ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿದೆ. ಈ ಬಾರಿ ಚಾತುರ್ಮಾಸ್ಯದಲ್ಲಿ ಶ್ರೀಗಳವರು 'ರಾಮಕಥಾ ವೈಭವ'ವನ್ನು ವೈಶಿಷ್ಟ್ಯಪೂರ್ಣವಾಗಿ ನಡೆಸಿ, ಸಮಸ್ತ ಶಿಷ್ಯವರ್ಗಕ್ಕೆ ತನ್ಮೂಲಕ ರಾಮಾಯಣದ ಪರಿಚಯ ಮಾಡಿಸಿದ್ದು ಒಂದು ಗಮನಾರ್ಹ ಕಾರ್ಯ.


ರಾಮಕಥೆಯನ್ನು ಅನುಭವಿಸಿದರಷ್ಟೇ ಅದರ ಸವಿ ಸವಿಯಲು ಸಾಧ್ಯ. ಅಂತಹ ಅದ್ಭುತ ಪರಿಕಲ್ಪನೆ, ಗುರು ಶಿಷ್ಯವೃಂದದ ಅಪೂರ್ವ ಸಹಭಾಗಿತ್ವ...ಒಟ್ಟಿನಲ್ಲಿ ಅದೊಂದು ಅವಿಸ್ಮರಣೀಯ ಅನುಭವ...


ಅಲ್ಲಿ ಒಂದೆಡೆ ದೇವದುಂದುಬಿಯ ಮೊಳಗು ಇನ್ನೊಂದೆಡೆ .ಸುಮನೋಹರಸಿತಾರವಾದನದ ಅನುರಣನ ವೀಣಾವಾದನಗಳ ಝೇಂಕಾರ, ಗುಡುಗಿನಶಬ್ದಕ್ಕೆ ಸಂವಾದಿಯಾದ ಮೃದಂಗ,ತಬಲಾನಿನಾದ, ಮಂಗಳಕರಪಂಚವಾದ್ಯಗಳು,ಚಿತ್ತಾಕರ್ಷಕವಾದ ಗಾಯನ.


ನೃತ್ಯ,ಕೋಲಾಟ,ದಾಂಡೀನಾಟ್ಯ ಐರಾವತದಲ್ಲಿ ಕುಳಿತುಬಂದು ರಾಮಜನನಕ್ಕೆ ಪುಷ್ಪವೃಷ್ಟಿಮಾಡಿದ ದೇವೇಂದ್ರ,ಆಕಾಶದಿಂದ ನಿರಂತರಪುಷ್ಪವೃಷ್ಟಿ, ಎಲ್ಲೆಡೆ ಪಸರಿಸಿದ ಸುಗಂಧಭರಿತವಾಯು,ಪನ್ನೀರಿನ ಹೂಮಳೆ, ಅಯೋಧ್ಯೆಯ ಪ್ರಜೆಗಳಂತೆ ಕಂಡುಬರುವ ಜನರು,ಇವೆಲ್ಲಕ್ಕೂ ಶಿಖರಪ್ರಾಯವಾಗಿ ಸಭೆಯಲ್ಲಿದ್ದವರೆಲ್ಲ ಸಂತೋಷಭರಿತರಾಗಿ ಹೆಜ್ಜೆಹಾಕುತ್ತ ಪರಸ್ಪರ ಹೂವೆರಚಿಕೊಳ್ಳುತ್ತ ಶ್ರೀರಾಮನಜನನಕಾಲದ ಸಂತಸವನ್ನು ಹಂಚಿಕೊಂಡ ಪರಿ.
ಇದು ನಿನ್ನೆ ಇತಿಹಾಸವು ಮರುಕಳಿಸುವಂತೆ ಅಶೋಕೆಯು ಅಯೋಧ್ಯೆಯಾಗಿ ಪರಿವರ್ತಿತವಾದ ರೀತಿ.ಭಾವುಕತೆಯ ಚರಮಸೀಮೆಯನ್ನು ಮುಟ್ಟಿದ ಶ್ರೀರಾಮಕಥೆಯ ಮಂಗಳಮಹೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಶ್ರೀರಾಮಭಕ್ತರಲ್ಲಿಯೂ ಈ ಸಂದರ್ಭದಲ್ಲಿ ಧನ್ಯತೆಯ ಭಾವವು ತುಂಬಿತುಳುಕುತ್ತಿತ್ತು.

0 comments:

Post a Comment