ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ಗುರು,ಗೀತೆ,ಗೋವು,ಇವೆಲ್ಲವೂ ಒಂದೇ ವರ್ಣಮಾಲೆಯಲ್ಲಿ ಬರುವ ಪದಗಳು.ಗುರು ಅಧ್ಯಾತ್ಮಿಕ ಬದುಕಿನ ದರ್ಶನ ಮಾಡಿಸಿದರೆ ಗೋವು ಸಾಂಸಾರಿಕಬದುಕಿಗೆ ಊರುಗೋಲಾಗಿ ನಿಲ್ಲುತ್ತದೆ.ಶ್ರೀಕೃಷ್ಣ ಗೋವುಗಳೊಂದಿಗೆ ಬೆಳೆದ.ಗೋಪಾಲಕನಾಗಿ ಪ್ರಸಿದ್ಧನಾದ ಎಂದು ಪುರಾಣಗಳಲ್ಲಿ ನಾವು ನೋಡುತ್ತೇವೆ.ಕೃಷ್ಣನಂತೆ ಶ್ರೀರಾಮನಿಗೂ ಗೋವಿನ ನಿಕಟಸಂಬಂಧವಿದೆ.ಪ್ರಭು ಶ್ರೀರಾಮಚಂದ್ರನ ಜನನ,ನಿರ್ಯಾಣ ಎರಡರಲ್ಲಿಯೂ ಗೋವು ಪ್ರಧಾನ ಪಾತ್ರ ವಹಿಸಿದೆ.ಶ್ರೀರಾಮಚಂದ್ರನ ಭಕ್ತರಾದ ನಾವು ಅವನ ನಡೆನುಡಿಗಳನ್ನು ಸಂದೇಶವನ್ನು ನಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಮುಂಬಯಿ ವಲಯದ ಶಿಷ್ಯಸಮುದಾಯದ ಗುರುದೇವತಾಸೇವೆ ಹಾಗೂ ಪಡಿಯಾರ ಸಮಾಜದ ಶಿಷ್ಯರ ಶ್ರಿಗುರುಪಾದುಕಾಪೂಜೆಯನ್ನು ಸ್ವೀಕರಿಸಿ ಧರ್ಮಸಭೆಯಲ್ಲಿ ಆಶೀರ್ವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ಶ್ರೀರಾಮನ ಜನನಕ್ಕೆ ಕಾರಣವಾಗಿದ್ದು ಪ್ರಾಜಾಪತ್ಯಪುರುಷನು ಅನುಗ್ರಹಿಸಿದ ಪಾಯಸ.ಅದರಿಂದ ಶ್ರೀರಾಮನ ಹುಟ್ಟಾದರೆ ನಂತರ ಆತ ವನವಾಸಕ್ಕೆ ಹೋಗುವ ಸಮಯದಲ್ಲಿ ತನ್ನೆಲ್ಲ ಗೋಸಂಪತ್ತನ್ನು ದಾನ ಮಾಡಿದ ಎಂದು ರಾಮಾಯಣ ಉಲ್ಲೇಖಿಸಿದೆ.

