ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮಂಗಳೂರು :ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುವಲ್ಲಿ ಸಮನ್ವಯಕಾರರ ಪಾತ್ರ ಪ್ರಮುಖವಾಗಿದ್ದು, ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಸಮನ್ವಯಕಾರರ ಪಾತ್ರ ಹಿರಿದು ಎಂದು ರೋಶನಿಲಯ ಪ್ರಾಂಶುಪಾಲರಾದ ಜೆಸಿಂತ ಡಿಸಿಲ್ವಾ ಅವರು ಹೇಳಿದರು. ನಂತೂರಿನ ಶಾಂತಿಕಿರಣದ ಪ್ಯಾಸ್ಟರ್ ಇನ್ಸ್ಟಿಟ್ಯೂಟ್ ನಲ್ಲಿ ಜಿಟಿಝಡ್(ಜರ್ಮನ್ಟೆಕ್ನಿಕಲ್ ಕೋ ಆಪರೇಷನ್) ಸಹಯೋಹದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ ತಾಲೂಕುಗಳ ಗ್ರಾಮ ಪಂಚಾಯಿತಿ ಮತ್ತು ಸಮುದಾಯ ಸೌಲಭ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲಿರುವ ಸಮುದಾಯ ಸೌಲಭ್ಯೀಕರಣಿಕರಿಗೆ 3ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.



ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ಆಯುಕ್ತರಾದ ವೆಂಕಟೇಶಅಪ್ಪಯ್ಯ ಶಿಂಧಿಹಟ್ಟಿ ಅವರು, ಎರಡು ವರ್ಷದಿಂದಜಿ ಟಿ ಝಡ್ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲು ಹಂತಹಂತವಾಗಿ ಕ್ರಮ ಕೈಗೊಂಡಿದ್ದು, ಒಂದೆಡೆಯಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳು ಅರ್ಹರಿಗೆ ದೊರೆಯುವಂತಾಗಿಸಲು ಈ ಯೋಜನೆ ರೂಪಿಸಲಾಗಿದೆ ಎಂದರು. ಅಸಂಘಟಿತ ಕಾರ್ಮಿಕರೇ ಹೆಚ್ಚಾಗಿರುವ ನಮ್ಮಲ್ಲಿ ಅವರಿಗೊಂದು ಸಾಮಾಜಿಕ ಭದ್ರತೆ ನೀಡುವ ಯೋಜನೆ ಉತ್ತಮದ್ದಾಗಿದೆ ಎಂದರು. ಕೃಷಿ ಕಾರ್ಮಿಕರು, ನಿರ್ಮಾಣಕಾರ್ಮಿಕರು, ಗೃಹ ಕೃತ್ಯದ ಕಾರ್ಮಿಕರು, ವಸ್ತ್ರೋದ್ಯಮಕಾರ್ಮಿಕರು ಅಗರ ಬತ್ತಿ ಕಾರ್ಮಿಕರು ಇವರಿಗೆ ಸಂಬಂಧಿಸಿದೆ.
ಸರಕಾರದ ಸಾಮಾಜಿಕ ಸಹಾಯ ಕಾರ್ಯಕ್ರಮಗಳಾದ ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಸ್ತ್ರೀ ಶಕ್ತಿ, ವೃದ್ಧಾಪ್ಯ ವೇತನ, ಹೊಸ ಪಿಂಚಣಿಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಳಂತಹ ಸೌಲಭ್ಯಗಳನ್ನು ಅಸಂಘಟಿತ ವಲಯದವರಿಗೆ ಒದಗಿಸುವುದರೊಂದಿಗೆ ಪ್ರಥಮ ಹಂತದಲ್ಲಿ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳದ ಐವತ್ತು ಗ್ರಾಮಪಂಚಾಯಿತಿ ಹಾಗೂ ವಾರ್ಡುಗಳಲ್ಲಿ ಜಾರಿಗೊಳಿಸಲಾಗುವುದು ಎಂದರು.
ತರಬೇತಿ ಸಮನ್ವಯಾಧಿಕಾರಿ ಜಲಜಾ, ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ್, ಶಂಕರ್ ಉಪಸ್ಥಿತರಿದ್ದರು. ಸ್ವಾತಿ ಪ್ರಾರ್ಥಿಸಿದರು.ಜಿಲ್ಲಾ ಸಮನ್ವಯಾಧಿಕಾರಿ ಅಕ್ಷತಾ ಸ್ವಾಗತಿಸಿದರು.ಹಿರಿಯ ಕಾರ್ಮಿಕ ನಿರೀಕ್ಷಕರಾದ ಸತ್ಯನಾರಾಯಣ ವಂದಿಸಿದರು.

0 comments:

Post a Comment