ್ದರು.
ಈ ಬಾರಿಯ ಕಾಮನ್ ವೆಲ್ತ್ನಲ್ಲಿ ಸ್ವರ್ಣಪಡೆದು ಮಿಂಚಿದ್ದ ಅಡ್ವಾಣಿ, ಏಷಿಯನ್ಗೇಮ್ಸ್ ನಲ್ಲಿ ಯಾವಾಗಲೂ ಸ್ವರ್ಣಗೆಲ್ಲುವ ಕುದುರೆ. 2001ರಲ್ಲಿ ಪದ್ಮಶ್ರೀ ಯಿಂದ ಪುರಸ್ಕೃತರಾದ ಅಡ್ವಾಣಿ 2005-06ನೇ ಸಾಲಿನ ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. 2009ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೂಡ ಇವರಿಗೊಲಿದಿದೆ. ಒಟ್ಟಿನಲ್ಲಿ ಹೇಳುವುದಾದರೆ ದೇಶದ ಕೀರ್ತಿಯನ್ನು ವಿಶ್ವದಲ್ಲೆಡೆ ಹಬ್ಬಿಸಿದ ಪಂಕಜ್ ಕೀರ್ತಿ ಇನ್ನೂ ಹೆಚ್ಚಾಗಲಿ ಎಂಬುದು ಭಾರತದ ಪ್ರತಿಯೊಬ್ಬ ಪ್ರಜೆಯ ಆಶಯ.

ಬರಹ: ಸನತ್ ಭಟ್,
ದ್ವಿತೀಯ ಎಂ.ಸಿ.ಜೆ, ಎಸ್.ಡಿ.ಎಂ.ಕಾಲೇಜು , ಉಜಿರೆ.

0 comments:

Post a Comment