ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಪಠ್ಯಪುಸ್ತಕಗಳು ಕಾಲಕಾಲಕ್ಕೆ ಸೂಕ್ತ ಬದಲಾವಣೆಗಳನ್ನು ಕಾಣುತ್ತಾ ವರ್ತಮಾನಕ್ಕೆ ಸ್ಪಂದಿಸುವಂತಿರಬೇಕಾಗಿದೆ. ವಿದ್ಯಾರ್ಥಿಗಳನ್ನು ವರ್ತಮಾನಕ್ಕೆ ಸಜ್ಜುಗೊಳಿಸಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವ ಹೇಳಿದರು.
ಅವರು ಶನಿವಾರ ವಿದ್ಯಾಗಿರಿಯಲ್ಲಿ ಆಳ್ವಾಸ್ ಕಾಲೇಜಿನ ಕನ್ನಡವಿಭಾಗ ಮತ್ತು ಮಂಗಳೂರು ವಿ.ವಿ.ಯ ಕನ್ನಡ ಅಧ್ಯಾಪಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಪದವಿ ನೂತನ ಪಠ್ಯಪುಸ್ತಕಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.


ಭಾಷಾ ಅಧ್ಯಾಪಕರಿಗೆ ತರಗತಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ, ಸಂಸ್ಕೃತಿ ಪ್ರೀತಿಯನ್ನು ಹುಟ್ಟಿಸುವ ಮಹತ್ವದ ಜವಾಬ್ದಾರಿ ಇದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿ.ವಿ. ಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಅಭಯಕುಮಾರ್ ಅವರು ಮಂಗಳೂರು ವಿಶ್ವವಿದ್ಯಾಲಯವು ಸಕಾಲಕ್ಕೆ ಪಠ್ಯಪುಸ್ತಕ ನವೀಕರಣೆ ಮತ್ತು ಮುದ್ರಣವನ್ನು ಮಾಡಿ ರಾಜ್ಯದ ವಿ.ವಿ.ಗಳಿಗೆ ಮಾದರಿಯಾಗಿದೆ. ಕನ್ನಡ ಪಠ್ಯಪುಸ್ತಕಗಳನ್ನು ಪ್ರಕಟಿಸುವಾಗ ಗುಣಮಟ್ಟ, ಪ್ರಾದೇಶಿಕ ಸೊಗಡು ಮತ್ತು ಸುಂದರ ವಿನ್ಯಾಸಕ್ಕೆ ವಿಶೇಷ ಗಮನ ನೀಡಲಾಗಿದೆ ಎಂದರು.

ಸಮಾರಂಭದಲ್ಲಿ ಮಂಗಳೂರು ವಿ.ವಿ. ಕಾಲೇಜಿನ ಪ್ರಾಧ್ಯಾಪಕ ಡಾ| ಸತ್ಯನಾರಾಯಣ ಮಲ್ಲಿಪಟ್ನ ಇವರು ಇತ್ತೀಚೆಗೆ ದಿವಂಗತರಾದ ಕನ್ನಡ ಪ್ರಾಧ್ಯಾಪಕ ಫ್ರೊ. ಕೆ.ಜಿ. ನಾರಾಯಣ ಅವರ ಕುರಿತು ಸಂಸ್ಮರಣ ಭಾಷಣ ಮಾಡಿದರು.
ಸಮಾರಂಭದಲ್ಲಿ ಮಂಗಳೂರು ವಿ.ವಿ.ಮಟ್ಟದಲ್ಲಿ ಕನ್ನಡದಲ್ಲಿ ಅತ್ಯದಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ| ನಿಕೇತನ, ಡಾ| ಪ್ರಕಾಶ್ಚಂದ್ರ ಶಿಶಿಲ ಪ್ರಶಸ್ತಿ ಪಡೆದವರ ವಿವರ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಚಂದ್ರಶೇಖರ ಗೌಡ ಉಪಸ್ಥಿತರಿದ್ದರು. ವಿಕಾಸದ ಅಧ್ಯಕ್ಷ ಫ್ರೊ. ಕೃಷ್ಣಮೂರ್ತಿ ಸ್ವಾಗತಿಸಿದರು. ಡಾ| ಧನಂಜಯ ಕುಂಬ್ಳೆ ವಂದಿಸಿದರು. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.


0 comments:

Post a Comment