ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಹಾಯ್ ಫ್ರೆಂಡ್ಸ್,
ಇದೊಂದು ಸತ್ಯ ಘಟನೆ. ಅಂದು ಜೂನ್ 13. ಕಾಲೇಜು ಪ್ರಾರಂಭವಾದ ಮೊದಲ ದಿನ. ಕ್ಲೋಸ್ ಫ್ರೆಂಡ್ಸ್ನಿಂದ ಹಿಡಿದು ಹಾಯ್ ಬಾಯ್ ಫ್ರೆಂಡ್ಸನ್ನು ನೋಡಿ ಮನತಲ್ಲಣಿಸುವ ಉತ್ಸಾಹ. ಆಗ ತಾನೇ ನಾನು ತೃತೀಯ ಪದವಿಗೆ ಬಂದಿದ್ದೆ. ನಾನು ಪತ್ರಿಕೋದ್ಯಮ ವಿದ್ಯಾರ್ಥಿನಿಯಾದುದರಿಂದ ಸಹಜವಾಗಿ ಜನರಲ್ ನಾಲೇಡ್ಜನ್ನು ಪ್ರತೀ ತರಗತಿ ಪ್ರಾರಂಭದಲ್ಲಿಯೇ ಹೇಳುವುದು ಅಥವಾ ಏನೋ ಒಂದು ಅನುಭವ ಕಥನವನ್ನು ಹೇಳಿ ವಿಧ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ರೂಪಿಸುವುದು ನಮ್ಮ ಉಪನ್ಯಾಸಕರ ರೂಢಿ.


ಅಂದು ಹೀಗೆ ಕ್ಲಾಸಲ್ಲಿ ಕುಳಿತು ಪಾಠ ಕೇಳ್ತಾ ಇರ್ಬೇಕಾದ್ರೆ ಸರ್ ತಟ್ಟನೆ ಒಂದು ವಿಷಯವನ್ನು ಪ್ರಸ್ತಾಪಿಸಿದರು. ಕೆಲವೇ ದಿನಗಳ ಹಿಂದೆ ನಮ್ಮ ಸೀನಿಯರ್ ಬ್ಯಾಚ್ನಲ್ಲಿ ಕಲಿತಿದ್ದ ಹುಡುಗಿಗೆ ಕಿಡ್ನಿ ವೈಫಲ್ಯವಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿಗಳ ಅಗತ್ಯವಿದೆ. ಕೊನೆಪಕ್ಷ ದುಡ್ಡು ಒದಗಿಸಿದರೂ ಬದುಕುವ ಸಾಧ್ಯತೆಗಳು ಬಹಳ ಕಡಿಮೆ ಎಂದು ವೈದ್ಯರು ಆಗಲೇ ಉಸುರಿಬಿಟ್ಟಿದ್ದರು. ಹೆತ್ತವರಿಗಂತೂ ಆಕಾಶವೇ ಕಳಚಿಬಿದ್ದ ಅನುಭವ. ಅದರಲ್ಲೂ ಅವರದು ಮಧ್ಯಮ ವರ್ಗದ ಕುಟುಂಬ ಬೇರೆ. ಆದರೂ ಆಕೆಯಿಂದ ವಿಷಯವನ್ನು ಮುಚ್ಚಿಟ್ಟಿದ್ದರು. ನಂತರ ಆಕೆಗೂ ನಿಧಾನವಾಗಿ ಯಾವುದೋ ಮೂಲದಿಂದ ವಿಷಯ ತಿಳಿದು ತಾನಿನ್ನು ಬದುಕೋದು ಕೆಲವೇ ದಿನಗಳು ಅಂತ ಗೊತ್ತಾಯಿತು. ಆಕೆ ಸಹಜವಾಗಿಯೇ ಜೀವನದಲ್ಲಿ ಉತ್ಸಾಹ ಕಳೆದುಕೊಂಡಳು.

ಈ ವಿಷಯ ಯಾವುದೋ ಒಬ್ಬ ಕ್ಲಾಸ್ಮೇಟ್ಗೆ ತಿಳಿದು, ಅದು ಒಬ್ಬರಿಂದ ಒಬ್ಬರಿಗೆ ತಿಳಿಯುತ್ತಿದ್ದಂತೆ ಆಕೆಯ ಸಹಪಾಠಿಗಳೆಲ್ಲ ತಕ್ಷಣವೇ ಧಾವಿಸಿ ಬಂದು ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಈಗ ಅವರೆಲ್ಲರೂ ತಮ್ಮದೆ ಆದ ಜೀವನಕ್ಕೆ ಅಡಿಪಾಯವನ್ನು ಹಾಕಿದ್ದಾರೆ. ಈ ನಡುವೆ ಈ ಬಡ ಗೆಳತಿ ಎಲ್ಲೋ ಮರೆತು ಹೋಗಬೇಕಿತ್ತು ಆದರೆ ಹಾಗಾಗಲಿಲ್ಲ. ವೈದ್ಯರ ಬಳಿಗೆ ತೆರಳಿ ಚರ್ಚಿಸಿ ಎಷ್ಟೇ ಖರ್ಚಾದರೂ ಆಕೆಯ ಜೀವ ಉಳಿಯಬೇಕು ಎಂದರು. ಸ್ನೇಹಿತರು ನೀಡಿದ ಧೈರ್ಯವೇ ಆಕೆಗೆ ಉಸಿರಾಯ್ತು. ಆಕೆ ಈಗ ಬಹುಮಟ್ಟಿಗೆ ಚೇತರಿಸಿಕೊಂಡಿದ್ದಾಳೆ. ಬಾಡಿ ಹೋದ ಬಳ್ಳಿಗೆ ಜೀವ ಬಂದಿದೆ.

