ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಹೌದು ಕಣೇ ಅಂದು ನಿನ್ನ ಕಂಡ ಅಪೂರ್ವ ಕ್ಷಣ, ಬಾನಿನಲ್ಲಿ ಶಶಿ ಮೂಡಿದಂತೆ ನನ್ನ ಹೃದಯದಲ್ಲಿ ಮೂಡಿದ ಶಶಿ ನೀನು ಕಣೇ ನಲ್ಲೆ. ಆ ದಿನ ನಿನ್ನ ಬಗ್ಗೆ ಈಗಿನ ತರ ಪ್ರೀತಿಗಿಂತಲೂ ತುಂಬಿದ ಗೌರವವಿತ್ತು. ಆದರೆ ಈಗ ಆ ಪ್ರೀತಿ-ಗೌರವಗಳು ದಿನೇ-ದಿನೇ ಉಲ್ಬಣಿಸುತ್ತಿದೆ. ಹೇಗೆ ಮರೆಯಲಿ ಹೇಳು ನಿನ್ನೊಡನಾಡಿದ ಮಾತುಗಳು ನಗೆಯಲ್ಲಿ ತೇಲಾಡಿದ ಅಪೂರ್ವ ಕ್ಷಣಗಳನ್ನು. ಹಾಗೇ ಸುಮ್ಮನೇ ಕುಳಿತು ನೆನಪಿನಂಗಳಕ್ಕೆಇಳಿದಾಗ ಅಲ್ಲಿ ನಿನ್ನದೇ ಸಾನಿಧ್ಯ, ನಿನಗೇ ಸಾಮೀಪ್ಯ. ಆದರೂ ಯೋಚಿಸುತ್ತೇನೆ, ಯಾಕೆ ಬಂತು ನಂಗೆ ನಿನ್ನಲ್ಲಿ ಇಷ್ಟೊಂದು ಪ್ರೀತಿ ಅಂತ, ಅದೂ ಗೊತ್ತಿದ್ದೂ ನೀನೆಂದೂ ಕೈಗೆಟುಕದ ನಕ್ಷತ್ರವೆಂದು. ಹೌದು ಕಣೇ ನಾನು ಪ್ರೀತಿ-ಪ್ರೇಮಗಳಿಂದ ಬಹಳಷ್ಟು ದೂರ ಉಳಿದಿದ್ದೆ.


ಕಾರಣ ಅದರ ಅನಿವಾರ್ಯತೆ ನನಗಿರಲಿಲ್ಲ. ನಿನ್ನ ಕಂಡ ಕ್ಷಣದಿಂದ ಕಣೇ ನೀನು ಬೇಕು, ಬಾಳೋದಾದ್ರೆ ನಿನ್ ಜೊತೆ ಮಾತ್ರ ಅಂತಾ ಅನಿಸುತ್ತಿರೋದು. ನಿನ್ನೊಲವಿಗಾಗಿ ಮನ ಮಿಡಿಯುತ್ತಿರೋದು ನಾನು ಇಷ್ಟಪಟ್ಟಿರೋದು ನಿನ್ನನ್ನು ಹೊರತು ನಿನ್ನ ಅಂದ-ಚಂದ, ಆಸ್ತಿ-ಅಂತಸ್ತನ್ನಲ್ಲ ಗೆಳತಿ ಛೇ! ನಾನು ಯಾಕೆ ಇಷ್ಟೊಂದು ಪರಿತಪಿಸುತ್ತಿದ್ದೇನೆ, ಕರಗುತ್ತಿದ್ದೇನೆ. ದಿನೇ ದಿನೇ ನಿನ್ನ ವದನಕ್ಕಾಗಿ, ಆ ನಗೆಗಾಗಿ ಕಾತರಿಸುತ್ತಿದ್ದೇನೆ. ಮೊಗೆದಷ್ಟು ನೆನಪುಗಳು ಮರುಕಳಿಸುತ್ತಿವೆ ನನ್ನ ಈ ಪ್ರಶ್ನೆಗಳಿಗೆ ಉತ್ತರವ ನೀಡುವರಾರು ಒಲವೇ...

