ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಲ್ಕಿ : ಹೆಜಮಾಡಿ ಕಿರು ಮೀನುಗಾರಿಕಾ ಬಂದರಿನಲ್ಲಿ 2 ಕೋಟಿ ರೂಪಾಯಿ ವೆಚ್ಚದ ಹೂಳೆತ್ತುವಿಕೆ ಕಾಮಗಾರಿಗೆ ಶಾಸಕ ಲಾಲಾಜಿ ಆರ್.ಮೆಂಡನ್ ಬುಧವಾರ ಚಾಲನೆ ನೀಡಿದರು.ಕಳೆದ4 ವರ್ಷಗಳ ಹಿಂದೆ ಬಿ.ನಾಗರಾಜ ಶೆಟ್ಟಿ ಮೀನುಗಾರಿಕಾ ಸಚಿವರಾಗಿದ್ದ ಸಂದರ್ಭ ಹೆಜಮಾಡಿ ಬಂದರಿಗೆ ಯಂತ್ರಿಕ ದೋಣಿಗಳು ಆಗಮಿಸಲು ಅಸಾಧ್ಯವಾಗಿ ಪಾಳು ಬಿದ್ದ ಕಾರಣ ಹೂಳೆತ್ತುವಿಕೆಗಾಗಿ ಇಲಾಖೆಯಿಂದ 2 ಕೋಟಿ ರೂ. ಬಿಡುಗಡೆಗೊಳಿಸಿದ್ದರು. ಆದರೆ ತಾಂತ್ರಿಕ ತೊಂದರೆ ಗಳಿಂದ ಡ್ರೆಜ್ಜಿಂಗ್ ಕಾಮಗಾರಿಗೆ ತಡೆವುಂಟಾಗಿತ್ತು. ಸ್ಥಳೀಯ ನಾಗರೀಕರು ಮತ್ತು ಜನಪ್ರತಿನಿಧಿಗಳ ಅವಿರಥ ಶ್ರಮದ ಬಳಿಕ ಸಂಸದ ( ಈಗಿನ ಮುಖ್ಯಮಂತ್ರಿ ) ಡಿ.ವಿ ಸದಾನಂದ ಗೌಡ ಮತ್ತು ಶಾಸಕ ಲಾಲಾಜಿ ಆರ್.ಮೆಂಡನ್ ಮುತುವರ್ಜಿ ವಹಿಸಿ ತಡೆಯನ್ನು ನಿವಾರಿಸಿ ಕಾಮಗಾರಿಗೆ ಅನುವು ಮಾಡಿಕೊಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಪ್ರದೀಪ್ ಮಾಲೀಕತ್ವದ ಪ್ರಣವ್ ಎಂಟರ್ಪ್ರೈಸಸ್ ನವರು ದೇಶದಲ್ಲಿಯೇ 7 ನೇ ಅತ್ಯುತ್ತಮ ಎನ್ನಬಹುದಾದ ಹಾಲಂಡ್ನಿಂದ ತರಿಸಿದ ಬೆವರ್ ಕಟ್ಟರ್ ಸಕ್ಷನ್ ಡ್ರಿಪ್ಪರ್ ಎಂಜಿನ್ ಮೂಲಕ ಡ್ರೆಜ್ಜಿಂಗ್ ಕಾಮಗಾರಿ ಆರಂಭಿಸಿದ್ದು, ಪ್ರತಿ ಗಂಟೆಗೆ 200 ಕ್ಯುಬಿಕ್ ಮೀಟರ್ನಷ್ಟು ಹೂಳೆತ್ತಲು ಅವಕಾಶ ಹೊಂದಿದೆ. ಮುಂದಿನ 4 ತಿಂಗಳ ಕಾಲ ಹೂಳೆತ್ತುವ ಕಾಮಾಗಾರಿ ನಡೆಯಲಿದ್ದು ಹೆಜಮಾಡಿ ಬಂದರಿನಿಂದ ಶಾಂಭವಿ ನದಿಯ ಅಳಿವೆ ಬಾಗಿಲ (ಸುಮಾರು 2 ಕಿ.ಮೀ.) ತನಕ ಹೂಳೆತ್ತಲು ನಿರ್ಧರಿಸಲಾಗಿದೆ.


