ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಹಾಯ್ ಚಿನ್ನಾ...
ಹ್ಯಾಗಿದ್ದೀಯಾ? ಇಲ್ಲ ಕಣೋ ನಿನ್ನ ಕ್ಷೇಮ ಸಮಾಚಾರವನ್ನು ಕೇಳಲು ನಾನು ಯೋಗ್ಯಳಲ್ಲ. ಯಾಕಂದ್ರೆ ನಾನು ನಿನ್ನಿಂದ ದೂರವಾಗಿ ಕೆಲವು ಸಮಯಗಳೇ ಕಳೆದವು. ಕಾರಣ ಏನೇ ಇರಬಹುದು ಆದ್ರೂ ದೂರವಾಗಿರೋದು ನಿಜ ತಾನೇ? ಅದಿರಲಿ, ಆದ್ರೂ ನಿನ್ನ ಕ್ಷೇಮವನ್ನು ಸದಾ ನೀನು ಕಾಪಾಡಿಕೊಳ್ಳಬೇಕು ನನಗೋಸ್ಕರವಾದರೂ. ಹೌದು ನನ್ನ ಹೃದಯದ ಪ್ರತೀ ಬಡಿತದಲ್ಲೂ ನಿನ್ನೊಲವಿನ ದನಿಗಳೇ ಮಿಡಿಯುತಿದೆ. ಪ್ರತೀ ಕ್ಷಣನೂ ನೀನೇ ನೆನಪಾಗ್ತಿದ್ದೀಯಾ. ನಿನ್ನ ಹೆಸರೇ ಬಾಯಲ್ಲಿ ತೊದಲುತಿದೆ.


ಆ ದಿನ ನಿನಗೆ ನೆನಪಿದೆಯೆನೋ ನೀನು ನಾನು ಪರಿಚಯವಾದ ಮೊದಲ ಕ್ಷಣ, ಆ ದಿನ ಎಷ್ಟೊಂದು ಅವಿಸ್ಮರಣೀಯ ಅಲ್ವೇನೋ? ಹೌದು ಅಂದೇ ಕಣೋ ನನ್ನ ಮನದಲ್ಲಿ ಪ್ರೀತಿ ಗಿಡದ ಚಿಗುರೊಡೆದಿದ್ದು. ನಂಗೊತ್ತಿತ್ತು ನಾನು ತಪ್ಪು ಮಾಡುತ್ತಿದ್ದೀನಿ ಅಂತ, ಆದ್ರೂ ಈ ಮರ್ಕಟ ಮನಸ್ಸು ಎಲ್ಲಿ ಕೇಳುತ್ತೆ ಹೇಳು ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿತು. ಈ ಪ್ರೀತಿನೇ ಹಾಗೇ ಅಲ್ವಾ? ಒಮ್ಮೆ ಅಂಟಿಕೊಂಡಿತೆಂದರೆ ಬಿಡಿಸಿಕೊಳ್ಳಲೂ ಅಸಾಧ್ಯ ಅಲ್ವೇನೋ? ಅಲ್ಲ ಕಣೋ ನೀನು ನಂಗೆ ಬೇಕು ಎಂದು ಮರುಭೂಮಿಯಲ್ಲಿ ನಿಂತು ನಾನಿಂದು ಅರಚಿದರೂ ಕೇಳಿಸಿಕೊಳ್ಳುವ ಕಿವಿಗಳಿಲ್ಲ, ಅರ್ಥೈಸಿಕೊಳ್ಳುವ ಮನಸುಗಳಿಲ್ಲ. ಕೈಕಾಲು ಹಿಡಿದು ಬೇಡಿಕೊಂಡರೂ ಕ್ಷಮಿಸುವವರಿಲ್ಲ.