ಒಮ್ಮೆ ನನ್ನ ಮನಪಟಲವನ್ನು ತೆರೆದು ನೋಡಿದರೆ ಅಲ್ಲಿರುವುದು ನಿನ್ನ ಸವಿನುಡಿಗಳು, ತುಂಬಿದ ನಿನ್ನ ಮಂದಹಾಸ. ಹೀಗೆ ಸುಮ್ಮನೇ ನಾನೊಬ್ಬನೇ ಕುಳಿತಿರುವಾಗ ಅನ್ಸುತ್ತೆ, ನಿನಗೊರಗಿ ಕುಳಿತು ಹರಟಬೇಕು, ನಿನ್ನ ಮಡಿಲಲ್ಲಿ ಮಗುವಾಗಬೇಕು, ಜೀವನ ಪೂರ್ತಿ ನಿನ್ಜೊತೆ ಕಳೆಯಬೇಕು. ಆದರೆ ನಿನ್ನೆದುರು ಬಂದಾಗ ಮಾತೆಲ್ಲ ಮೌನವಾಗಿ ನನ್ನ ಕಣ್ಣಾಲಿಗಳು ನಿನ್ನ ಕಣ್ಣಾಲಿಯನ್ನೇ ದೃಷ್ಟಿಸುತ್ತಾ ಮಾತನ್ನೆಲ್ಲಾ ಮೌನದ ನಗುವಲ್ಲೇ ಹೇಳುತ್ತಿರುತ್ತೇನೆ. ಯಾಕೆ ಇಷ್ಟೊಂದು ಒಲವು ನನ್ನಲ್ಲಿ ಮೂಡುತ್ತಿದೆ, ಅದೂ ಬಿಟ್ಟಿರಲಾಗದಷ್ಟು.

ಹೌದು ಕಣೇ ಈ ಎಲ್ಲಾ ವಿಷಯಗಳು ನಿಂಗೂ ತಿಳಿದಿದೆ. ಆದರೂ ನೀನೇನೂ ಮಾಡುವಂತಿಲ್ಲ, ನಾನು ಕೂಡ. ಒಂದು ಕ್ಷಣ ನಿನ್ನನ್ನು ನನ್ನಿಂದ ದೂರವಿರಿಸಿ ನೋಡಿದರೆ, ಹುಂ! ಆಗಲ್ಲ! ಸಹಿಸಲಾಗದ ವೇದನೆಯಾಗುತ್ತೆ ಕಣೇ. ಗೆತಿ ಎಲ್ಲಾರೂ ಹೇಳುವಂತೆ ಪ್ರೀತಿಗೆ ಕಣ್ಣಿಲ್ಲ, ಬಣ್ಣವಿಲ್ಲ, ವಯಸ್ಸು ಜಾತಿಯ ಅಂತರವಿಲ್ಲ. ಅದು ನಿಜ ಆದರೆ ನೀನು! ಗಗನಕುಸುಮ ಆ ಕುಸುಮವನ್ನೇ ಮುಡಿಯಲು ಹೊರಟಿದ್ದೀನಲ್ಲ ನನ್ನ ಮರ್ಕಟ ಮನಸ್ಸಿಗೆ ಏನು ಹೇಳ್ಬೇಕೆಂದೇ ತಿಳಿಯುತ್ತಿಲ್ಲ. ಆದರೂ ನಿನಗೋಸ್ಕರ ಪರಿತಪಿಸುತ್ತೀನಿ ನಿನಗೋಸ್ಕರ ಕಾಯುತ್ತೀನಿ. ಪ್ಲೀಸ್ ನನ್ನನ್ನು ಕೊನೆಪಕ್ಷ ಸಂಗಾತಿಯನ್ನಾಗಿಯಲ್ಲಾದರೂ ಸ್ನೇಹಿತನನ್ನಾಗಿಯಾದರೂ ಇರಿಸಿಕೊಳ್ಳುತ್ತೀಯಾ ಪ್ಲೀಸ್... ಪ್ಲೀಸ್...

ಬರಹ:ವಿಸ್ಮಿತ ಎಡಮಂಗಲ
ತೃತೀಯ ಪತ್ರಿಕೋದ್ಯಮ
ಎಸ್.ಡಿ.ಎಂ. ಕಾಲೇಜು ಉಜಿರೆ

2 comments:

Mangalore said...

Wonderful post, Excellent and touching words.. good writing skill. It has got real feelings of the writer. appreciate you buddy.

kiran said...

nice one... heart touching.... thanks

Post a Comment