ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ಮಾನವರಾದ ನಮಗೆ ಬದುಕೊಂದು ಯುದ್ಧದಂತೆ.ಈ ಯುದ್ಧದಲ್ಲಿ ನಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಹೋರಾಡುತ್ತೇವೆ.ಸೋಲು ಗೆಲುವು ಎರಡನ್ನೂ ನಾವು ಪಡೆಯುತ್ತೇವೆ.ಆದರೆ ಅಸಾಮಾನ್ಯನಾದ ಭಗವಂತನಿಗೆ ಬದುಕೆಂದರೆ ಒಂದು ಕ್ರೀಡೆ.ಯುದ್ಧದಲ್ಲಿರುವಂತೆ ಇಲ್ಲಿಯೂ ಎರಡು ಪಕ್ಷಗಳಿವೆ.ಎರಡೂ ಪಕ್ಷಗಳೂ ವಿಜಯಕ್ಕಾಗಿ ಹೊರಾಡುತ್ತವೆ.ಯುದ್ಧದಲ್ಲಿ ಸಾವು ಅಥವಾ ರಕ್ತಪಾತ ನಡೆಯುತ್ತದೆ.ಆಟದಲ್ಲಿ ಬೆವರು ಹರಿಯುತ್ತದೆ.ಶ್ರಮವಾಗುತ್ತದೆ.ಹೀಗೆ ಎರಡರಲ್ಲಿಯೂ ಸಾಮ್ಯತೆಗಳಿವೆ.ಆದರೆ ವಿರೋಧವಾದವುಗಳೂ ಇವೆ.ಇದಕ್ಕೆ ಕಾರಣ ಮಾನವರಾದ ನಮ್ಮಲ್ಲಿ ಸಾತ್ವಿಕ ಹಾಗೂ ಆಸುರೀ ಎಂಬ ಎರಡೂ ಭಾವಗಳು ಮಿಲಿತವಾಗಿರವುದು.ನಮ್ಮ ಬಾಳಾಟವು ಹೋರಾಟವಾಗದೆ ಆಟವಾಗಬೇಕು.ಆಗ ಮಾತ್ರ ನಮ್ಮ ಬದುಕು ಸಾರ್ಥಕ ಎಂದು ಶ್ರಿರಾಮಚಂದ್ರಾಪುರಮಠದ ಶ್ರೀ ಶ್ರಿಮದ್ರಾಘವೇಶ್ವರ ಭಾರತತೀ ಶ್ರೀಗಳು ಹೇಳಿದ್ದಾರೆ.


