ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:58 PM

ಮೌನಯಾನ...

Posted by ekanasu

ಈ ಕನಸು ಅವಾರ್ಡ್
ಬದುಕೆಂಬ ಯಾನದಲ್ಲಿ
ನಾ ಆದೇ ಮೌನಿ...
ಕಷ್ಟಗಳ ಸುತ್ತೋಲೆಯಲ್ಲಿ
ನರಳಿ ನಲುಗಲಿಲ್ಲ
ಅಲ್ಲಿರುವ ತತ್ವಗಳ
ಅರಿತು ಮೌನಿಯಾದೇ..

ಮಾತು ಮರೆಯಲ್ಲಿ
ಆದರೆ ಮಾತನಾಡುವುದನ್ನೇ
ನಿಲ್ಲಿಸಿ ಮೌನಿಯಾದೆ...
ಮೌನದೊಳಗಿರುವ ಅಗಾಧ
ನೋವುಗಳೊಳಗೆ ನಲಿದಾಡಿದೆ
ಆ ಭಾವಗಳೆ ಇಂದು
ಕವನವಾಗಿ ನಾ
ಲೇಖನಿಯ ಜೊತೆಗಾರಳಾದೆ...
ನಾ ಮನಸಾರೆ ಮೌನಿಯಾದೆ..

-ಮಲ್ಲಿಕಾಭಟ್ ಪರಪ್ಪಾಡಿ

0 comments:

Post a Comment