ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಸುರತ್ಕಲ್: ಪೆರ್ಮುದೆ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಯರ್ ಕಟ್ಟೆಯಿಂದ ಪೆರ್ಮುದೆಗೆ ಸಾಗುವ ಸುಮಾರು 3 ಕಿ.ಮೀ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಎಸ್ಈಝೆಡ್ ಮತ್ತು ಗುತ್ತಿಗೆದಾರರ ಆಂತರಿಕ ಕಲಹದಿಂದ ಇಲ್ಲಿನ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಪೆರ್ಮುದೆ ಗ್ರಾಮ ಪಂಚಾಯತ್ ನ ಸರ್ವ ಸದಸ್ಯರಿಂದ ಅ. 17 ಸೋಮವಾರ ಒಂದು ದಿನದ ರಸ್ತೆ ತಡೆ - ಪ್ರತಿಭಟನೆ ನಡೆಯಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಎಂಎಸ್ಈಝೆಡ್ಗೆ ಸಂಬಂಧಪಟ್ಟ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಈ ರಸ್ತೆಯನ್ನು ಸಾರ್ವಜನಿಕರ ಮನವಿಯ ಮೇರೆಗೆ ಕಳೆದ ವರ್ಷ ಅಗಲಗೊಳಿಸಿ ಹೊಂಡಗಳನ್ನು ಮುಚ್ಚಿ ದುರಸ್ಥಿಯನ್ನು ಎಂಎಸ್ಈಝೆಡ್ ಮಾಡಿತ್ತು. ಈ ಬಾರಿ ಮಳೆಯಿಂದಾಗ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ರಸ್ತೆ ದುರಸ್ಥಿ ಮಾಡುವಂತೆ ಎಂಎಸ್ಈಝೆಡ್ ಅಧಿಕಾರಿಗಳನ್ನು ವಿನಂತಿಸಿದಾಗ ಈ ಬಗ್ಗೆ ಈಗಾಗಲೇ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದ್ದು ಅವರು ರಸ್ತೆ ರಿಪೇರಿಯ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆಂದು ಪೆರ್ಮುದೆ ಗ್ರಾಮಪಂಚಾಯತ್ ಸದಸ್ಯ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ. ಎಂಎಸ್ಈಝೆಡ್ ಮತ್ತು ಗುತ್ತಿಗೆದಾರರ ನಡುವಿನ ಶೀತಲ ಸಮರದಿಂದ ಸಾರ್ವಜನಿಕರು ತೊಂದರಗೊಳಗಾಗಿದ್ದು ಇದನ್ನು ಪ್ರತಿಭಟಿಸಿ ರಸ್ತೆ ದುರಸ್ಥಿಮಾಡುವಂತೆ ಒತ್ತಾಯಿಸಿ ಒಂದು ದಿನದ ರಸ್ತೆತಡೆಯನ್ನು ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವರದಿ: ರವೀಂದ್ರ ಶೆಟ್ಟಿ ಕುತ್ತೆತ್ತೂರು.

0 comments:

Post a Comment