ನಾವು ಏನೆಲ್ಲಾ ಕನಸು ಕಂಡಿದ್ದೇವು ಹೇಳು? ದಿನಾ ಭವಿಷ್ಯದ ಬಗ್ಗೆ ಚಿಂತಿಸುವುದು ಬಿಟ್ಟರೆ ಬೇರೆನಿತ್ತು ಹೇಳು, ನಾನೆಲ್ಲಿಗೆ ಹೋಗಬೇಕಿದ್ದರೂ, ಏನು ಮಾಡಬೇಕಿದ್ದರೂ ನಿನ್ನ ಕೇಳುತ್ತಿದ್ದೆ. ಕಾರಣ ನಾನು ನಿನ್ನ ಪ್ರೀತಿಯಲ್ಲಿ ಬಂಧಿಯಾಗಿದ್ದೆ. ಈಗ ನಾನು ಯಾರನ್ನೂ ಕೇಳಬೇಕಿಲ್ಲ. ಒಮ್ಮೊಮ್ಮೆ ಅನ್ಸುತ್ತೆ ಹೌದು ನಾನು ಹೊರಟೋಗ್ತೀನಿ ಕಣೋ ನಿನ್ನಿಂದ ದೂರ ಹೊರಟೋಗ್ತೀನಿ. ಇನ್ಯಾವತ್ತೂ ನಿನ್ನ ನೋಡೋಕೆ ಬರಲ್ಲ ಅಂತ, ಆದ್ರೂ ಈ ಮರ್ಕಟ ಮನಸ್ಸು ನಿನಗಾಗಿ ಹಂಬಲಿಸುತ್ತಿದೆ ನೋಡು. ಅದಕ್ಕಾಗಿ ನಿನ್ನ ಕಣ್ಣಿಂದ ದೂರ ಇದ್ದರೂ ಮನಸ್ಸು ನಿನ್ನೇ ಬಯಸುತ್ತೆ ಕಣೋ. ನಾನೇನೋ ಅಂದುಕೊಂಡಾಗ ನೀನಂದು ಹೇಳಿದ್ದೆ ನೋಡು, ಸವಿ, ಯಾವ ಕಾರಣಕ್ಕೂ ನೀನು ಸಾವಿನ ಮೊರೆ ಹೋಗ್ಬೇಡ. ಅದು ನಿನ್ನಂತಹ ವಿದ್ಯಾವಂತಳ ಲಕ್ಷಣ ಅಲ್ಲ ಅಂತ. ಹೌದು ಅದು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿದೆ. ಜೀವನದಲ್ಲಿ ಯಾವುದೇ ಆಸೆ-ಆಕಾಂಕ್ಷೆಗಳಿಲ್ಲದಿದ್ದರೂ ನಿನ್ನ ಮಾತಿಗಾಗಿ ಪ್ರೀತಿ-ಗೌರವ ಇದೆ ಕಣೋ. ಪ್ರೀತಿಯೆಂಬ ಮಾಯೆ ಹೃದಯವನ್ನು ಸುಟ್ಟು ಹಾಕಿತು ನೋಡು. ವೇಗ ಎನ್ನುವುದು ಎರಡಕ್ಷರಗಳ ಪದ ಸಾವು ಅನ್ನೋ ಹಾಗೆನೇ. ನಿಧಾನ ಎನ್ನುವುದು ಮೂರಕ್ಷರಗಳ ಪದ ಜೀವನ ಅನ್ನೋ ಹಾಗೆನೇ, ಹಣೆ ಬರಹದಲ್ಲಿ ನಿನ್ನ ಹೆಸರೇ ಬರೆದಿದ್ದರೆ ನಾನು-ನೀನು ಒಂದಾಗೇ ಆಗ್ತೀವಿ ಅಲ್ಲಿ ತನಕ ನಿನಗೋಸ್ಕರ ಕಾಯ್ತಾ ಇರ್ತೀನಿ ಕಣೋ.
ಇಂತೀ ನಿನ್ನ

ಸವಿ

ಬರಹ:ವಿಸ್ಮಿತ ಎಡಮಂಗಲ
ತೃತೀಯ ಪದವಿ ಪತ್ರಿಕೋದ್ಯಮ ವಿಭಾಗ
ಎಸ್. ಡಿ. ಎಂ. ಕಾಲೇಜು ಉಜಿರೆ

0 comments:

Post a Comment