ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:32 AM

ಅಸ್ಪೃಶ್ಯರು

Posted by ekanasu

ಕಳೆದ ಸಂಚಿಕೆಯಿಂದ...
ವೈದೇಹೀ ಕಾದಂಬರಿ
ಸಾಹಿತ್ಯ
ಒಲೆಯ ಮೇಲೆ ಕಾಫಿಗೆ ಇಟ್ಟ ಗೌರಮ್ಮ ಹೊರಗೆ ಇಣುಕಿದರು. ಮತ್ತೆ ಬಂದು ಪಾರ್ತಕ್ಕನ ಕಿವಿ ಹತ್ತಿರ `ಅವ ಕೂಸನ ತಮ್ಮ, ಪಾರ್ತಕ್ಕ ' ಎಂದರು. ಏನು ಮಾಡಲಿ ಈಗ ಎಂದು ಕೇಳುವವರಂತೆ.
`ಹ್ಹುಂ! ಅವನಿಗೆ ಕಾಫಿಯ ಮತ್ತೆಂತದ!ವಾಸ್ತವವೇನು ದಿನ ಹೋದ ಹಾಗೆ ಸಣ್ಣವನಾಗುತ್ತಿದ್ದಾನೆ'?
ವಾಸುದೇವರಾಯರೇ ಒಳಗೆ ಬಂದರು.
`ಏನು ಕಾಫಿ ಕೊಡಲು ಆಲೋಚನೆಯೇ? ಕೂಸ ಆದರೇನಾಯಿತು? ಬೇಗ ಕಳುಹಿಸಿಕೊಡಿ' - ಎಂದು ಆಜ್ಞೆಯೆಂಬಂತೆ ಹೇಳಿ ಹೋದರು.
`ಅವರಿಗೆ ಬಹುಶಃ ಸಂಶಯ ಬಂತೋ ಏನೋ. ಕಂಡಿರ? ಸ್ವತ: ತಾನೇ ಒಳಗೆ ಬಂದು ಹೇಳಿದ್ದು'! ಪಿಸಿ ಪಿಸಿಯಾಗಿ ನುಡಿಯುತ್ತ ಕಾಫಿ ಮಾಡಿದರು ಗೌರಮ್ಮ.
ಪಾರ್ತಕ್ಕನ ಮನಸ್ಸಿಗೆ ಇದು ಏನೋ ಸರಿ ಬರಲಿಲ್ಲ.ಶಿವ ಕಾಫಿ ಲೋಟ ಹಿಡಿದು ತೆಗೆದುಕೊಂಡು ಹೋಗುವಾಗ ಅವನ ಹಿಂದೆಯೇ ಪಡಸಾಲೆಯವರೆಗೂ ಹೋಗಿ 'ಇನ್ನು ಕೈ ಮುಟ್ಟಿಕೊಡುವುದು ಬೇಡ. ದೂರದಿಂದ ಕೊಡು.ಮೇಜಿನ ಮೇಲೆ ಇಟ್ಟು ಬಂದರೂ ಸಾಕು' - ಎಂದರು.


ಶಿವ ನಕ್ಕ.
ನಿಮ್ಮ ಕಾಲದಲ್ಲಿ ಇಷ್ಟೂ ಮಡಿ ಇರಲಿಕ್ಕಿಲ್ಲ ಮಾಣಿ.ಅಷ್ಟರೊಳಗೆ ನಾನು ಪೆಟ್ಟಿಗೆ ಕಟ್ಟಿದರೆ ಸಾಕು ' - ಎಂದರು.
ಕೂಸ ಇಂಗ್ಲಿಷ್ ನಲ್ಲಿಯೇ ಮಾತಾಡುತ್ತಿದ್ದ. ವಾಸುದೇವರಾಯರಂತೆಯೇ.
ವಾಸುದೇವರಾಯರೂ ಅವನೊಡನೆ ಕನ್ನಡದಲ್ಲಿ ಮಾತಾಡಲಿಲ್ಲ.
ಆದ್ದರಿಂದ ಬಾಗಿಲ ಮರೆಯಲ್ಲಿ ನಿಂತು ಇಣುಕುತ್ತಿದ್ದ ಗೌರಮ್ಮನಿಗೆ ಅವರು ಮಾತಾಡಿದ್ದು ಎಂತದು ಎಂದು ತಿಳಿಯಲಿಲ್ಲ. `ಕಲಿತರೆ ಅವಕ್ಕೂ ಇಂಗ್ಲಿಷ್ ಬರುತ್ತದೆ ಕಂಡಿರ'?
`ಬಾರದೆ ? ಕಲಿಸಿದರೆ ಏನೂ ಕಲಿತಾವು ಅವು. ಅದಕ್ಕೆ ಕಲಿಸಬಾರದು ಎನ್ನುವುದು' - ಎಂದರು ಪಾರ್ತಕ್ಕ.
ಶಿವ ಕಾಲಿ ಲೋಟ ಹಿಡಿದುಕೊಂಡೇ ಬಂದ
`ಅಯ್ಯೋ ಮಗ! ನಿನ್ನ ಬುದ್ದಿಯೇ...ಲೋಟ ಅಲ್ಲೇ ಇಟ್ಟಿದ್ದರೆ ಯಾರು ಹೊತ್ತುಕೊಂಡು ಹೋಗುತ್ತಿದ್ದರೀಗ? ಆಯಿತು. ತಂದಾಯಿತಲ್ಲ. ಪಾತ್ರೆ ತೊಳೆಯುವ ಕಟ್ಟೆಯಲ್ಲಿಟ್ಟು ತಲೆ ಮೈ ಮಿಂದು ಬಾ' - ಎಂದರು.
ಶಿವ ಲೋಟೆಯ ಜಗುಲಿಯ ತುದಿಗಿಟ್ಟು.
`ರುಕ್ಕು , ಇದನ್ನು ತೊಳೆದಿಡಬೇಕಂತೆ ' - ಎಂದು ಹೇಳಿ ಮಾಯವಾದ.
`ಯಾರು ? ಆ ಕೂಸ ಕಿಡಿದದ್ದ? ಅವ ಬಂದದ್ದು ನನಗೂ ಗೊತ್ತು. ಗೊತ್ತು ಮಾಡದೆ ಅವನ ಎಂಜಲನ್ನು ನನ್ನ ಕೈಯಿಂದ ತೊಳೆಸಬೇಕೆಂತ ಮಾಡಿದಿರ? ನಾ ತೊಳೆಯುವುದಿಲ್ಲ' - ಎಂದಳು ರುಕ್ಕು ಗೌರಮ್ಮ ಹೊರಗೆ ಬಂದಾಗ.
`ಅಬ್ಬ, ನಾವು ನಿನ್ನನ್ನೇ ಸೇರಿಸದಿದ್ದರೆ , ನೀನು ಕೂಸಸನ್ನೇ ಸೇರಿಸುವುದಿಲ್ಲವಲ್ಲ?'
`ಮತ್ತೆ? ನಾವು ಅವಕ್ಕಿಂತ ಊಂಚಲ್ಲವೇ..? ಬೇಡಿ ತಿಂದರೂ ಅವ ಕುಡಿದ ಲೋಟೆ ತೊಳೆಯುವುದಿಲ್ಲ...

ಮುಂದುವರಿಯುವುದು...

- ವೈದೇಹಿ.

0 comments:

Post a Comment