ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:59 PM

ಉತ್ತಾನಾಸನ

Posted by ekanasu

ವೈವಿಧ್ಯ

ಈ ಆಸನದಲ್ಲಿ ಬೆನ್ನು, ತಲೆಯನ್ನು ಮುಂದಕ್ಕೆ ಬಾಗಿಸುವುದು. ಈ ಆಸನದಲ್ಲಿ ಬೆನ್ನೆಲಿಬಿಗೆ ಹೆಚ್ಚಿನ ಎಳೆತ ನೀಡಿದಂತಾಗುತ್ತದೆ.
ಅಭ್ಯಾಸ ಕ್ರಮ : ಮೊದಲು ತಾಡಾಸನದಲ್ಲಿ ನೆಲೆಸಬೇಕು. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಮುಂದಕ್ಕೆ ನಿಧಾನವಾಗಿ ಬಗ್ಗಿ ಎರಡೂ ಕೈಗಳನೂ ಪಾದಗಳ ಸಮೀಪದಲ್ಲಿ ಊರಬೇಕು. ಆದರೆ ಮೊಣಕಾಲುಗಳನ್ನು ಬಗ್ಗಿಸಬಾರದು. ತಲೆಯನ್ನು ಮೊಣಕಾಲಿನ ಸಮೀಪ ಸಾಧ್ಯವಿರುವಷ್ಟು ತರಬೇಕು ಯಾ ಒರಗಿಸಿಡಬೇಕು. ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಸ್ವಲ್ಪ ಕಾಲ ನೆಲೆಸಬೇಕು. ಅನಂತರ ಉಸಿರು ತೆಗೆದುಕೊಂಡು ನಿಧಾನವಾಗಿ ತಾಡಾಸನ ಸ್ಥಿತಿಗೆ ಬರಬೇಕು. ಎರಡು ನಿಮಿಷ ವಿಶ್ರಾಂತಿ. ಆರಂಭದಲ್ಲಿ ಸಾಧ್ಯವಿರುವಷ್ಟೆ ಮುಂದೆ ಬಾಗಬೇಕು. ದಿನಾಲು ಅಭ್ಯಾಸ ಮಾಡುವಾಗ ಮುಂದಕ್ಕೆ ಭಾಗುವಿಕೆ ಉತ್ತಮಗೊಳ್ಳುತ್ತದೆ.


ಉಪಯೋಗಗಳು :

ಈ ಆಸನದಿಂದ ಪಿತ್ತಕೋಶ ಮತ್ತು ಮೂತ್ರಪಿಂಡಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಹೊಟ್ಟೆನೋವು ಪರಿಹಾರವಾಗುತ್ತದೆ. ಮುಟ್ಟಿನ ದೋಷಗಳು ನಿವಾರಣೆಯಾಗುತ್ತವೆ. ದಿನಾಲೂ ಈ ಆಸನ ಅಭ್ಯಾಸ ಮಾಡುವುದರಿಂದ ಮನಸ್ಸಿನ ಗೊಂದಲ ನಿವಾರಣೆಯಾಗಿ ಲವಲವಿಕೆ ಮೂಡುತ್ತದೆ. ಶೀರ್ಷಾನದಲ್ಲಿ ತಲೆಭಾರ, ಗೊಂದಲ ಇತ್ಯಾದಿ ತಲೆದೋರುವವರಿಗೆ ಈ ಆಸನದಿಂದ ತೊಂದರೆಗಳು ಪರಿಹಾರವಾಗುತ್ತದೆ. ಈ ಆಸನದಿಂದ ಕಣ್ಣುಗಳ ಹೊಳಪು ಹೆಚ್ಚುತ್ತದೆ. ತುಂಬಾ ಸೊಂಟನೋವು, ಸ್ಲಿಪ್ಡಿಸ್ಕ್ ಸಮಸ್ಯೆ ಇದ್ದವರು ಈ ಆಸನ ಮಾಡಬಾರದು.

-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.

0 comments:

Post a Comment