ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಗೋಕರ್ಣ: ಖ್ಯಾತ ಧಾರ್ಮಿಕ ಗುರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರಗುರೂಜಿಯವರು ಐತಿಹಾಸಿಕ ಶೈವಕ್ಷೇತ್ರ ಗೋಕರ್ಣಕ್ಕೆ ಭೇಟಿ ನೀಡಿ ಸಾರ್ವಭೌಮ ಶ್ರೀಮಹಾಬಲೇಶ್ವರ ಹಾಗೂ ಶ್ರೀಮಹಾಗಣಪತಿ,ತಾಮ್ರಗೌರಿ ದೇವಾಲಯಗಳನ್ನು ಸಂದರ್ಶಿಸಿದರು.ಈ ಸಂದರ್ಭದಲ್ಲಿ ಸ್ವತಃ ಶ್ರೀಮಹಾಬಲೇಶ್ವರನನ್ನು ಅಭಿಷೇಕ,ಆರಾಧನೆಗಳ ಮೂಲಕ ಅರ್ಚಿಸಿ ಶ್ರೀರವಿಶಂಕರಗುರೂಜಿಯವರು ಲೋಕಕಲ್ಯಾಣಕ್ಕಾಗಿ ಶ್ರೀದೇವರನ್ನು ಪ್ರಾರ್ಥಿಸಿದರು.ನಂತರ ಶ್ರೀಗುರೂಜಿಯವರು ಇಲ್ಲಿಯ ಇತಿಹಾಸವನ್ನು ಕೇಳಿ ತಿಳಿದುಕೊಂಡರಲ್ಲದೆ ಶತಶತಮಾನಗಳಿಂದ ಇಲ್ಲಿ ಉಳಿದು ನಿರಂತರವಾಗಿ ಲೋಕಶಂಕರನನ್ನು ಅರ್ಚಿಸುತ್ತ ಬಂದಿರುವ ಸ್ಥಳೀಯ ವೈದಿಕಸ್ತೋಮವನ್ನು ಆಸ್ತಿಕಶ್ರದ್ಧಾಳುಗಳನ್ನು ಪ್ರಶಂಸಿಸಿದರು.

ಅರ್ಚಕರ ತಪೋಯೋಗದಿಂದಾಗಿ ಶಿಲೆಯಲ್ಲಿಯೂ ಶಂಕರನ ದಿವ್ಯಸಾನ್ನಿಧ್ಯವು ಸ್ಥಿರವಾಗುತ್ತದೆ.ವಿಶ್ವದಲ್ಲಿಯೇ ಪರಮೇಶ್ವರನ ಏಕೈಕಪ್ರಾಣಲಿಂಗವನ್ನು ಹೊಂದಿರುವ ಗೋಕರ್ಣವು ಅತ್ಯಂತ ಪುನೀತಕ್ಷೇತ್ರವಾಗಿದೆಯೆಂದು ಹೇಳಿದ ಗುರೂಜಿ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಯುತ್ತಿರುವ ಕೋಟಿರುದ್ರ ಕಾರ್ಯಕ್ರಮದ ಬಗ್ಗೆ ಹಾಗೂ ಶ್ರೀದೇವಾಲಯದ ಆಡಳಿತವ್ಯವಸ್ಥೆಯ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ದೇವಾಲಯದ ಆಡಳಿತದ ಪರವಾಗಿ ಜಿ.ಕೆ.ಹೆಗಡೆ ಗೋಳಗೋಡು, ಉಪಾಧಿವಂತ ಮಂಡಳದ ಅಧ್ಯಕ್ಷ ವೇ.ಗಣೇಶ ನಾರಾಯಣ ಹಿರೇಗಂಗೆ,ವೇ.ಶಿತಿಕಂಠ ಭಟ್ ಹಿರೇ,ವೇ.ರಾಮಕೃಷ್ಣ ಭಟ್ ಶಂಕರಲಿಂಗ ವೇ.ಪರಮೇಶ್ವರ ಮಾರ್ಕಂಡೆ ಮೊದಲಾದ ಗಣ್ಯರು ಗುರೂಜಿಯವರನ್ನು ವೇದಘೋಷ,ವಾದ್ಯ,ಮೊದಲಾದ ಎಲ್ಲ ಪಾರಂಪರಿಕಸ್ವಾಗತವಿಧಿಗಳೊಡನೆ ದೇವಾಲಯಕ್ಕೆ ಬರಮಾಡಿಕೊಂಡು ಪೂಜಾಕೈಂಕರ್ಯದಲ್ಲಿ ಸಹಕರಿಸಿದರು.

0 comments:

Post a Comment