ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನೋಡ ಬನ್ನಿ ಕುಪ್ಪಳಿಯ
ಕುಪ್ಪಳಿ ಎಂದ ತಕ್ಷಣ ನೆನಪಿಗೆ ಬರುವುದೇ ರಾಷ್ಟ್ರಕವಿ ಕುವೆಂಪು. ನಾಡಿನ ಹೆಸರಾಂತ ಸಾಹಿತಿಯ ಊರು, ಮನೆ, ಅಲ್ಲಿನ ಪರಿಸರ ನೋಡಲೇ ಬೇಕಾದಂತದ್ದು. ಮಲೆನಾಡಿನ ಸುರಮ್ಯ ವಾತಾವರಣದಲ್ಲಿ ಇರುವ ಕುಪ್ಪಳಿ ಎರಡು ದಿನದ ಪ್ರವಾಸಕ್ಕೆ ಹೇಳಿಸಿ ಮಾಡಿಸಿದಂತಹ ಸ್ಥಳ.ಕವಿಮನೆ
ಪುಟ್ಟಪ್ಪನವರು ಬಾಳಿದ ಒಳ ಅಂಗಳ ಇರುವ ಮನೆಯನ್ನು ಇಂದು ಸ್ಮಾರಕ ಮಾಡಲಾಗಿದೆ. ಕುವೆಂಪುರವರು ಬರೆದ ಕೃತಿಗಳು, ಅವರ ಬಾಲ್ಯದಲ್ಲಿನ ಫೋಟೋಗಳು, ಅವರು ಮೈಸೂರಿನ ಮನೆಯಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿದೆ. ಅವರಿಗೆ ದೊರೆ ಪ್ರತಿಷ್ಠಿತ ಪ್ರಶಸ್ತಿಗಳು, ಅನೇಕ ವಿ.ವಿ.ಗಳು ಅವರಿಗೆ ನೀಡಿದ ಡಾಕ್ಟರೇಟ್ ಪದವಿಗಳನ್ನು ಇಡಲಾಗಿದೆ. ಅವರ ಕಾಲದಲ್ಲಿಬಳಸುತ್ತಿದ್ದಂತಹ ಎತ್ತಿನ ಗಾಡಿ, ಭತ್ತ ತುಂಬುವ ಸಾಧನಗಳು, ಕೃಷಿ ಉಪಕರಣಗಳನ್ನು ಸಂಗ್ರಹಿಸಿಡಲಾಗಿದೆ. ಕುವೆಂಪುರವರ ಜೀವನದ ಅಪೂರ್ವ ಕ್ಷಣಗಳ ಚಿತ್ರಗಳನ್ನೂ ಇಡಲಾಗಿದೆ. ಇದಲ್ಲದೇ ಅಡುಗೆ ಮನೆಯ ಸಾಮಾಗ್ರಿಗಳನ್ನು ಜೋಪಾನ ಮಾಡಿದ್ದಾರೆ. ಬಹುತೇಕ ಚಿತ್ರಗಳನ್ನು ಕುವೆಂಪುರ ಪುತ್ರ ತೇಜಸ್ವಿಯವರು ತೆಗೆದದ್ದಾಗಿವೆ. ಒಮ್ಮೆ ಈ ಕವಿಮನೆಯನ್ನು ನೋಡಿದಾಗ ಭಾವ ಪರವಶವಾಗುತ್ತದೆ.

ಕವಿಶೈಲ
ಕುವೆಂಪುರವರಿಗೆ ಬರೆಯಲು ಪ್ರೇರಣೆ ನೀಡಿದಂತಹ ಸ್ಥಳ ಕವಿಶೈಲವಾಗಿದೆ. ಕವಿಮನೆಯ ಹತ್ತಿರದಲ್ಲೇ ಇರುವ ಕವಿಶೈಲ ಸೂರ್ಯಾಸ್ತಮಾನಕ್ಕೆ ಹೇಳಿಮಾಡಿಸಿದ ಸ್ಥಳ. ಕುವೆಂಪು, ಬಿ.ಎಂ.ಶ್ರೀ, ಟಿ.ಎಸ್.ವೆಂ ಎಂಬ ಕೆತ್ತನೆಗಳು ಕವಿಶೈಲದ ಬಂಡೆಯ ಮೇಲೆ ಕಾಣಸಿಗುತ್ತವೆ. ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಇಲ್ಲಿ ವೀಕ್ಷಿಸಬಹುದಾಗಿದೆ.
ಇದಲ್ಲದೇ ಇಲ್ಲಿ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನವನ್ನು ನಿರ್ಮಿಸಲಾಗಿದೆ. ಅಲ್ಲಿಯ ರಂಗ ಮಂದಿರಕ್ಕೆ ಹೇಮಾಂಗಣ ಎಂದು ಹೆಸರಿಡಲಾಗಿದೆ. ಕನ್ನು ವಿವಿಯ ಅಧ್ಯಯನ ಕೇಂದ್ರ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶಿಬಿರಗಳು ನಡೆಸಲು ಸೂಕ್ತ ಸ್ಥಳವಾಗಿದೆ. ಚಾರಣಿಗರು, ಪ್ರವಾಸಿಗರು ತಂಗಲು ವ್ಯವಸ್ಥೆ ಇದೆ. ಸುಸಜ್ಜಿತ ಗ್ರಂಥಾಲಯ ಇಲ್ಲಿದೆ. ಮಲೆನಾಡಿನ ಮನೆಗಳ ಶೈಲಿಯಲ್ಲಿಯೇ ಈ ಭವನವನ್ನೂ ಸಹ ನಿರ್ಮಿಸಲಾಗಿದೆ.

ಕುಪ್ಪಳಿಗೆ ಬರುವ ಪ್ರವಾಸಿಗರು ಶಿವಮೊಗ್ಗದಿಂದ ತೀರ್ಥಹಳ್ಳಿ-ಕೊಪ್ಪಕ್ಕೆ ಹೋಗುವ ಬಸ್ ಹಿಡಿಯಬೇಕು. ಹತ್ತಿರದ ರೈಲು ನಿಲ್ದಾಣ ಶಿವಮೊಗ್ಗ, ವಿಮಾನ ನಿಲ್ದಾಣ ಮಂಗಳೂರು. ಬೆಂಗಳೂರಿನಿಂದ ಕುಪ್ಪಳಿಗೆ ಪ್ರತೀ ದಿನ ರಾಜಹಂಸ ಬಸ್ ಇದೆ. ಉಳಿಯುವ ಸೌಕರ್ಯವೂ ಸಹ ಇಲ್ಲಿ ಇದೆ. ಊಟ-ತಿಂಡಿ ಪ್ರತಿಯೊಂದು ವ್ಯವಸ್ಥೆಯೂ ಸಹ ಇಲ್ಲಿದೆ.
ಈ ಸುದಂರ ಮಾಯಾ ಲೋಕವನ್ನು ಖಂಡಿತ ನೋಡಲೇಬೇಕು. ಮನ ಅರಳಿಸುವಂತಹ ಈ ಸ್ಥಳ ನೆಮ್ಮದಿಯ ನಿಟ್ಟುಸುರು ಬಿಡಲು ಪ್ರಶಸ್ತವಾಗಿದೆ.

ದರ್ಶನ್ ಬಿ.ಎಂ
ದ್ವಿತೀಯ ಪತ್ರಿಕೋದ್ಯಮ, ಆಳ್ವಾಸ್ ಕಾಲೇಜು,ಮೂಡುಬಿದಿರೆ.

0 comments:

Post a Comment