ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:47 PM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ

ಕಳೆದ ಸಂಚಿಕೆಯಿಂದ...

ಅವತ್ತು ಹಪ್ಪಳದ ಕೆಲಸ ಮೌನವಾಗಿಯೇ ನಡೆಯಿತು. ಸಂಜೆ ವಾಸುದೇವರಾಯರು ಬಂದ ಕೂಡಲೆ ಮಕ್ಕಳು ಬೆಳಗ್ಗಿನ ರದ್ಧಾಂತದ ಸುದ್ದಿಯನ್ನು ಅವರ ಕಿವಿಯವರೆಗೂ ತಂದವು. ರುಕ್ಕುವಿಗೆ ಯಾಕೆ ಅಷ್ಟು ಉದ್ದದ ನಾಲಗೆ?! ಎಂದು ಬಿಟ್ಟರು ರಾಯರು. ಈ ಮಾತು ಕೇಳಿ ರುಕ್ಕು ಬಾಯಾರು ಕೊಟ್ಟಿಗೆ ಬಾಗಿಲಲ್ಲಿ ಕುಳಿತು ಬೇಕುಸಾಕೆಂಬಷ್ಟು ಅತ್ತಳು. ಪಾರ್ತಕ್ಕ ಬೇರೆಲ್ಲಿಯೋ ಇದ್ದ ಸಮಯ ಕಂಡು ಗೌರಮ್ಮ ಕೊಟ್ಟಿಗೆ ಹತ್ತಿರ ಹೋಗಿ ಅವಳನ್ನು ಕರೆದು `ಚಂಯ್ಯಾಲಜ್ಜಿಯಂತೆ ಮರುಗುವುದು ಸಾಕು ಮಾರಾಯ್ತಿ. ನಿಂಗೂ ಬೇಡದ್ದು. ಅವರಿಗೆ ಯಾಕೆ ಹೇಳಲಿಕ್ಕೆ ಹೋಗಬೇಕಿತ್ತು ನೀನು? ಅವರೇನು!ನೀನೇನು! ಇರಲಿ, ಹೇಳಿಯಾಯ್ತಲ್ಲ. ಇನ್ನು ಹಾಗೆಲ್ಲ ಮಾಡಬೇಡ. ಅವರು ಬೈಯ್ದರೆಂಬ ಬೇಜಾರು ಬೇಡ. ನಿಂಗೆ ಸಂಬಳಕೊಟ್ಟು ಇಟ್ಟುಕೊಂಡವರು ಯಾರು?ನಾವಲ್ಲವಾ? ನಾವೇನಾದರೂ ನಿನಗೆ ಹೇಳಿದೆವ?


ಒಂದೇ ಮಳೆಗೆ ಕೊಡೆ ಹರಿಯಬೇಡ' - ಅಂತೆಲ್ಲ ನಯಮಾಡಿ ಮಾತಾಡಿ ಎರಡು ಪಾಪು ಕಡಿಯಕ್ಕಿಯನ್ನು ಕೊಟ್ಟು ಕಳಿಸದಿದ್ದರೆ ನಾಳೆ ಬರುತ್ತಾಳೆ ಎಂಬ ಖಂಡಿತ ಎಲ್ಲಿ? ಯಾರಿಗೆ ಬೇಡದಿದ್ದರೂ ತನಗೆ ಜನ ಬೇಕಲ್ಲ. ದಿನಾ ಬೈಯಾಗುವ ಹೊತ್ತಿಗೆ ಹಸಿಹುಲ್ಲು ತರುವ ಕೂಸಿಗೂ ನಾಲ್ಕು ದಾನೆ ಬೇಳೆ,ಸೊಳೆಯ ಚೂರುಗಳು ಸಿಕ್ಕಿದುವು. ಅವನ್ನೆಲ್ಲ ಮುಚ್ಚಿಟ್ಟುಕೊಳ್ಳುವ ಬರದಲ್ಲಿ ಅವಳು ದೋರೆ ಹುಲ್ಲು ಲೆಕ್ಕ ತಪ್ಪಿ ಸ್ವಲ್ಪ ಕಡಿಮೆ ಹಾಕಿದಳೆ? `ಇಲ್ಲವೇ ಇಲ್ಲ. ಯಾವಾಗಲೂ ಹಾಕಿದಷ್ಟೆ. ಇನ್ನಿನ್ನು ದೋಎ ಹುಲ್ಲು ಸಿಗುವುದು ಕಷ್ಟ. ಎಲ್ಲೆಲ್ಲಿಂದಲೋ ತರಬೇಕು. ಇವತ್ತಂತೂ ಸಾಕಾಗಿ ಹೋಯಿತು.

