ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:39 PM

ಕೇಶ ಪುರಾಣ

Posted by ekanasu

ಈ ಕನಸು ಅವಾರ್ಡ್

ಅಂದು ನೀರೆಗಿತ್ತು ಉದ್ದ ಜಡೆ
ಅದಕ್ಕವಳು ಮಾಡುತ್ತಿದ್ದಳು
ಅನುಪಾನ ಎಣ್ಣೆಯ ಲೇಪನ,
ಕೂದಲು ಬೆಳೆಯುತ್ತಿತ್ತು ಸೊಂಪಾಗಿ
ಕೂದಲನ್ನು ತೊಳೆಯಲು
ಬಳಸುತ್ತಿದ್ದಳಂದು,
ಸೀಗೆಪುಡಿ


ಸಮಯ ಆಕೆಯ ಪಾಲಿಗಿತ್ತು
ಆದರೀಗ ನೀರೆಯ ಕೂದಲಿಗೆ
ಕತ್ತರಿ ಪ್ರಯೋಗವಾಗುತ್ತಿದೆ
ಆಕೆ ಸಮಯದಿಂದ ದೂರವಿದ್ದಾಳೆ
ಶ್ಯಾಂಪು, ಡ್ರೈಯರ್ಗಳ
ಹಾವಳಿಯಿಂದ ಇದ್ದ ಮೂರು
ಕೂದಲುಗಳು ಕೂಡಾ ಬಿದ್ದುಹೋಗುತ್ತಿವೆ
ವಿಗ್ಗಳು ತಲೆಯನ್ನು ಅಲಂಕರಿಸುತ್ತಿವೆ...

-ಮಲ್ಲಿಕಾಭಟ್ ಪರಪ್ಪಾಡಿ.

0 comments:

Post a Comment