ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ಪಕ್ವವಾಗದೆ ಹಣ್ಣು ಮರದಿಂದ ಬೀಳುವುದಿಲ್ಲ.ಇಳೆಯಲ್ಲಿ ಧಗೆಯಾಗದೆ ಮೋಡಗಟ್ಟಿ ಮಳೆಸುರಿಯುವುದಿಲ್ಲ.ಲೋಕದ ನಿಯಮವೇ ಹೀಗೆ.ಪ್ರತಿಯೊಂದಕ್ಕೂ ತನ್ನದೇ ಆದ ಕಾಲವಿದೆ.ನಮಗೆ ಬೇಕಾದಾಗ ಸೂಕ್ತವಾದ ಸಮಯವು ಒದಗಿಬರುವುದಿಲ್ಲ.ಅದಕ್ಕಾಗಿ ಕಾಯುವಿಕೆ ಅನಿವಾರ್ಯ.ಈ ನಿಯಮಕ್ಕೆ ಭಗವಂತನೂ ಅಪವಾದವಲ್ಲ.ವಿಶ್ವದಲ್ಲಿ ಲೋಕಪೀಡಕರ ಹಿಂಸೆ ಅತಿಯಾದಾಗ ಸಾಧುಸತ್ಪುರುಷರು ಅತ್ಯಂತಸಂಕಟಕ್ಕೊಳಗಾದಾಗ ಜಗತ್ತೇ ರಾವಣನ ಭೀತಿಯಲ್ಲಿ ತೊಳಲಾಡಿದಾಗ ಮರ್ಯಾದಾಪುರುಷೋತ್ತಮನಾದ ಪ್ರಭು ಶ್ರೀರಾಮಚಂದ್ರ ಭುವಿಗಿಳಿದು ಬಂದ.ದಿವಿಭುವಿಗಳಿಗೆ ಧರ್ಮವೆಂಬ ಅತ್ಯಪರೂಪದ ಸೇತುವೆಯನ್ನು ನಿರ್ಮಿಸಿದ. ಆದರೆ ಶ್ರೀರಾಮನೂ ತನ್ನ ಜನನಕಾಲಕ್ಕಾಗಿ ಕೌಸಲ್ಯೆಯಪುಣ್ಯಗರ್ಭದಲ್ಲಿ ಕಾದ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.


ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ಶ್ರೀರಾಮಕಥಾ ದ ಮಂಗಳೋತ್ಸವದದಿನದಂದು ಶ್ರೀರಾಮಜನನದ ಪುಣ್ಯಕಾಲದಲ್ಲಿ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಸರ್ವಶಕ್ತನಾದ ಭಗವಂತನಿಗೆ ತನಗನುಕೂಲವಾದ ಸಮಯವನ್ನು ಹೊಂದಿಸಿಕೊಳ್ಳಲು ಅಸಾಧ್ಯವೇ ಎಂಬಪ್ರಶ್ನೆಯೇ ಅಸಂಗತ.ಸಹಜತೆ ಪ್ರಕೃತಿಯ ಧರ್ಮ.ಅದಕ್ಕನುಗುಣವಾಗಿಯೇ ಪುರುಷೋತ್ತಮನ ನಡೆ.ಲೋಕಕ್ಕೆ ಜೀವನಶಿಕ್ಷಣವನ್ನು ನೀಡಲೆಂದೇ ಆದ ಅವತಾರದಲ್ಲಿ ಆತ ಎಂದೂ ಅಮಾನುಷತ್ವವನ್ನು,ದೈವಿಕತೆಯನ್ನು ತೋರ್ಪಡಿಸದೆ ಸಾಮಾನ್ಯಮಾನವನಂತೆಯೆ ನಡೆದುಕೊಂಡ.ಆತನ ಜನ್ಮಕಾಲವೇ ಅವನು ಲೋಕೋದ್ಧಾರಕ್ಕೆಂದು ದೇವಲೋಕದಿಂದ ಇಳಿದುಬಂದ ಅಸಾಮಾನ್ಯಶಕ್ತಿಯೆಂದು ತಿಳಿಸುತ್ತದೆ. ನಮ್ಮ ಬದುಕಿನ ಒಳಿತಿಗೆಂದು ಬಂದು ಅನಂತಫಲಗಳನ್ನು ನೀಡಿದ ಆ ಭಗವಂತನಿಗೆ ಈ ಲೋಕದಲ್ಲಿ ಸಿಕ್ಕಿದ್ದು ವನವಾಸ,ಅಪವಾದ, ಬಾಲ್ಯದ,ಯೌವ್ವನದ ಕೆಲವುಸಮಯದ ಸಂತಸವನ್ನು ಬಿಟ್ಟರೆ ಶ್ರೀರಾಮನಜೀವನದಲ್ಲಿ ತುಂಬಿದ್ದು ನೋವು ಮಾತ್ರ ಎಂದು ಹೇಳಿದ ಪೂಜ್ಯಶ್ರೀಗಳು ರಾಮನ ಅವತಾರವಾದದ್ದು ಕೇವಲರಾಕ್ಷಸಸಂಹಾರಕ್ಕಾಗಿಮಾತ್ರವಲ್ಲ.ಮಾನವರಾಗಿ ನಾವು ಹೇಗೆ ಬಾಳಬೇಕೆಂದು ಮಾನವನೂ ಸಾಧನೆಯಿಂದ ಸಹ ಹೇಗೆ ಮಾಧವತ್ವದೆಡೆಗೆ ಸಾಗಬಹುದೆಂದು ತೋರಿಸಿಕೊಡುವುದೂ ಆತನ ಉದ್ದೇಶವಾಗಿತ್ತು ಎಂದು ಹೇಳಿದರು.

ಶ್ರೀರಾಮನನ್ನು ನಮ್ಮ ಹೃದಯದಲ್ಲಿ ತುಂಬಿಕೊಂಡು ಆ ಆನಂದವನ್ನುಅನುಭವಿಸುವುದಕ್ಕಿಂತ ಬೇರೆ ಸುಖ ಈಲೋಕದಲ್ಲಿಲ್ಲ ಎಂದೂ ಅಭಿಪ್ರಾಯಪಟ್ಟರು.ಶ್ರೀಪಾದ ಭಟ್, ಪ್ರೇಮಲತಾ ದಿವಾಕರ್ ವಸುಧಾ ಶರ್ಮಾ , ಇವರ ಗಾಯನ,ಪ್ರಕಾಶರ ವೇಣುವಾದನ,ನರಸಿಂಹ ಮೂರ್ತಿಯವರ ಮೃದಂಗ,ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು ರಾಘವೇಂದ್ರ ಹೆಗಡೆಯವರ ಮರಳುಶಿಲ್ಪ ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ರಾಮಕಥೆಗೆ ಮೆರುಗು ನೀಡಿದವು.

ಹವ್ಯಕಮಹಾಮಂಡಲದ ಮಾತೃಶಾಖೆಯವತಿಯಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು.ಮಾತೆಯರಿಂದ ಸಾಮೂಹಿಕಕುಂಕುಮಾರ್ಚನೆಯು ಸಂಪನ್ನಗೊಂಡಿತಲ್ಲದೆ , ಗಾಯತ್ರೀಭಟ್ಟ ಕರಿಕ್ಕಳ,ಭಾರತೀ ಭಟ್ಟಪುತ್ತೂರು,ವಿಜಯಲಕ್ಷ್ಮಿ ಭಟ್ ಕಾಂಚನ ಹಾಗೂ ಸುಶೀಲಾ ಇವರನ್ನು ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಸಮ್ಮಾನಿಸಲಾಯಿತು.ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು.

ವರದಿ: ಸತ್ಯನಾರಾಯಣ ಶರ್ಮ

0 comments:

Post a Comment