ಚಾತುರ್ಮಾಸ್ಯದ ನಿಮಿತ್ತ ಅಶೋಕೆಯಲ್ಲಿ ಆಯೋಜಿತವಾದ "ರಾಮಕಥಾ"ದಲ್ಲಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಅಕಾರನವಾಗಿ ಯಾವಕಾರ್ಯವನ್ನೂ ಮಾಡಬಾರದು.ಅದು ಸದಸದ್ವಿವೇಕವಲ್ಲ.ರಾಮಾಯಣದಲ್ಲಿ ಉಲ್ಲೇಖಿತನಾದ ರಾವಣ ಕಾರಣವಿಲ್ಲದೆಯೇ ವೀರರನ್ನರಸಿ ಹೋಗಿ ಯುದ್ಧಮಾಡುತ್ತಿದ್ದ.ಅವನ ಈ ಕಾರ್ಯಕ್ಕೆ ಮೊದಲ ಆಘಾತವನ್ನು ನೀಡಿದವನು ಸಹಸ್ರಬಾಹುವೆಂದೇ ಪ್ರಸಿದ್ಧನಾದ ಕಾರ್ತವೀರ್ಯ.ಆಮೇಲೆ ವಾನರವೀರನಾದ ಕಿಷ್ಕಿಂಧಾಧಿಪತಿಯಾದ ವಾಲಿ.ವಾಲಿಯನ್ನು ಹುಡುಕಿಕೊಂಡುಹೋಗಿ ಯುದ್ಧಮಾಡುವ ಮೊದಲೆ ಅವನ ವಶವಾಗಿ ಬಳಲಿದ ರಾವಣ ವಾಲಿಯ ಪರಾಕ್ರಮವನ್ನು ಕಂಡು ವಿಸ್ಮಿತನಾಗಿ ಮುಂದೆಂದೂ ವಾಲಿಯಿಂದ ಬಾಧೆ ಬಾರದಂತೆ ಅಗ್ನಿಸಾಕ್ಷಿಯಾಗಿ ಅವನ ಸಖ್ಯವನ್ನು ಸಂಪಾದಿಸಿದ.ರಾವಣನಿಗೆ ಲಾಭವಾಯಿತು.ಆದರೆ ರಾಕ್ಷಸವಧೆಗಾಗಿಯೇ ಲೋಕದಲ್ಲಿ ಹುಟ್ಟಿದ್ದ ವಾಲಿ ತತ್ವವನ್ನು ಮರೆತು ಅಪವಿತ್ರವಾದ ಸ್ನೇಹವನ್ನು ಮಾಡಿಕೊಂಡ.ರಾಮಾಯಣದಲ್ಲಿ ಮಹರ್ಷಿವಾಲ್ಮೀಕಿ ಈ ಘಟನೆಯನ್ನು ತುಂಬ ರೋಚಕವಾಗಿ ವರ್ಣಿಸಿದ್ದಾರೆ ಎಂದು ಹೇಳಿದ ಪೂಜ್ಯಶ್ರೀಗಳು ಬದುಕು ಹೋರಾಟವಾಗದೆ ಆಟವಾಗಬೇಕು ಎಂದು ಆಶಿಸಿದರು.

ಶ್ರೀಪಾದ ಭಟ್,ಪ್ರೇಮಲತತಾ ದಿವಾಕರ್,ವಸುಧಾ ಶರ್ಮಾ,ಇವರ ಗಾಯನ,ಪ್ರಕಾಶರ ವೇಣುವಾದನ,ನರಸಿಂಹ ಮೂರ್ತಿಯವರ ಮೃದಂಗ,ಗೋಪಾಲಕೃಷ್ಣ ಹೆಗಡೆಯವರ ತಬಲಾಗಳ ವಾದ್ಯವೈಭವ, ರಾಘವೇಂದ್ರ ಹೆಗಡೆಯವರ ಮರಳುಶಿಲ್ಪ ಗಣಪತಿ ನೀರ್ನಳ್ಳಿಯವರ ಚಿತ್ರ ಕಾರ್ಯಕ್ರಮಕ್ಕೆ ಕಳೆನೀಡಿತು.ಕುಮುಟಾಮಂಡಲದ ವಾಲಗಳ್ಳಿ,ಧಾರೇಶ್ವರ,ಕೆಕ್ಕಾರು,ಗೋವಾ ವಲಯಗಳ ಶಿಷ್ಯಸಮುದಾಯದಿಂದ ಶ್ರಿಗುರುದೇವತಾಸೇವೆಯು ಸಮರ್ಪಿತವಾಯಿತು.ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು.

ಶ್ರೀರಾಮಜನನ
ನಾಳೆ ಬುಧವಾರದಂದು ಇದೇ ಸೂರ್ಯಸಿಂಹಾಸನವೇದಿಕೆಯಲ್ಲಿ ರಾಮಾಯಣೋಕ್ತವಾದ ಎಲ್ಲ ವೈಭವ,ಗೀತ,ನೃತ್ಯ,ಚಿತ್ರಗಳೊಂದಿಗೆ ಶ್ರೀರಾಮಜನನ ವೃತ್ತಾಂತವು ಸವಿಸ್ತಾರವಾಗಿ ನಡೆಯಲಿದೆ.

ವರದಿ: ಸತ್ಯನಾರಾಯಣ ಶರ್ಮ

0 comments:

Post a Comment