ಅಯೋಧ್ಯೆಯಿಂದ ಸರಯೂ ನದಿತೀರದವರೆಗಿನ ಪ್ರದೇಶದಲ್ಲಿ ಆ ಗೋಸಮೂಹ ಹರಡಿತ್ತು. ಶ್ರೀರಾಮನು ಈ ಲೋಕವನ್ನು ಬಿಟ್ಟು ತೆರಳುವಾಗ ಶ್ರೀರಾಮನ ವಿರಹವನ್ನು ತಾಳಲಾರದೆ ತನ್ನ ಜೊತೆ ಬಂದ ಎಲ್ಲರಿಗೂ ಎಲ್ಲ ಲೋಕಗಳಿಗಿಂತಲೂ ಉನ್ನತಸ್ಥಾನದಲ್ಲಿರುವ ಗೋಲೋಕವನ್ನು ಆಶ್ರಯವನ್ನಾಗಿ ಕಲ್ಪಿಸಿದ.ಈ ಹಿನ್ನೆಲೆಯಲ್ಲಿಯೇ ಈ ಬಾರಿಯ ಚಾತುರ್ಮಾಸ್ಯದಕಾಲದಲ್ಲಿ ಶ್ರೀರಾಮಕಥಾ ವನ್ನು ಆಯೋಜಿಸಿ ಶ್ರೀರಾಮನಸಂದೇಶವನ್ನು ಸಮಾಜಕ್ಕೆ ತಿಳಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.ಶ್ರಿರಾಮನನ್ನೇ ಆರಾಧ್ಯದೈವವನ್ನಾಗಿ ಪಡೆದ ನಮ್ಮ ಶ್ರೀಮಠದಲ್ಲಿ ಸಹಜವಾಗಿಯೇ ಗೋವಿಗೆ ಶ್ರೇಷ್ಠಸ್ಥಾನ ಕಲ್ಪಿತವಾಗಿದೆ.ನಮ್ಮ ಮನದಲ್ಲಿ ಶ್ರೀರಾಮ ಹಾಗೂ ಮನೆಯಲ್ಲಿ ಗೋವು ಸದಾವಾಸವಾಗಿರಬೇಕೆಂಬುದೇ ನಮ್ಮ ಆಶಯ ಎಂದೂ ಹೇಳಿದ ಶ್ರೀಗಳು ಈ ಚಾತುರ್ಮಾಸ್ಯದ ಕಾಲದಲ್ಲಿ ವಿಷಮುಕ್ತವಾದ ಸಾವಯವ ಪದ್ಧತಿಯ ಆಹಾರಪದಾರ್ಥಗಳನ್ನೇ ಪ್ರಸಾದರೂಪವಾಗಿ ನೀಡಲಾಗಿದೆ.

ಗೋವಿಲ್ಲದೆ ಸಾವಯವ ಆಹಾರವೂ ಇಲ್ಲ.ಈ ಪದ್ಧತಿಯ ಬೆಳೆಗೆ ಗೋವು ಅತ್ಯಾವಶ್ಯಕ ಆದ್ದರಿಂದ ಗೋವಿನ ಕುರಿತಾಗಿಯೂ ಜಾಗೃತಿ ಮೂಡುವುದು ಅಗತ್ಯ.ಚಾತುರ್ಮಾಸ್ಯವ್ರತಕ್ಕಾಗಿ ಬಂದ ಭಕ್ತರು ನಮಗೆ ಏನನ್ನೂ ನೀಡಬೇಕಿಲ್ಲ.ಆದರೆ ಇಲ್ಲಿಂದ ಹೋಗುವಾಗ ಶ್ರೀರಾಮಚಂದ್ರನ ಅನುಗ್ರಹರೂಪವಾಗಿ ಸಂತೋಷ,ನೆಮ್ಮದಿಗಳನ್ನು ತೆಗೆದುಕೊಂಡು ಹೋಗುವಂತಾಗಲಿ ಎಂದೂ ಆಶಿಸಿದರು.

ಮೋಡಿ ಮಾಡಿದ ಬಾಲ ಕಲಾವಿದೆ...
ಸಂಜೆ ಸೂರ್ಯಸಿಂಹಾಸನ ವೇದಿಕೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಚಾತುರ್ಮಾಸ್ಯ ನಿರ್ವಹಣಾಸಮಿತಿಗಳ ಸಹಯೋಗದಲ್ಲಿ ಮಂಗಳೂರಿನ ಕುಮಾರಿ ಅಯನಾ ವಿ ರಮಣ್ ಇವರಿಂದ ಭರತನಾಟ್ಯವು ಸಂಪನ್ನಗೊಂಡಿತು.ನಂತರ ನಡೆದ ನಾಡಿನ ಖ್ಯಾತ ತಬಲಾಪಟು ಗೋಪಾಲಕೃಷ್ಣ ಹೆಗಡೆಯವರ ತಬಲಾಸೋಲೋ ಕಾರ್ಯಕ್ರಮ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿತು.ಶ್ರೀ ಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

ವರದಿ: ಸತ್ಯನಾರಾಯಣ ಶರ್ಮ

0 comments:

Post a Comment