ಬಂದರಿನಿಂದ ಉತ್ತರಕ್ಕೆ ನಡಿಕುದ್ರು ಸೇತುವೆ ತನಕವೂ ಹೂಳೆತ್ತಲೂ ಸರಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ ಶಿವರಾಮ್ ಇತ್ತಿಚೆಗೆ ಭೇಟಿ ನೀಡಿದ್ದ ಸಂದರ್ಭ ಇಲಾಖಾಧಿಕಾರಿ ಗಳಿಗೆ ಸೂಚನೆ ನೀಡಿದ್ದು , ಅದಕ್ಕಾಗಿ ಸುಮಾರು 75 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಅಲ್ಲಿನ ಸರ್ವೇ ನಡೆದ ಬಳಿಕ ಆ ಕಾಮಗಾರಿಯೂ ನಡೆಯಲಿದೆ. ಸಮುದ್ರ ತೀರ ದ ತಗ್ಗು ಪ್ರದೇಶಗಳಿಗೆ ಹೂಳೆತ್ತಿದ ಮರಳನ್ನು ತುಂಬಿಸಲು ಇಲಾಖೆ ನಿರ್ಧರಿಸಿದ್ದು , ಅಳಿವೆ ಪ್ರದೇಶ ಸುತ್ತ ಅಧಿಕ ಖಾಲಿ ಜಾಗ ಎತ್ತರಿಸಲಾಗುವುದು ಎಂದು ಇಲಾಖಾಧಿಕಾರಿಗಳೂ ತಿಳಿಸಿದ್ದಾರೆ.
ಹೆಜಮಾಡಿ ಆಲಡೆ ಅರ್ಚಕ ಶಂಕರ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆದ ಬಳಿಕ ಶಾಸಕ ಮೆಂಡನ್ ಡ್ರೆಜ್ಜಿಂಗ್ ಇಂಜಿನ್ ಚಾಲನೆಗೊಳಿಸುವ ಮೂಲಕ ಕಾಮಗರಿಗೆ ಚಾಲನೆ ನಿಡಿದರು.

ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಗ್ರಾಪಂ ಅಧ್ಯಕ್ಷೆ ವರದಾಕ್ಷಿ ಸಾಲ್ಯಾನ್, ಉಪಾಧ್ಯಕ್ಷ ವಾಮನ ಕೋಟ್ಯಾನ್, ಮೂಲ್ಕಿ ವಲಯ ಪರ್ಸಿನ್ ಮತ್ತು ಟ್ರಾಲ್ ಬೋಟು ಮೀನುಗಾರರ ಸಂಘದ ಪದಾಧಿಕಾರಿಗಳಾದ ವಿಜಯ ಎಸ್. ಬಂಗೇರ , ವಿನೋದ್ ಕೋಟ್ಯಾನ್ , ನಾರಾಯಣ ಮೆಂಡನ್, ಶ್ರೀಧರ ಮೆಂಡನ್, ಸುಧಾಕರ ಕರ್ಕೇರ, ಕರುಣಾಕರ ಕರ್ಕೇರ, ಗಿಲ್ನೆಟ್ ಯೂನಿಯನ್ನ ಏಕನಾಥ ಕಕೇರ ಜನಾರ್ಧನ ಸುವರ್ಣ , ಬಂದರು ಮತ್ತು ಮೀನುಗಾರಿಕಾ ಇಲಾಖಾ ಎಇಇ ಎಮ.ಎನ್. ಖಾರ್ವಿ, ಎಇ ಸಂತೋಷ್ ಕುಮಾರ್ ಉಳ್ಳಾಲ್, ಗುತ್ತಿಗೆದಾರ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಅ.15ರೊಳಗೆ ಮುಖ್ಯಮಂತ್ರಿ ಬಳಿ ನಿಯೋಗ
ರಾಜ್ಯ ಕೇಂದ್ರ ಸರಕಾರವು ಅಬಿವೃದ್ದಿಗಾಗಿ ಅನುದಾನ ಬಿಡುಗಡೆಗೊಲಿಸುತ್ತಿದ್ದರೂ, ಅತ್ಯಗತ್ಯವಾಗಿ ಬೇಕಾದ ಹೆಜಮಾಡಿ ಬಂದರಿಗೆ ಯಾವುದೇ ಅನುದಾನ ಬಿಡುಗಡೆ ಗೊಳಿಸದಿರುವ ಬಗ್ಗೆ ಸ್ಥಳೀಯ ಮೀನುಗಾರರು ತೀವ್ರ ಅಸಮಧಾನಗೊಂಡಿದ್ದು , ಬುಧವಾರ ಶಾಸಕ ಮೆಂಡನ್ ಬಳಿ ಅಳಲು ತೋಡಿ ಕೊಂಡರು.

