ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್

ಮೊನ್ನೆ ತಾನೆ ನಮ್ಮ ರಾಜ್ಯದಲ್ಲಿ ಹಾಲಿ(ಈಗ ಮಾಜಿ ಮಾಜಿ...) ಮುಖ್ಯಮಂತ್ರಿಗಳ ಹಾಗೂ ಮಾಜಿ ಮುಖ್ಯಮಂತ್ರಿಗಳ ನಡುವೆ ಒಂದು ಸುಂದರವಾದ ಕದನ ನಡೆದದ್ದು ಗೊತ್ತೇ ಇದೆ. ಅದರ ಮುಂದುವರೆದ ಭಾಗ ನಮ್ಮ ಧರ್ಮಸ್ಥಳದಲ್ಲೇ ನಡೆದಿತ್ತು.ಹೀಗೆ ಹಾಲಿ(ಆಗಿನ ಹಾಲಿ ಈಗಿನ ಮಾಜಿ) -ಮಾಜಿ ಮುಖ್ಯಮಂತ್ರಿಗಳು ತಮ್ಮ ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಧರ್ಮಸ್ಥಳದಲ್ಲಿ ಮಾಡಿದ ಆಣೆ ಪ್ರಮಾಣದ ವೇಳೆ ಹತ್ತಾರು ಸುದ್ದಿ ವಾಹಿನಿಗಳ,ಪತ್ರಿಕೆಗಳ ವರದಿಗಾರರು ಆಗಮಿಸಿದ್ದರು. ಎಲ್ಲರಿಗೂ ಈ ಸುದ್ದಿಯನ್ನು ತಾವು ಮೊದಲು ರೋಚಕವಾಗಿ ಭಿತ್ತರಿಸಬೇಕೆಂಬ ಹಂಬಲ.ವಾರದ ಮೊದಲೇ ಧರ್ಮಸ್ಥಳಕ್ಕೆ ಬಂದು ನಿಮಿಷ ನಿಮಿಷಗಳ ಬೆಳವಣಿಗೆಗಳನ್ನು ಧಾಖಲಿಸಿ ತಮ್ಮ ಓದುಗರಿಗೆ ಎಳೆಎಳೆಯಾಗಿ ಹೇಳುತ್ತಿದ್ದರು.


ಅಂದು ಸೋಮವಾರ ಜೂನ್ 27.ವರುಣ ದೇವನಿಗೆ ಏನೋ ಅಸಮಾಧಾನ ಆದಂತೆ ತೋರುತ್ತಿತ್ತು.ಧಾರಾಕಾರ ಮಳೆ.ಆದರೆ ಅದನ್ನು ಲೆಕ್ಕಿಸದೆ ನಮ್ಮ ಪತ್ರಕರ್ತರು ಬೆಳಗ್ಗೆ ಐದು ಗಂಟೆಗೇ ದೇವಸ್ಥಾನದ ಮುಂದೆ ಹಾಜರ್...ಆ ಮಳೆಯ ವಿರುದ್ಧ ಹೋರಾಡಿ ನಮಗೆ ಸುದ್ದಿ ನೀಡಿದ ಅವರ ಆ ಸ್ಥಿತಿ ದೇವರಿಗೇ ಪ್ರೀತಿ.
ನಂತರ ಸಿಎಂ,ಮಾಜಿ ಸಿಎಂ ಎಲ್ಲರೂ ದೇವರ ದರ್ಶನ ಮಾಡಿ ಹೋಗುವ ತನಕವೂ ಅವರು ಅಲ್ಲಿಂದ ಕದಲಲಿಲ್ಲ,ಆಗ ಸಂಜೆ ಮೂರು ಗಂಟೆ. ನಂತರ ಬೇಗ ತಮಗೆ ಮೀಸಲಿಟ್ಟ ಮೀಡಿಯಾ ಸೆಂಟರಿಗೆ ಹೋಗಿ ತಮ್ಮ ತಮ್ಮ ಪತ್ರಿಕೆಗಳಿಗೆ ವರದಿ ಕಳುಹಿಸಿದ ಮೇಲೆಯೇ ಊಟ ತಿಂಡಿ ಎಲ್ಲಾ.

ಇಲ್ಲಿ ನಾವು ಗಮನಿಸಬೇಕಾದದ್ದು ಅವರ ನಿಸ್ವಾರ್ಥ ಸೇವೆ.ಆ ಧಾರಾಕಾರ ಮಳೆಯಲ್ಲಿ ಅವರು ತಮ್ಮ ಕ್ಯಾಮರಾವನ್ನು ನೀರಿನಿಂದ ರಕ್ಷಿಸುತ್ತಾ,ತಮ್ಮ ಕಷ್ಟವನ್ನು ಲೆಕ್ಕಿಸದೇ ನಮಗಾಗಿ ಮಾಹಿತಿ ಸಂಗ್ರಹಿಸಿ ಭಿತ್ತರಿಸಿದ ಅಂಶಗಳನ್ನು ನಾವೇಕೆ ಸ್ಮರಿಸುತ್ತಿಲ್ಲ ? ಅವರ ತಾಳ್ಮೆ ಎಷ್ಟರ ಮಟ್ಟಿಗಿರಬಹುದು ಯೂಚಿಸಬೇಕಾಗಿದೆ.