ಇಷ್ಟನ್ನು ಒಟ್ಟು ಮಾಡಲು. ನಿಮ್ಮ ಮನಗೆ ಅಂತ ಇಷ್ಟಾದರೂ ಹಾಕಿದ್ದೇನೆ' - ಎನ್ನುತ್ತಾಳೆ ಕೂಸ. ಮತ್ತೆ ಬಸುರಿ. ಇದು ಎಷ್ಟನೆಯ ಬಸುರೋ.ಯಾವಾಗ ಕಂಡರೂ ಒಂದೋ ಬಸುರಿ . ಇಲ್ಲ ಬಾಣಂತಿ. ಹುಲ್ಲು ತರುವ ಕೆಲಸದೊಂದಿಗೆ ಬಸುರು ಹೊರುವ ಕೆಲಸವೂ. ಮಕ್ಕಳೆಂದರೆ ಅವಳಿಗೆ ಬೇಜಾರಿಲ್ಲ. `ನಾವೇನು ಹೊಟ್ಟೆಗೆ ಹಾಕಬೇಡ ಒಡತಿ? ನೀವೆಲ್ಲ ಇಲ್ಲವೆ? ಹೇಗಾದರೂ ಬದುಕುತ್ತವೆ' - ಎನ್ನುತ್ತಾಳೆ.
ಹಾಗಂತ ಅವಳ ತಮ್ಮನಿಗೆ ದೊಡ್ಡ ಕೆಲಸವಿದೆ. ಅವರ ಜಾತಿಯಲ್ಲಿ ಅವನೊಬ್ಬನೇ ಓದಿದವನು. ಆದರೆ ಇವಳನ್ನು ಇದ್ದಿಯಾ ಸತ್ತಿಯಾ ಅಂತ ಕೇಳುವುದಿಲ್ಲ. ಅವನ ಯೋಗ್ಯತೆಗೆ ತಾನು ಸಾಕೇ? ತಾನು ಅವಳ ಮನೆ ಬಾಗಿಲಿಗೆ ಹೋಗುವವಳೂ ಅಲ್ಲ, ಮಕ್ಕಳನ್ನು ಕಳಿಸುವವಳೂ ಅಲ್ಲ.

ಮೊನ್ನೆ ತಾನೇ ಒಂದು ದಿನ ಅವನು ಯಾವುದೋ ಕೆಲಸದ ನಿಮಿತ್ತ ವಾಸುದೇವರಾಯರ ಮನೆಗೂ ಬಂದಿದ್ದ.ವಾಸುದೇವರಾಯರಿಗೆ ಮುಂಚಿನಿಂದಲೂ ಮಡಿ ಮೈಲಿಗೆ ಕಮ್ಮಿ. ಹಾಗೆ ಪೂರ್ತಿ ಬಿಟ್ಟವರೂ ಅಲ್ಲ.ಹಿಡಿದುಕೊಂಡವರೂ ಅಲ್ಲ. ನಡುವಿನ ದಾರಿ ಅವರದು. ಅವ ಬಂದು ಕುಳಿತ ಸ್ವಲ್ಪ ಹೊತ್ತಿನಲ್ಲೇ ` ಎರಡುಲೋಟ ಕಾಫಿ ಮಾಡಬೇಕಂತೆ' ಎಂದ ಶಿವ ಅಮ್ಮನ ಹತ್ತಿರ ಬಂದು.
`ಯಾರು ಬಂದಿದ್ದಾರೆ ಮಾಣಿ?'
`ನಂಗೊತ್ತಿಲ್ಲಪ್ಪ, ಕರಿ ಕರೀ ಇದ್ದಾರೆ'
ಮಡಿಗೆ ಹಾಕಿದಂತೆ ಬಿಳೀ ಶರಟು ಹಾಕಿದ್ದಾರೆ.'

-ವೈದೇಹಿ

0 comments:

Post a Comment