ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:49 PM

ವಕ್ರಾಸನ

Posted by ekanasu

ವೈವಿಧ್ಯ
ಈ ಆಸನವು ಕುಳಿತು ತಿರುಚಿ ಮಾಡುವ ಸರಳ ಭಂಗಿಯಾಗಿದೆ.ಅಭ್ಯಾಸ ಕ್ರಮ : ಎರಡು ಕಾಲುಗಳನ್ನು ನೇರವಾಗಿ ಚಾಚಿ ಕುಳಿತುಕೊಳ್ಳಬೇಕು. ಉಸಿರನ್ನು ಬಿಡುತ್ತಾ ಎರಡು ಕೈಗಳ ಸಹಾಯದಿಂದ ಬಲಗಾಲನ್ನು ಮಡಿಸಿ ಎಡ ಮಂಡಿಯ ಬಲ ಪಕ್ಕದಲ್ಲಿರಿಸಬೇಕು. ಆಮೇಲೆ ಉಸಿರನ್ನು ತೆಗೆದುಕೊಂಡು ಬಲ ಕೈ ನೇರವಾಗಿಸಿ, ಉಸಿರನ್ನು ಬಿಡುತ್ತಾ ನಿಧಾನವಾಗಿ ಕಣ್ಣುಗಳಿಂದ ಬಲ ಕೈಯ ಮಧ್ಯದ ಬೆರಳುಗಳನ್ನು ನೋಡುತ್ತಾ ದೇಹವನ್ನು ಬಲ ಬದಿಗೆ ತಿರುಗಿಸಿ ಬಲ ಕೈಯನ್ನು ನೆಲಕ್ಕೆ ಊರಬೇಕು ಮತ್ತು ಬೆನ್ನು, ಕುತ್ತಿಗೆ ನೇರವಾಗಿಸಬೇಕು. ಆಮೇಲೆ ಎಡಕೈಯಿಂದ ಬಲಗಾಲಿನ ಪಾದ ಅಥವಾ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು. ಎಡಕಾಲು ನೇರವಾಗಿರಬೇಕು. ಈ ಸ್ಥಿತಿಯಲ್ಲಿ 20 ಸೆಕೆಂಡಿನಷ್ಟು ಸಮ ಉಸಿರಾಟ ನಡೆಸುತ್ತಾ ಮರಳಿ ಸ್ಥಿತಿಗೆ ಬರಬೇಕು. ಇದೇ ರೀತಿ ಎಡ ಭಾಗದಲ್ಲಿ ಅಭ್ಯಾಸ ಮಾಡಬೇಕು. ಅನಂತರ ತುಸು ವಿಶ್ರಾಂತಿ.

ಉಪಯೋಗಗಳು
ಈ ಆಸನದಲ್ಲಿ ಬೆನ್ನು ಹುರಿಯ ಸ್ಥಿತಿಸ್ಥಾಪಕ ಶಕ್ತಿ ಹೆಚ್ಚಿ ಬೆನ್ನು ನೋವು ನಿವಾರಣೆಯಾಗುವುದು. ಹೊಟ್ಟೆಗೆ, ಸೊಂಟಕ್ಕೆ ಮೃದುವಾದ ವ್ಯಾಯಾಮ ದೊರೆತು ಮಲಬದ್ಧತೆ, ಇತ್ಯಾದಿ ನಿವಾರಣೆಯಾಗುವುದು. ಈ ಆಸನದಿಂದ ಹೊಟ್ಟೆಯ ಬೊಜ್ಜು ಕರಗಲು ಸಹಾಯವಾಗುವುದು. ಮೂತ್ರದೋಷ ಮತ್ತು ಮಧುಮೇಹ ಸಮಸ್ಯೆ ನಿವಾರಣೆಗೆ ಈ ಆಸನ ಉಪಯುಕ್ತವಾಗಿದೆ ಹಾಗೂ ಕುತ್ತಿಗೆ, ಭುಜಗಳ, ಕೈಗಳ ನೋವು ಪರಿಹಾರವಾಗುತ್ತದೆ.

-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು

0 comments:

Post a Comment