ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಮನಸ್ಸು ಈಡೇರಿಸಲಾಗದ ಆಸೆಗಳನ್ನು ಕಲ್ಪನೆಗಿಳಿಸುವ ರಹದಾರಿ. ಇಲ್ಲಿ ಮೂಡುವ ಚಿತ್ರಗಳಿಗೆ ನಾವೇ ನಿರ್ದೇಶಕರು, ನಿಮರ್ಶಕರು, ನಿಯಂತ್ರಕರು. ಯಾರ ಹಂಗೂ ನಮಗಿಲ್ಲ ಇಲ್ಲಿ. ನಮ್ಮ ಚಿತ್ರಲೋಕಕ್ಕೆ ನಾವೇ ಅಧಿಪತಿಗಳು. ಯಾವ ಸೆನ್ಸಾರ್ ಮಂಡಳಿಯ ತಕರಾರು ಇಲ್ಲಿ ಇಲ್ಲ. ಅದೇಷ್ಟೋ ದೊಡ್ಡ ದೊಡ್ಡ ಬೆಟ್ಟ-ಗುಡ್ಡಗಳನ್ನು ಹತ್ತಿ ಇಳಿದಿದ್ದೇವೆಯೋ...? ಲೆಕ್ಕವಿಲ್ಲ...! ಭಯಾನಕ ದೃಶ್ಯಗಳನ್ನು ಕಂಡಿದ್ದೇವೆಯೋ, ಅದೇಷ್ಟೋ ಸಮಸ್ಯೆಗಳಿಗೆ ಕನಸಿನಲ್ಲೇ ಪರಿಹಾರ ಹುಡುಕಿಕೊಂಡಿದ್ದೇವೆಯೋ ನಮಗರಿವಿಲ್ಲ... ಕನಸಿಗೊಂದು ಭಾಷೆಯಿದೆ. ಅದು ಭಾವನೆಗಳ ಸಮುಚ್ಚಯ. ಲಹರಿಯಂತೆ ಪ್ರವಾಹಿಸುವ ಚಿತ್ರಗಳಿಗೆ ಇಲ್ಲಿ ಕಡಿವಾಣವಿಲ್ಲ. ಆ ದೃಶ್ಯಗಳಿಗೆ ನಮ್ಮದೇ ಆದ ಅರ್ಥವಿದೆ. ಕೆಲವೊಂದು ಬಾರಿ ಕನಸಿನಲ್ಲಿ ಅವಾಸ್ತವಿಕ, ಅವೈಜ್ಙಾನಿಕ ಕಲ್ಪನೆಗಳು, ಸಂವೇದನೆಗಳಿರುತ್ತವೆ. ಕನಸು ಕನಸುಗಾರನ ಅಜಾಗೃತ ಮನಸ್ಸಿನ ಸಮಸ್ಯೆಗಳಿಗೆ ಆಧಾರ. ಕನಸು ಮನಸ್ಸಿನ ಮಹಾನ್ ವೆಬ್. ಇಲ್ಲಿ ಹಲವಾರು ಕಲ್ಪನೆಗಳು ಸೇರಿಕೋಳ್ಳುತ್ತದೆ. ಕೆಲವೊಂದು ಕಲ್ಪನೆಗಳು ಬಹಿಷ್ಕಾರಿಸಲ್ಪಡುತ್ತವೆ...


ಕನಸಿನ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಿದ ವ್ಯಕ್ತಿಯೆಂದರೆ ಸಿಗ್ಮಂಡ್ ಫ್ರಾಯ್ಡ್. ಆತನ ಪ್ರಕಾರ ಕನಸುಗಳೆಂದರೆ, ಪ್ರಸುಪ್ತ ಮನಸ್ಸಿನಲ್ಲಿ ಶೇಖರಗೊಂಡ ಈಡೇರದ ಆಸೆ-ಆಕಾಂಕ್ಷೆ, ಪೇರಣೆಗಳು, ಕನನಸಿ ರೂಪವನ್ನು ಕಾಣುತ್ತವೆ. ಆ ಕನಸಿನಲ್ಲಿ ಕಾಣುವ ವಿವಿಧ ದೃಶ್ಯಾವಾಳಿಗಳಿಗೆ, ಚಿಹ್ನೆಗಳಿಗೆ ಫ್ರಾಯ್ಡ್ ಅವನದೇ ಆದ ಅರ್ಥವನ್ನು ನೀಡುತ್ತಾನೆ. ಕನಸು ಸುಪ್ತ ಸಮಸ್ಯೆಗಳಿಗೆ, ಸುಪ್ತಬಯಕೆಗಳಿಗೆ ಮನಸು ಧರಿಸಿರುವ ಮುಖವಾಡ...

ಕನಸು ಏಕೆ ರಾತ್ರಿ ಮಾತ್ರ ಬೀಳುವುದಿಲ್ಲ ..!

