ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:25 PM

ಮನದೊಳಿಲ್ಲ

Posted by ekanasu

ಈ ಕನಸು ಅವಾರ್ಡ್

ಕನಸುಗಳೆಲ್ಲಾ ರಕ್ಕೆ ಬಿಚ್ಚಿ ಹಾರಿದವು
ನಡೆದುದನ್ನೆಲ್ಲವ ಮರೆತು
ಕೊನೆಗೂ ತಲುಪಿದ್ದೆಲ್ಲಿಗೆ
ಗೊತ್ತೇನೋ?
ಅದೇ! ಮತ್ತೆ ನಿನ್ನ ನೆನಪ ಗೂಡಿಗೆ


ನಿನ್ನ ಕವಿತೆಗಾಗಿ ಕಾದು ಕಾದು
ಓದಲು ಹವಣಿಸುತ್ತಿದ್ದೆ!
ಮನಕವಿದ ಇನಿಯನೆ
ಕೊನೆಗೂ ನೀ ಕವಿಯಾದದ್ದು ಹೇಗೆ?
ನನ್ನೀ ಒಳಪ್ರಶ್ನೆಗಳಿಗೆಲ್ಲ
ಉತ್ತರ ನಿಗೂಢವೇ?
ಆ ಸಮಯದ ಹೊತ್ತಿಗೆ
ಅರಿವಿಗೆ ಬಂದಿದ್ದು
ನೀನು ಮನದೊಳಗಿಲ್ಲ
ಹೊರಹೋಗಿದ್ದೀಯಾ ಎಂಬುದು!

- ವಿಸ್ಮಿತ ಎಡಮಂಗಲ
ತೃತೀಯ ಪತ್ರಿಕೋದ್ಯಮ
ಎಸ್. ಡಿ. ಎಂ. ಕಾಲೇಜು ಉಜಿರೆ


0 comments:

Post a Comment