ಜಗತ್ತಿನಲ್ಲಿ ಎಲ್ಲರೂ ರಜೇನ ಅನುಭವಿಸುತ್ತಾರೆ.ಆದರೆ ಅದೆಷ್ಟೋಬಾರಿ ಪತ್ರಕರ್ತರಿಗೆ ಇಂತಹ ರಜೆಯನ್ನು ಅನುಭವಿಸುವ ಭಾಗ್ಯ ದೊರೆಯುವುದಿಲ್ಲ. ರಜೆಯಲ್ಲಿದ್ದರೂ ತುರ್ತು ಸಂದರ್ಭಗಳು ಎದುರಾಗಿ ಮತ್ತೆ ರಜೆಯನ್ನೂ ಲೆಕ್ಕಿಸದೆ ವೃತ್ತಿಯತ್ತ ಸಾಗಬೇಕಾದ ಸಂದರ್ಭಗಳು ಇಲ್ಲದ್ದಿಲ್ಲ. ರಾತ್ರಿ ಹಗಲು ಎಂದೂ ನೋಡದೆ ಓದುಗರಿಗಾಗಿ/ವೀಕ್ಷಕರಿಗಾಗಿ ಸುದ್ದಿಗಳನ್ನು ಸಂಗ್ರಹಿಸುವ ಪತ್ರಕರ್ತರನ್ನು ಸ್ಮರಿಸುವ ಸಂಖ್ಯೆ ಎಷ್ಟಿವೆ? ಪತ್ರಕರ್ತರು ಅಂದ್ರೆ ಒಂದು ರೀತಿ ದೇಶ ಕಾಯೋ ಸೈನಿಕ ಇದ್ದಂತೆ, ಸೈನಿಕನ ಕೈಯಲ್ಲಿ ಆಯುಧ ಇದ್ರೆ ಪತ್ರಕರ್ತರ ಕೈಯಲ್ಲಿ ಆಯುಧಕ್ಕಿಂತ ತೀಕ್ಷ್ಣವಾಗಿರೋ ಲೇಖನಿ ಇರುತ್ತೆ ಅಂತ ಮರೀಬಾರದು.

ಪತ್ರಕರ್ತರು ಒಂಥರಾ ಕಾಣದ ಕೈಗಳು ಇದ್ದಂತೆ. ನಾವು ಯಾವುದೇ ಸಿನಿಮಾ ನೋಡಿದರೂ ಅದರಲ್ಲಿ ನಟರು ನಮ್ಮ ಮುಂದೆ ಕಾಣ್ತಾರೆ ವಿನಃ ಅವರ ಹಿಂದಿರೋ ನಿರ್ದೇಶಕನನ್ನಲ್ಲ. ಹಾಗೇನೇ ನಾವು ಯಾವ ವರದಿಯನ್ನು ಓದಿದರೂ ಅದರ ವಿಷಯವನ್ನು ನೋಡುತ್ತೇವೆಯೇ ಹೊರತು ಅದನ್ನು ಬರೆದ ಪತ್ರಕರ್ತರನ್ನಲ್ಲ.

ನಂಗೂ ಗೊತ್ತು ಈ ಕೆಲಸ ತುಂಬಾ ಸುಲಭ ಇಲ್ಲಾಂತ. ಯಾಕಂದ್ರೆ ಒಬ್ಬ ಪತ್ರಕರ್ತನ ಬದುಕು ಹೇಗಿರುತ್ತೆ ಅಂದ್ರೆ ಅವನಿಗೆ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಚಿಂತಿಸುವ ಸ್ವಾತಂತ್ರ್ಯ ತುಂಬಾ ಕಡಿಮೆ ಅಥವಾ ಇಲ್ಲ ಎಂದರೂ ತಪ್ಪಿಲ್ಲ.ಅವನು ಯಾವತ್ತು ತನ್ನ ಪತ್ರಿಕೆ ಯಾವುದೋ ವರದಿಯನ್ನು ಮೊದಲು ಪ್ರಕಟಿಸಬೇಕೆಂದು ಎಲ್ಲಾ ಥರದ ಪ್ರಯತ್ನಗಳನ್ನು ಮಾಡುತ್ತಾನೆ.

ಈ ಪತ್ರಿಕೋದ್ಯಮ ಎನ್ನುವುದು ಒಂದು ಆಳವಾದ ಗುಂಡಿಯ ಮೇಲೆ ಸಪೂರವಾದ ಹಗ್ಗದಲ್ಲಿ ನಡೆದಂತೆ ಅನ್ನೋದು ನನ್ನ ಅಭಿಪ್ರಾಯ.ಯಾಕಂದ್ರೆ ಒಬ್ಬ ಪತ್ರಕರ್ತ ತನ್ನ ಪೇಪರಿಗೊಸ್ಕರ ಯಾವ ತ್ಯಾಗಕ್ಕೂ ಸಿದ್ಧನಿರುತ್ತಾನೆ.ಅವನು ಒಳ್ಳೆಯ ವರದಿ ಅಥವಾ ಸುದ್ದಿ ತಂದ್ರೆ ಸರಿ ಇಲ್ಲವೆಂದರೆ ಅವನ ಜೀವನದ ಮುಂಬರುವ ಹಾದಿಗಳಿಗೆ ಅದೇ ಮುಳುವಾಗಿಬಿಡುತ್ತದೆ.


-ದೀಪ್ತಿ
ದ್ವಿತೀಯ ಪತ್ರಿಕೋದ್ಯಮ,ಎಸ್.ಡಿ.ಎಂ ಕಾಲೇಜು
ಉಜಿರೆ

1 comments:

rajuarikeri said...

DURGAPPA.PM
Patrkarta nige rage erlla sada suddigagi kayitir beku,onduriti samaj sudarak alwe ok channagi baridira

Post a Comment