ಇವರಲ್ಲಿ ಕೇವಲ ಸಹಾಯ ಮಾಡೋ ಗುಣ ಇರೋದು ಮಾತ್ರವಲ್ಲ. ತಮ್ಮೊಂದಿಗೆ ಸಹಪಾಠಿಯಾಗಿದ್ದು ಆಕೆಯಿಂದ, ತರಗತಿಯಿಂದ ದೂರವಾಗಿ ಅದೆಷ್ಟೋ ವರ್ಷಗಳು ಕಳೆದಿದ್ದರೂ ಸಹಪಾಠಿಯ ನೆನಪು ಅಚ್ಚಳಿಯದೇ ಉಳಿದಿದ್ದು ಆದರ್ಶವೇ ಸರಿ.
ಈಗಂತೂ ಫಾದರ್ಸ್ ಡೇ, ಮದರ್ಸ್ ಡೇ, ಲವ್ವರ್ಸ್ ಡೇ, ಆ ಡೇ ಈ ಡೇ ಅಂತ ಎಲ್ಲಾ ಕಡೆನೂ ಡೇಗಳದ್ದೇ ಕಾರುಬಾರು ಅಲ್ವಾ? ಆದ್ರೆ ಎಲ್ಲಾ ಡೇಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಇವು ಎಲ್ಲಾ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಬಂದಿದ್ದರೂ ಇದೀಗ ಭಾರತೀಯ ಸಂಸ್ಕೃತಿಯಲ್ಲೂ ಬೇರೂರಿಬಿಟ್ಟಿದೆ. ಈ ಡೇಗಳ ಮಧ್ಯೆ ಫ್ರೆಂಡ್ಶಿಪ್ ಡೇ ಕೂಡ ಒಂದಾಗಿದೆ. ಆದರೆ ಈ ಡೇ ಮೇಲಿನ ಕಥೆಗೆ ಸಾಕ್ಷಿಯಾಗಲಿ.

ಆ ದಿನ ಪಾರ್ಟಿ , ಪಾರ್ಟಿ, ಪಾರ್ಟಿ ಎಲ್ಲೋ ಪ್ರತಿಷ್ಠಿತ ಹೋಟೇಲ್ಗಳಲ್ಲೋ, ಎಲ್ಲೋ ಫ್ರೆಂಡ್ಸ್ಗಳ ಮಧ್ಯೆಯೋ, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವುದು, ಫ್ರೆಂಡ್ಗೆ ಬೆಲೆಬಾಳುವ ಗಿಫ್ಟ್ ಕೊಡುವುದು ಇದು ಈಗಿನ ಫ್ರೆಂಡ್ಶಿಪ್ನ ಪದ್ದತಿ.
ಫ್ರೆಂಡ್ಸ್, ಫ್ರಂಡ್ಷಿಪ್ ಎಂದರೆ ಈ ತರ ಇರದೆ ಒಬ್ಬ ಫ್ರೆಂಡ್ನ ಕಷ್ಟ ಸುಖಗಳೆರಡರಲ್ಲೂ ಭಾಗಿಯಾಗುವುದು ಆಧ್ಯ ಕರ್ತವ್ಯ. ಇದಕ್ಕೆ ಮೇಲೆ ನೀಡಿದ ಉದಾಹರಣೆಯೇ ಜೀವಂತ ಸಾಕ್ಷಿ. ಗೆಳೆತನಕ್ಕೆ ತಿಳಿದವರು ಸಾಕಷ್ಟು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಗೆಳೆತನವೆಂಬುದು ಕಷ್ಟಕಾಲದಲ್ಲಿ ನೆರವಾಗುವ, ಸದಾ ಒಳಿತನ್ನು ಬಯಸುವ ಒಂದು ಅಸಾಧ್ಯ ಭಾಂಧವ್ಯ. ಗೆಳೆತನದಲ್ಲಿ ಸ್ವಾರ್ಥ ಇರಲಿ ಆದರೆ ಸ್ವಾರ್ಥದಲ್ಲಿ ಗೆಳೆತನ ಬೇಡ. ಇದು ಕಾಲೇಜಿನ ದಿನಗಳಲ್ಲಿ ಮಾತ್ರ ಇದ್ದು ಕಣ್ಣೆದುರಿನಿಂದ ದೂರವಾದಂತೆಯೇ ಗೆಳೆತನ ದೂರವಾಗದಿರಲಿ ಈ ಸ್ನೇಹ ಎಂದೂ ಚಿರವಾಗಿರಲಿ.

ಬರಹ:ವಿಸ್ಮಿತ ಎಡಮಂಗಲ
ತೃತೀಯ ಪದವಿ ಪತ್ರಿಕೋದ್ಯಮ ವಿಭಾಗ
ಎಸ್. ಡಿ. ಎಂ. ಕಾಲೇಜು ಉಜಿರೆ

1 comments:

sumithra said...

vismitha gelethanada nijavada vyakyana idu. idaralli vasthavathe ide.

Post a Comment