ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ನವೆಂಬರ್ 11 - 13 : ಮೂಡಬಿದಿರೆಯಲ್ಲಿ ಕನ್ನಡದ ಕಲರವ

ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ ಎಂಟನೇ ವರುಷದ " ಆಳ್ವಾಸ್ ನುಡಿಸಿರಿ"ಯನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಬರಗೂರು ರಾಮಚಂದ್ರಪ್ಪನವರು 2004ರಲ್ಲಿ ಪ್ರಾರಂಭಗೊಂಡ ಆಳ್ವಾಸ್ ನುಡಿಸಿರಿಯ ಮೊಟ್ಟಮೊದಲ ಸರ್ವಾಧ್ಯಕ್ಷರಾಗಿದ್ದರು. ಇದೀಗ ಎಂಟನೇ ನುಡಿಸಿರಿಯ ಉದ್ಘಾಟನೆಯನ್ನು ಹಿರಿಯರಾದ ಬರಗೂರು ರಾಮಚಂದ್ರಪ್ಪ ನೆರವೇರಿಸುತ್ತಿರುವುದು ಹರ್ಷತಂದಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ನುಡಿಸಿರಿ ರೂವಾರಿ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬರಗೂರು ರಾಮಚಂದ್ರಪ್ಪನವರು 1946 ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಎಂಬಲ್ಲಿ ಜನಿಸಿದರು. ಕೆಂಚಮ್ಮ ಮತ್ತು ರಂಗದಾಸಪ್ಪ ಅವರ ಸುಪುತ್ರರಾಗಿ ಜನಿಸಿದ ಬರಗೂರು ರಾಮಚಂದ್ರಪ್ಪನವರು ಬೆಂಗಳೂರು ವಿ.ವಿ. ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಎರಡು ವರುಷ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ನೀಡಿದ್ದಾರೆ. ಬರಗೂರು ರಾಮಚಂದ್ರಪ್ಪನವರ ಕಥಾ ಸಂಕಲನ ಸುಂಟರಗಾಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ. ಒಂದು ಊರಿನ ಕಥೆಗಳು, ಕನ್ನಡಾಭಿಮಾನ, ಕಪ್ಪು ನೆಲದ ಕೆಂಪುಕಾಲು, ಮರಕುಟಿಕ, ರಾಜಕಾರಣಿ, ಸಾಹಿತ್ಯ, ಸುಂಟರಗಾಳಿ, ಸೂತ್ರ, ಕಾಂಟೆಸ್ಸಾ ಕಾವ್ಯ ಮೊದಲಾದ ಕೃತಿಗಳು ಓದುಗರಲ್ಲಿ ಅಚ್ಚಳಿಯದೆ ಉಳಿಯುವಂತಾಗಿದೆ.

"ಕನ್ನಡ ಮನಸ್ಸು ಸಂಘರ್ಷ ಮತ್ತು ಸಾಮರಸ್ಯ " ಪರಿಕಲ್ಪನೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದೆ. ನವೆಂಬರ್ 11ರಂದು ಬೆಳಗ್ಗೆ ಬೃಹತ್ ವೇದಿಕೆಯಲ್ಲಿ ನುಡಿಸಿರಿಯ ಉದ್ಘಾಟನೆಯನ್ನು ಈ ಮಹಾನ್ ಸಾಹಿತಿ ನೆರವೇರಿಸಲಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಸದಸ್ಯರಾಗಿ ಭಾಗವಹಿಸುವ ನಿರೀಕ್ಷೆಯಿದೆ.ಆಳ್ವಾಸ್ ನುಡಿಸಿರಿ 2011ರ ಪ್ರತಿನಿಧಿಗಳಾಗಬಯಸುವವರು ಹಾಗೂ ಆಳ್ವಾಸ್ ನುಡಿಸಿರಿ ಪೂರ್ವಭಾವೀ ಸಮಾಲೋಚನಾ ಸಭೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ನಡೆಸಲು ಆಸಕ್ತ ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಲ್ಲಿ ಆಳ್ವಾಸ್ ಸಂಸ್ಥೆಯ ನುಡಿಸಿರಿ ಕಛೇರಿಯನ್ನು ಸಂಪರ್ಕಿಸಬಹುದು.(ದೂರವಾಣಿ ಸಂಖ್ಯೆ : 08258 - 261229,238104 - 111)

0 comments:

Post a Comment