ನಾವು ನಿದ್ರೆ ಮಾಡಿದ ಕೂಡಲೇ ಕನಸು ಬೀಳಬಹುದು. ನಮ್ಮ ಆರ್.ಇ.ಎಮ್(ರ್ಯಾಪಿಡ್ ಐ ಮೂವೆಂಟ್) ನ ನಿದ್ರೆಯಲ್ಲಿ 3 ಕಂತುಗಳಿವೆ. ಮೊದಲ ಸಂಚಿಕೆ ಸುಮಾರು 10-12 ನಿಮಿಷಗಳ ಅವಧಿಯವರೆಗೆ ಇರುತ್ತದೆ. ಸುಮಾರು 15-20 ನಿಮಿಷಗಳಲ್ಲಿ ಎರಡನೇ ಮತ್ತು ಮೂರನೇ ಸಂಚಿಕೆ ಮುಗಿದು ಬಿಡುತ್ತದೆ. ಕನಸು ಈ ಸಂದರ್ಭದಲ್ಲಿ ನಮಗರಿವಿಲ್ಲದಂತೆ ಮನಸ್ಸಿನಾಳದಿಂದ ಪ್ರಸ್ತುತಪಡಿಸಲ್ಪಟ್ಟಿರುತ್ತದೆ.... ಮುಂಜಾವಿನ ಸಮಯದಲ್ಲಿ ನಮ್ಮ ಕಣ್ಣಿನ ಚಲನೆ ಕ್ಷಿಪ್ರವಾಗಿರುವುದರಿಂದ ಮುಂಜಾವಿನ ಸಮಯದಲ್ಲಿಯೇ ಹೆಚ್ಚಾಗಿ ಕನಸು ಮನಸ್ಸಿನ ಪರದೆಯಲ್ಲಿ ಮೂಡುತ್ತದೆ. ನಾವು ಎಚ್ಚರವಿದ್ದಾಗ ನಮ್ಮೆಲ್ಲಾ ಅವಯವಗಳು ಕ್ರೀಯಾಶೀಲವಾಗಿರುತ್ತವೆ. ಜೊತೆಗೆ ನಾವು ನಮ್ಮದೇ ಆದ ಲೋಕಗಳಲ್ಲಿ ತಲ್ಲಿನರಾಗಿರುತ್ತೇವೆ. ರಾತ್ರಿ ನಾವು ಮಲಗುವಾಗ ದೇಹವು ಕಡಿಮೆ ಶ್ರಮಪಡುವ ಕಾರ್ಯಚಟುವಟಿಕೆಯಲ್ಲಿರುತ್ತೇವೆ. ಆಗ ನಮ್ಮೆಲ್ಲಾ ಈಡೇರದ ಪ್ರೇರಣೆ, ಆಸೆ ಆಕಾಂಕ್ಷೆಗಳು ಮೇಲೇಳುತ್ತವೆ ಅವು ಕನಸಿನ ರೂಪತಾಳುತ್ತವೆ.

ಕನಸು ಶಕುನ ನುಡಿಯಬಲ್ಲದೇ..?

ಕೆಲವೊಂದು ಬಾರಿ ಕನಸುಗಳು ಮುಂದಾಗುವ ಶ್ರೇಯಸ್ಸು-ಸಮಸ್ಯೆಗಳನ್ನು ಸೂಚಿಸುತ್ತದೆ. ಆದರೆ ಎಲ್ಲಾ ಕನಸು ಭವಿಷ್ಯದ ಸಮಸ್ಯೆ ಅಥವಾ ಶ್ರೇಯಸ್ಸನ್ನು ಸೂಚಿಸಬೇಕಾಗಿಲ್ಲ. ಮುಂಜಾವಿನಲ್ಲಿ ಬೀಳುವ ಎಲ್ಲಾ ಕನಸುಗಳು ಸತ್ಯವಾಗಬೇಕೆಂದೇನಿಲ್ಲ.. ಅದೇಷ್ಟೋ ಜನರಲ್ಲಿ ಮುಂಜಾನೆ ಬಿದ್ದ ಕನಸು ಸತ್ಯವಾಗುತ್ತದೆ ಎಂಬ ಮೂಢನಂಬಿಕೆ ಇದೆ. ಆ ಹೆದರಿಕೆಯಲ್ಲಿಯೇ ಅದೇಷ್ಟೋ ಜೀವಗಳು ಒಂದು ದಿನ(ವಾರ, ವರ್ಷ)ದ ನೆಮ್ಮದಿಯನ್ನು ಕಳೆದುಕೊಂಡಿವೆಯೋ ಯಾರಿಗೆ ಗೊತ್ತು...
ಕನಸು ಸಾಧನೆಗೆ ಪ್ರೇರಣೆ ನೀಡುತ್ತದೆ. ಸುಂದರ ಕನಸು ಭವಿತವ್ಯಕ್ಕೆ ದಾರಿ ದೀಪವಾಗುತ್ತದೆ. ನಿಮ್ಮ ಬದುಕು ಸುಂದರವಾಗಬೇಕೇ... ಹಾಗಾದರೆ ಸುಂದರ ಕನಸು ಕಾಣಿ!

-ಮಲ್ಲಿಕಾಭಟ್ ಪರಪ್ಪಾಡಿ.

0 comments:

Post a Comment