ಬಂದರಿಗೆ ಬೇಟಿ ನೀಡಿದ್ದ ಸದಾನಂದ ಗೌಡರು ನೀಡಿದ್ದ ಭರವಸೆಯನ್ನಾದರೂ ಅವರಿಗೆ ತಿಳಿ ಹೇಳುವಂತೆ ಮೀನುಗಾರರನೇಕರು
ವಿನಂತಿಸಿಕೊಂಡ ಮೇರೆಗೆ ಮೆಂಡನ್ ನವರು ಮುಖ್ಯಮಂತ್ರಿಗಳ ಜತೆ ಸ್ಥಳಿಯ ಮೀನುಗಾರರು, ಇಲಾಖಾಧಿಕಾರಿಗಳ ಜತೆ ಭೇಟಿಯಾಗಿ ಇಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದವರು ಪತ್ರಿಕೆಗೆ ತಿಳಿಸಿದ್ದಾರೆ.

ತಕ್ಷಣ ಬ್ರೇಕ್ವಾಟರ್ ಕಾಮಗಾರಿಗಾಗಿ 20ಕೋಟಿ ಬಿಡುಗಡೆಗೊಳಿಸಿ

ಹೆಜಮಾಡಿ ಬಂದರಿನ ಪ್ರಮುಖ ಸಮಸ್ಯೆ ಏಂದರೆ ಬಂದರು ವ್ಯಾಪ್ತಿಯಾದ್ಯಂತ ಹೂಳು ತುಂಬಿರುವುದು ಅಳಿವೆಯ ನಿರಂತರ ಚಾಲನೆಯಿಂದ ಯಾಂತ್ರಿಕ ದೋಣಿಗಳು ಬೇಕಾದಲ್ಲಿ ಸಂಚರಿಸಲಾಗುವುದು. ಅದಕ್ಕಾಗಿ ತಕ್ಷಣ ಬ್ರೇಕ್ ವಾಟರ್ ನಿರ್ಮಾಣ ಕೈಗೊಂಡಲ್ಲಿ ಸಕಲ ಸಮಸ್ಯೆ ತಕ್ಷಣ ಪರಿಹಾರವಾಗಲಿದೆ ಎಂಬುದು ಸ್ಥಳೀಯ ಮೀನುಗಾರರ ವಾದ. ಇದನ್ನು ಇಲಾಖಾ ಮುಖ್ಯಸ್ಥರು ಒಪ್ಪುತ್ತಾರೆ. ಅದಕ್ಕಾಗಿ ಮುಖ್ಯಮಂತ್ರಿ ಗಳ ಮನ ಒಲಿಸಿ ಬ್ರೇಕ್ ವಾಟರ್ ನಿರ್ಮಾಣದ ಪ್ರಥಮ ಹಂತದ ಕಾಮಗಾರಿಗೆ 20 ಕೊಟಿ ರೂಪಾಯಿ ಬಿಡುಗಡೆ ಗೊಳಿಸ ಬೇಕೆಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.

ಹೆಜಮಾಡಿ ಬಂದರು ಇದ್ದಿದ್ದರೆ ಮಂಗಳೂರು ದುರಂತ ತಪ್ಪುತ್ತಿತ್ತು
ಇತ್ತಿಚೇಗೆ ಮಂಗಳೂರಿನಲ್ಲಿ ನಡೆದ 2 ದೋಣಿ ದುರಂತಗಳು ಹೆಜಮಾಡಿ ಬಂದರು ಇರುತ್ತಿದ್ದರೆ ನಡೆಯುತ್ತಿರಲಿಲ್ಲ ಎಂಬುದು ಹಿರಿಯ ಮೀನುಗಾರರ ವಾದ. ಎನ್ಎಂಪಿಟಿ ಬಂದರಿನಲ್ಲಿ ಮೀನುಗಾರಿಕಾ ದೋಣಿಗಳಿಗೆ ಸೂಕ್ತ ಅವಕಾಶ ಕೊಡದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿತ್ತು. ಹೆಜಮಾಡಿ ಬಂದರು ಇರುತ್ತಿದ್ದಲ್ಲಿ ಸಮಸ್ಯೆ ಪರಿಹಾರ ವಾಗುತ್ತಿತ್ತು. ಸರಕಾರ ಇದನ್ನೂ ಗಮನದಲ್ಲಿರಿಸ ಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.
ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ

0 comments:

Post a Comment