ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ನೀನೇ ನನ್ನ ಜೀವ, ನೀನೇ ನನ್ನ ಪ್ರಾಣ, ಸರ್ವಸ್ವ ಎಂದು ಅವನಿಗಾಗಿ/ಅವಳಿಗಾಗಿ ಹಾತೊರೆಯುವ ಮನಸ್ಸು, ಬದುಕಿರುವುದೆಲ್ಲಾ ನಿನಗಾಗಿ,ನಿನ್ನ ಪ್ರೀತಿಗಾಗಿ ಎಂದೆನಿಸುವ ಹುಚ್ಚು ಪ್ರೀತಿ ಅದು.. ಇಡೀ ಜೀವನವನ್ನೇ ಅವಳ/ಅವನ ಪ್ರೀತಿಗಾಗಿ ಮುಡಿಪಾಗಿಟ್ಟರೆ ಜೀವನದ ಗುರಿ,ಸಾಧನೆಯನ್ನು ಸಾಧಿಸೋದು ಯಾವ ಅವರಿಗಾಗಿ?ಕೆಲದಶಕಗಳಿಂದ ನಮ್ಮೊಂದಿಗೆ ನಮ್ಮ ಹೆತ್ತವರು ಇರುತ್ತಾರೆ, ಬೇಕುಬೇಡಗಳನ್ನು ಪೂರೈಸುತ್ತಾರೆ, ಆದರೆ ಅವರಿಗಾಗಿ ನಾವೆಂದೂ ಅಂತಹಾ ಪ್ರೀತಿಯನ್ನು ತೋರುವುದಿಲ್ಲ...ಕೇವಲ ಕೆಲವು ತಿಂಗಳ ಹಿಂದೆ ಬಂದಿರುವ ಅವನ/ಳನ್ನು ಭವಿಷ್ಯದ, ಜೀವನದ ಒಡೆಯ/ಒಡತಿ ಎಂದು ಘೋಷಿಸಿಬಿಡುತ್ತೇವೆ. ಪ್ರೀತಿ ಮಾಡುತ್ತೇವೆ. ಇದೇನಾ ನಿಜವಾದ ಜೀವನ? ಇದೇನಾ ನಿಜವಾದ ಪ್ರೀತಿ?
ತನ್ನ ಪ್ರೀತಿಗೆ ಅವರೊಪ್ಪಿಕೊಂಡಿಲ್ಲ ಎಂದಾಕ್ಷಣ ಏನೇನೋಕೆಟ್ಟ ನಿರ್ಧಾರ ತೆಗೆದುಕೊಳ್ಳುವಷ್ಟು ಮುಂದಾಗುತ್ತೇವೆ, ಹಿಂದೆ ಮುಂದೆ ಹೆತ್ತವರನ್ನೂ ಅವರು ನಮಗಾಗಿ ಪಟ್ಟ ಕಷ್ಟಗಳನ್ನೂ ಮರೆತು ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.
ಪ್ರೀತಿಯೇ ಜೀವನವಲ್ಲ,ಆದರೆ ಜೀವನದಲ್ಲಿ ಪ್ರೀತಿ ಬರಲಿ... ಪ್ರೀತಿಯೆಂಬ ಮಾಯೆಯಿಂದ ಹೊರಬರೋಣ...
'ಸಮಯ' ಎಲ್ಲರನ್ನೂ ಎಲ್ಲವನ್ನೂ ಬದಲಾಯಿಸುತ್ತದೆ. ಕೆಲವಂದು ಬಾರಿ ಕ್ಷಣ ಕಾಲ ನಮ್ಮ ಜೊತೆಗಿರುವ ಅವನ/ಅವಳ ಪ್ರೀತಿಗಿಂತಾ, ಚಿರಕಾಲ ನಮ್ಮೊಂದಿಗೆ ಇರುವ ನಮ್ಮ ಹೆತ್ತವರನ್ನು ಪ್ರೀತಿಸೋಣ.ಅವರ ಬಗ್ಗೆ ಒಂದು ಬಾರಿ ಒಂದು ಕ್ಷಣ ಯೋಚಿಸೋಣ..

- ಸನತ್ ಕುಮಾರ್

1 comments:

Sushma said...

superb...lekhana chennagide...vastavikege hidida kannadi

Post a Comment