ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:25 PM

ಅಮ್ಮ

Posted by ekanasu

ಈ ಕನಸು ಅವಾರ್ಡ್

ನನ್ನಮ್ಮ ಎಲ್ಲರಂತಲ್ಲಾ
ಓದಿನ ಗಂಧಗಾಳಿಯಿಲ್ಲ ಆಕೆಗೆ
ಬದುಕಿನ ಅನುಭವದ ಪುಸ್ತಕವೇ
ಅವಳ ಬಂಡವಾಳ...


ಆಕೆ ಸಾಹಿತ್ಯದ ಒಡನಾಡಿಯಲ್ಲ
ಅದರೆ ಬದುಕೇ ಆಕೆಯ ಸಾಹಿತ್ಯ
ದಿನಾ ಓದುತ್ತಿದ್ದಳು ಸಂತೋಷದಿಂದ
ಆ ಸಾಹಿತ್ಯದ ಪದಗಳನ್ನು
ಕಲ್ಲ ಆ ಗುಡ್ಡೆಯೇ ಆಕೆಯ ದೇವಾಲಯ
ಒಪ್ಪೋತ್ತು ಉಂಡು ಮಕ್ಕಳಿಗಾಗಿ ಅನ್ನ
ಉಳಿಸಿದಾಕೆ...

ನೀರೆ ಕಾಣದ ಆ ಕೂದಲು
ಜಿಡ್ಡುಗಟ್ಟಿ ಹೋಗಿದೆ...
ಬಾಚಣಿಗೆಯಂತೂ ಕಂಡೇ ಇಲ್ಲ ಆಕೆ,
ಆಕೆ ಕಂಡಿದ್ದಳು ಬರೇ ನೋವುಂಡ
ಆ ಬದುಕು,
ಮಕ್ಕಳಿಗಾಗಿ ಜೀವಸವೆಸುತ್ತಿದ್ದಳು
ಒಂದು ಕಣ್ಣೀರ ಬಿಂದುವು ಜಾರದಂತೆ...

-ಮಲ್ಲಿಕಾಭಟ್ ಪರಪ್ಪಾಡಿ.


0 comments:

Post a Comment